ನವದೆಹಲಿ: ಉಕ್ಕು ಮತ್ತು ಅಲ್ಯೂಮಿನಿಯಂನಂತಹ ಭಾರತೀಯ ಉತ್ಪನ್ನಗಳ ಮೇಲೆ ವಾಷಿಂಗ್ಟನ್ ವಿಧಿಸಿರುವ ಹೆಚ್ಚಿನ ಸುಂಕಗಳಿಗೆ ಪ್ರತಿಕ್ರಿಯೆಯಾಗಿ ಬಾದಾಮಿ, ಬೇಳೆಕಾಳುಗಳು ಮತ್ತು ಆಕ್ರೋಡು ಸೇರಿದಂತೆ 28 ಯುಎಸ್ ಉತ್ಪನ್ನಗಳಿಗೆ ಕಸ್ಟಮ್ಸ್ ಸುಂಕವನ್ನು ಹೆಚ್ಚಿಸುವುದಾಗಿ ಭಾರತ ಶನಿವಾರ ಪ್ರಕಟಿಸಿದೆ.
ಹೆಚ್ಚಿದ ಕಸ್ಟಮ್ಸ್ ಸುಂಕ ಭಾನುವಾರದಿಂದ ಜಾರಿಗೆ ಬರಲಿದೆ ಎಂದು ಅಧಿಕೃತ ಅಧಿಸೂಚನೆ ತಿಳಿಸಿದೆ.ಈ ಕ್ರಮದಿಂದಾಗಿ 28 ವಸ್ತುಗಳನ್ನು ಮಾಡುವ ಅಮೆರಿಕಾದ ರಫ್ತುದಾರರಿಗೆ ತೊಂದರೆಯಾಗಲಿದೆ. ಏಕೆಂದರೆ ಅವರು ಹೆಚ್ಚಿನ ಸುಂಕವನ್ನು ಪಾವತಿಸಬೇಕಾಗುತ್ತದೆ ಅಲ್ಲದೆ ಆ ವಸ್ತುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ದುಬಾರಿಯಾಗುತ್ತವೆ
ತನ್ನ ಜೂನ್ 30, 2017 ರ ಅಧಿಸೂಚನೆಯನ್ನು ತಿದ್ದುಪಡಿ ಮಾಡಿ, ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಶನಿವಾರದ ಅಧಿಸೂಚನೆಯಲ್ಲಿ "ಯುಎಸ್ಎಯಿಂದ ರಫ್ತು ಮಾಡಿದ 28 ನಿರ್ದಿಷ್ಟ ಸರಕುಗಳ ಮೇಲೆ ಪ್ರತೀಕಾರದ ಸುಂಕವನ್ನು ಹೇರಲಿದೆ ಎನ್ನಲಾಗಿದೆ. ಅಸ್ತಿತ್ವದಲ್ಲಿರುವ ಎಂಎಫ್ಎನ್ ದರ ಉಳಿದೆಲ್ಲ ದೇಶಗಳಿಗೆ ಯಥಾ ರೀತಿ ಮುಂದುವರೆಯಲಿದೆ.
ಈ ಮೊದಲು ಈ ಪಟ್ಟಿಯಲ್ಲಿ 29 ಸರಕುಗಳು ಇದ್ದವು ಆದರೆ ಭಾರತವು ಸೀಗಡಿಗಳನ್ನು ಈ ಪಟ್ಟಿಯಿಂದ ತೆಗೆದುಹಾಕಿದೆ. ಇಂತಹ ಆಮದುಗಳಿಂದ ಭಾರತಕ್ಕೆ ಸುಮಾರು 217 ಮಿಲಿಯನ್ ಡಾಲರ್ ಹೆಚ್ಚುವರಿ ಆದಾಯ ಸಿಗಲಿದೆ ಎನ್ನಲಾಗಿದೆ. ಉಕ್ಕು ಮತ್ತು ಅಲ್ಯೂಮಿನಿಯಂ ಉತ್ಪನ್ನಗಳ ಮೇಲೆ ಕಸ್ಟಮ್ಸ್ ಸುಂಕವನ್ನು ಗಮನಾರ್ಹವಾಗಿ ಹೆಚ್ಚಿಸುವ ಅಮೆರಿಕದ ನಿರ್ಧಾರಕ್ಕೆ ಪ್ರತೀಕಾರವಾಗಿ ಶುಂಕ ವಿಧಿಸಲು ಸರ್ಕಾರ ಜೂನ್ 21, 2018 ರಂದು ನಿರ್ಧರಿಸಿತು.
ಅಮೆರಿಕ ಕಳೆದ ವರ್ಷ ಮಾರ್ಚ್‌ನಲ್ಲಿ ಉಕ್ಕಿನ ಮೇಲೆ ಶೇ 25 ರಷ್ಟು ಸುಂಕ ಮತ್ತು ಅಲ್ಯೂಮಿನಿಯಂ ಉತ್ಪನ್ನಗಳಿಗೆ ಶೇ 10 ರಷ್ಟು ಆಮದು ಸುಂಕ ವಿಧಿಸಿತ್ತು. ಈ ಮೊದಲು ಈ ಸರಕುಗಳ ಮೇಲೆ ಯಾವುದೇ ಶುಂಕ ಇರಲಿಲ್ಲ. ಭಾರತವು ಯುಎಸ್ಗೆ ಈ ವಸ್ತುಗಳನ್ನು ರಫ್ತು ಮಾಡುವ ಪ್ರಮುಖ ದೇಶಗಳಲ್ಲಿ ಒಂದಾಗಿರುವುದರಿಂದ, ಈ ಕ್ರಮವು ದೇಶೀಯ ಉಕ್ಕು ಮತ್ತು ಅಲ್ಯೂಮಿನಿಯಂ ಉತ್ಪನ್ನಗಳ ಮೇಲೆ ಸುಮಾರು 240 ಮಿಲಿಯನ್ ಡಾಲರ್ಗಳಷ್ಟು ಆದಾಯವನ್ನು ಹೊಂದಿದೆ.
ಸಾಮಾನ್ಯೀಕೃತ ವ್ಯವಸ್ಥೆಗಳ ಆದ್ಯತೆ (ಜಿಎಸ್ಪಿ) ಕಾರ್ಯಕ್ರಮದಡಿ ಭಾರತೀಯ ರಫ್ತುದಾರರಿಗೆ ರಫ್ತು ಪ್ರೋತ್ಸಾಹವನ್ನು ಹಿಂತೆಗೆದುಕೊಳ್ಳುವ ಅಮೆರಿಕದ ನಿರ್ಧಾರ ಜೂನ್ 5 ರಿಂದ ಜಾರಿಗೆ ಬಂದಿದೆ. ಈ ಹಿನ್ನಲೆಯಲ್ಲಿ ಭಾರತ ಅಮೆರಿಕಾದ ಹಲವಾರು ಸರಕುಗಳ ಮೇಲೆ ಹೆಚ್ಚಿನ ಸುಂಕವನ್ನು ಸೂಚಿಸಿದೆ.