ಬಾಯಾರಿ ಬಾಟಲಿ ನೀರು ಕುಡಿದ ಕೋಲಾ ಕರಡಿ, ವೈರಲ್ ಆಯ್ತು ವೀಡಿಯೋ!

ಈ ಘಟನೆ ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ ನಡೆದಿದೆ.

Updated: Jan 2, 2019 , 05:35 PM IST
ಬಾಯಾರಿ ಬಾಟಲಿ ನೀರು ಕುಡಿದ ಕೋಲಾ ಕರಡಿ, ವೈರಲ್ ಆಯ್ತು ವೀಡಿಯೋ!

ಬಾಯಾರಿದ ಕೋಲಾ ಕರಡಿಗೆ ಮಹಿಳೆಯೊಬ್ಬರು ಬಾಟಲಿಯಲ್ಲಿ ನೀರು ಕುಡಿಸಿದ ಮನಕಲಕುವ ವೀಡಿಯೋವೊಂದು ಇದೀಗ ಇಂಟರ್ನೆಟ್'ನಲ್ಲಿ ಸಖತ್ ವೈರಲ್ ಆಗಿದೆ.

ಮರ ಹತ್ತುತ್ತಿದ್ದ ಕೋಲಾ ಕರಡಿಯೊಂದನ್ನು ಕಂಡ ಮಹಿಳೆಯೊಬ್ಬರು ಅದನ್ನು ತಡೆದು ನೀರಿನ ಬಾಟಲಿಯನ್ನು ಅದರ bai ಹಿಡಿದಿದ್ದಾರೆ. ಕೂಡಲೇ ಬಾಟಲ್ ಬಳಿ ಬಂದ ಕೋಲಾ ಕರಡಿ ಗಟಗಟನೆ ನೀರನ್ನು ಕುಡಿದು ಬಾಯಾರಿಕೆ ನೀಗಿಸಿಕೊಂಡಿದೆ. ಈ ಘಟನೆ ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ ನಡೆದಿದ್ದು, ನೀರು ಕುಡಿಸಿದ ಮಹಿಳೆ ಚಾನ್ಟೆಲ್ಲಾ ಲೌರಿ ತಮ್ಮ ಫೇಸ್ಮ ಬುಕ್'ನಲ್ಲಿ ಈ ವೀಡಿಯೋ ಶೇರ್ ಮಾಡಿದ್ದಾರೆ. ಸದ್ಯ ಈ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಆಸ್ಟ್ರೇಲಿಯಾದಲ್ಲಿ ಕಳೆದ ವಾರದಲ್ಲಿ ತೀವ್ರತರವಾದ ಉಷ್ಣಾಂಶ ಎದುರಿಸಿದೆ. ಬೇಸಿಗೆಯಲ್ಲಿ ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ಉಷ್ಣಾಂಶ ಇರುವುದು ಸಾಮಾನ್ಯ. ಆದರೆ, ಈ ಬಾರಿ ಸಾಮಾನ್ಯ ಉಷ್ಣಾಂಶಕ್ಕಿಂತ ಹೆಚ್ಚಾಗಿದೆ.