ಇತರ ದೇಶಗಳಂತೆ ಭಾರತದಲ್ಲಿಯೂ ಮತ್ತೆ ಲಾಕ್‌ಡೌನ್ ಜಾರಿಯಾಗಲಿದೆಯೇ?

ದೇಶದಲ್ಲಿ ಹೆಚ್ಚುತ್ತಿರುವ ಕರೋನಾವೈರಸ್ ಪ್ರಕರಣಗಳಿಂದಾಗಿ ಡಿಸೆಂಬರ್ 1 ರಿಂದ ದೇಶದಲ್ಲಿ ಮತ್ತೆ ಲಾಕ್‌ಡೌನ್ ಜಾರಿಗೆ ಬರಲಿದೆ ಎಂಬ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

Last Updated : Nov 13, 2020, 05:57 PM IST
  • ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಹಲವು ರೀತಿಯ ವದಂತಿಗಳು ಮತ್ತು ನಕಲಿ ಸುದ್ದಿಗಳು ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗಿ ಬಿಡುತ್ತವೆ.
  • ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಾಗಿ ಲಾಕ್‌ಡೌನ್ ಬಗ್ಗೆ ವದಂತಿಗಳು ಹರಿದಾಡುತ್ತಿವೆ.
  • ಡಿಸೆಂಬರ್ 1 ರಿಂದ ರಾಷ್ಟ್ರವ್ಯಾಪಿ ಮತ್ತೆ ಲಾಕ್‌ಡೌನ್ ಜಾರಿಯಾಗಲಿದೆ ಎಂದು ಹರಿದಾಡುತ್ತಿರುವ ಸುದ್ದಿ ಹಲವರ ನಿದ್ದೆಗೆಡಿಸಿದೆ.
ಇತರ ದೇಶಗಳಂತೆ ಭಾರತದಲ್ಲಿಯೂ ಮತ್ತೆ ಲಾಕ್‌ಡೌನ್ ಜಾರಿಯಾಗಲಿದೆಯೇ? title=

ನವದೆಹಲಿ: ಇತ್ತೀಚಿನ ಮಾಹಿತಿಯ ಪ್ರಕಾರ ಒಂದೇ ದಿನದಲ್ಲಿ 44,879 ಹೊಸ ಪ್ರಕರಣಗಳು (ಕೋವಿಡ್ -19) ವರದಿಯಾದ ನಂತರ, ದೇಶದಲ್ಲಿ ಕರೋನಾ ಸೋಂಕು ಪ್ರಕರಣಗಳು ಶುಕ್ರವಾರ 87.28 ಲಕ್ಷಕ್ಕೆ ಏರಿದೆ. ಅದೇ ಸಮಯದಲ್ಲಿ 81,15,580 ಜನರು ಗುಣಮುಖರಾಗಿದ್ದಾರೆ. ಇದರೊಂದಿಗೆ ರೋಗಿಗಳ ಚೇತರಿಕೆಯ ಪ್ರಮಾಣವು ಶೇಕಡಾ 92.97ಕ್ಕೆ ಏರಿದೆ. ಏತನ್ಮಧ್ಯೆ ಭಾರತದಲ್ಲಿ ಮತ್ತೊಮ್ಮೆ ಲಾಕ್‌ಡೌನ್ ಜಾರಿಗೊಳಿಸಬಹುದು ಎಂಬ ವರದಿಗಳು ಹರಿದಾಡುತ್ತಿವೆ. 

ಕೋವಿಡ್ -19 (Covid-19) ಸಾಂಕ್ರಾಮಿಕ ಸಮಯದಲ್ಲಿ ಹಲವು ರೀತಿಯ ವದಂತಿಗಳು ಮತ್ತು ನಕಲಿ ಸುದ್ದಿಗಳು ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗಿ ಬಿಡುತ್ತವೆ. ಈ ಹಿನ್ನಲೆಯಲ್ಲಿ ಕರೋನಾಗೆ ಸಂಬಂಧಿಸಿದಂತೆ ಯಾವುದೇ ವಿಷಯವನ್ನು ಅಧಿಕೃತವಾಗಿ ಘೋಷಿಸುವವರೆಗೂ ಇಂತಹ ವದಂತಿಗಳನ್ನು ನಂಬಬೇಡಿ ಎಂದು ಸರ್ಕಾರ ಆಗಾಗ್ಗೆ ಹೇಳುತ್ತಲೇ ಇರುತ್ತದೆ. ಇತ್ತೀಚೆಗೆ ದೇಶದಲ್ಲಿ ಕರೋನಾವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಡಿಸೆಂಬರ್ 1 ರಿಂದ ಮತ್ತೆ ಲಾಕ್‌ಡೌನ್ (Lockdown) ಆಗಲಿದೆ ಎಂಬ ವರದಿಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಏತನ್ಮಧ್ಯೆ ಲಾಕ್‌ಡೌನ್ ಮತ್ತೆ ಜಾರಿಯಾಗಲಿದೆಯೇ ಎಂಬ ಪ್ರಶ್ನೆ ಹಲವರ ಮನಸ್ಸಿನಲ್ಲಿದೆ. ಇದರ ಸತ್ಯಾಸತ್ಯತೆ ಬಗ್ಗೆ ತಿಳಿಯಲು ಮುಂದೆ ಓದಿ...

Pfizer corona vaccine: ಮೈನಸ್ 70 ಡಿಗ್ರಿ ಸೆಲ್ಸಿಯಸ್ ನಲ್ಲಿ ಇಟ್ಟರೆ ಮಾತ್ರ ಈ ಲಸಿಕೆ ಸುರಕ್ಷಿತ..!

ಪಿಐಬಿಯ ಫ್ಯಾಕ್ಟ್ ಚೆಕ್ ತಂಡ ಈ ಟ್ವೀಟ್ ಬಗ್ಗೆ ತನಿಖೆ ನಡೆಸಿದೆ :
ಈ ವೈರಲ್ ಟ್ವೀಟ್ ಅನ್ನು ತನಿಖೆ ಮಾಡಿದಾಗ ಈ ಮಾಹಿತಿಯು ಸುಳ್ಳು ಎಂದು ತಿಳಿದುಬಂದಿದೆ. ಈ ನಕಲಿ ಟ್ವೀಟ್ ಅನ್ನು ಪಿಐಬಿ ಫ್ಯಾಕ್ಟ್ ಚೆಕ್ ತಂಡವು ತನಿಖೆ ಮಾಡಿದೆ. ಪಿಐಬಿ ಫ್ಯಾಕ್ಟ್-ಚೆಕ್ ತಂಡದ ಪ್ರಕಾರ ಸರ್ಕಾರವು ಅಂತಹ ಯಾವುದೇ ಘೋಷಣೆ ಮಾಡಿಲ್ಲ. ಪಿಐಬಿಯ ಫ್ಯಾಕ್ಟ್ ಚೆಕ್ ತಂಡವು ಈ ಟ್ವೀಟ್ ಮಾರ್ಫೆಡ್ (Morphed) ಆಗಿದೆ ಮತ್ತು ಅಂತಹ ಯಾವುದೇ ನಿರ್ಧಾರವನ್ನು ಕೈಗೊಳ್ಳುವ ಬಗ್ಗೆ ಸರ್ಕಾರ ಚಿಂತಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ. 

UNICEF Alert:ಮಾತನಾಡುವುದು ಹಾಗೂ ಉಸಿರಾಟದಿಂದಲೂ ಕೊರೊನಾ ಹರಡುತ್ತದೆ

ಅಂತರ್ಜಾಲದಲ್ಲಿ ನಕಲಿ ಸುದ್ದಿ ಮತ್ತು ವದಂತಿಗಳನ್ನು ತಡೆಗಟ್ಟಲು ಪತ್ರಿಕಾ ಮಾಹಿತಿ ಬ್ಯೂರೋ (ಪಿಐಬಿ) 2019 ರ ಡಿಸೆಂಬರ್‌ನಲ್ಲಿ ಈ ಸತ್ಯ ಪರಿಶೀಲನಾ ವಿಭಾಗವನ್ನು ಪ್ರಾರಂಭಿಸಿತು. ಸರ್ಕಾರದ ನೀತಿಗಳು ಮತ್ತು ಯೋಜನೆಗಳಿಗೆ ಸಂಬಂಧಿಸಿದ ಅಂತರ್ಜಾಲದಲ್ಲಿ ಹರಡಿರುವ ತಪ್ಪು ಮಾಹಿತಿಯನ್ನು ನಿಗ್ರಹಿಸುವುದು ಇದರ ಉದ್ದೇಶ.

Trending News