ರೋಹಿಂಗ್ಯಾ ಸಮಸ್ಯೆಗೆ ಯಾವುದೇ ಮ್ಯಾಜಿಕ್ ಪರಿಹಾರ ಇಲ್ಲ- ವಿಶ್ವಸಂಸ್ಥೆ

   

Last Updated : Apr 29, 2018, 06:41 PM IST
ರೋಹಿಂಗ್ಯಾ ಸಮಸ್ಯೆಗೆ ಯಾವುದೇ ಮ್ಯಾಜಿಕ್ ಪರಿಹಾರ ಇಲ್ಲ- ವಿಶ್ವಸಂಸ್ಥೆ  title=
ಸಂಗ್ರಹ ಚಿತ್ರ

ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಭಾನುವಾರ ರೋಹಿಂಗ್ಯ ಶಿಬಿರಕ್ಕೆ ಭೇಟಿ ನೀಡಿದ ಬಳಿಕ ಇದಕ್ಕೆ ಯಾವುದೇ ಮ್ಯಾಜಿಕ್ ಪರಿಹಾರವಿಲ್ಲ ಎಂದು ತಿಳಿಸಿದೆ.

ವಿಶ್ವಸಂಸ್ಥೆಯ ಶಾಶ್ವತ ಸದಸ್ಯ ರಾಷ್ಟ್ರಗಳಾದ ಚೀನಾ, ಫ್ರಾನ್ಸ್, ರಷ್ಯಾ, ಯುಕೆ ಮತ್ತು ಯು.ಎಸ್ ಮತ್ತು 10 ಇತರ ಶಾಶ್ವತ ಸದಸ್ಯರ ಪ್ರತಿನಿಧಿಗಳನ್ನೊಳಗೊಂಡ ಭದ್ರತಾಮಂಡಳಿ ತಂಡವು ರೋಹಿಂಗ್ಯಾ ನಿರಾಶ್ರಿತರ ಸ್ಥಿತಿಯನ್ನು ಅರಿಯಲು ಬಾಂಗ್ಲಾದೇಶದ ಕುಟ್ಪಾಪೋಂಗ್ ನಿರಾಶ್ರಿತರ ಶಿಬಿರಕ್ಕೆ ಭೇಟಿ ನೀಡಿತು.ಇದೇ ವೇಳೆ ತಂಡವು ಬಾಂಗ್ಲಾದೇಶದ ಬಿಕ್ಕಟ್ಟಿನ ಬಗ್ಗೆ ಸ್ಥಳೀಯ ಆಡಳಿತದ ಪ್ರತಿನಿಧಿಗಳ ಮೂಲಕ ಚರ್ಚಿಸಿತು.

ನಂತರ ಪ್ರತಿಕ್ರಿಯಿಸಿರುವ ಭದ್ರತಾ ಮಂಡಳಿಯು ರೋಹಿಂಗ್ಯಾ ಸಮಸ್ಯೆ ಯಾವುದೇ  ರೀತಿಯ ಮ್ಯಾಜಿಕ್ ಪರಿಹಾರ ಇಲ್ಲವೆಂದು ತಿಳಿಸಿದೆ. ಮಯನ್ಮಾರ್ ಅದ ರಾಖಿನೆ ಪ್ರಾಂತ್ಯದಲ್ಲಿ ಬೌದ್ಧ ಧರ್ಮ ಮತ್ತು ರೋಹಿಂಗ್ಯಾ ಜನರ ನಡುವೆ ಜನಾಂಗೀಯ ದಾಳಿ ನಡೆದು ಸುಮಾರು 700,000 ಅಧಿಕ ರೋಹಿಂಗ್ಯಾ ಸಮುದಾಯ  ಬಾಂಗ್ಲಾದೇಶ ಮತ್ತು ಭಾರತಕ್ಕೆ ವಲಸೆ ಬಂದಿತ್ತು. ಈಗ ರೋಹಿಂಗ್ಯಾ ಸಮುದಾಯು ವಿಶ್ವ ವೇದಿಕೆಯ ಮೂಲಕ ಇದಕ್ಕೆ ಪರಿಹಾರ ಕಂಡುಕೊಂಡ ಬೇಕೆಂದು ವಿನಂತಿಸಿಕೊಂಡಿದೆ. ಆದರೆ, ಈಗ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಇದಕ್ಕೆ ಯಾವುದೇ ರೀತಿಯ ಮ್ಯಾಜಿಕ್ ಪರಿಹಾರವಿಲ್ಲ ಎಂದು ತಿಳಿಸಿದೆ.

Trending News