Corona Crisisi: ಪಾಕ್ ಪ್ರಧಾನಿ ಮುಂದಿದೆ ಎರಡು ದೊಡ್ಡ ಸವಾಲುಗಳು

ನಾವು ಅಮೆರಿಕ ಮತ್ತು ಯುರೋಪಿನಂತೆ ಶ್ರೀಮಂತರಲ್ಲ, ನಾವು ಕರೋನಾದಿಂದ ತಪ್ಪಿಸಿಕೊಂಡರೆ ನಮ್ಮ ಜನರು ಹಸಿವಿನಿಂದ ಸಾಯುತ್ತಾರೆ.

Last Updated : Mar 18, 2020, 08:09 AM IST
Corona Crisisi: ಪಾಕ್ ಪ್ರಧಾನಿ ಮುಂದಿದೆ ಎರಡು ದೊಡ್ಡ ಸವಾಲುಗಳು title=

ಇಸ್ಲಾಮಾಬಾದ್: ಕೊರೋನವೈರಸ್ ಹಾನಿಯ ಬಗ್ಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್(Imran Khan) ಕಳವಳ ವ್ಯಕ್ತಪಡಿಸಿದರು. ನಾವು ತುಂಬಾ ಕಷ್ಟದ ಸಮಯಗಳನ್ನು ಎದುರಿಸುತ್ತಿದ್ದೇವೆ. ನಾವು ಅಮೆರಿಕ ಮತ್ತು ಯುರೋಪಿನಂತೆ ಶ್ರೀಮಂತರಲ್ಲ, ನಾವು ಕರೋನಾದಿಂದ ತಪ್ಪಿಸಿಕೊಂಡರೆ ನಮ್ಮ ಜನರು ಹಸಿವಿನಿಂದ ಸಾಯುತ್ತಾರೆ  ಎಂದು ಇಮ್ರಾನ್ ಹೇಳಿದರು.

"ವಿಮಾನ ನಿಲ್ದಾಣದಲ್ಲಿ ಇಲ್ಲಿಯವರೆಗೆ 9 ಲಕ್ಷ ಜನರನ್ನು ಪರೀಕ್ಷಿಸಲಾಗಿದೆ. ಕರೋನಾ ವೈರಸ್ ಸೋಂಕಿತ ರೋಗಿಯ ಮೊದಲ ಪ್ರಕರಣ ಫೆಬ್ರವರಿ 26 ರಂದು ಪಾಕಿಸ್ತಾನ(Pakistan)ದಲ್ಲಿ ಬಂದಿತು. ನಾವು ಬಹಳ ಕಷ್ಟದ ಸಮಯಗಳನ್ನು ಎದುರಿಸಿದ್ದೇವೆ" ಎಂದು ಇಮ್ರಾನ್ ಖಾನ್ ಬೇಸರ ವ್ಯಕ್ತಪಡಿಸಿದ್ದಾರೆ.

"ನಮ್ಮ ಸ್ಥಿತಿ ಅಮೆರಿಕ ಮತ್ತು ಯುರೋಪಿನಂತೆಯೇ ಇಲ್ಲ. ನಾವು ಒಂದು ಕಡೆ ಕರೋನಾ ವೈರಸ್‌ಗೆ ಹೆದರಿ ಹೋದರೆ, ನಮ್ಮ ಜನರು ಹಸಿವಿನಿಂದ ಸಾಯುತ್ತಾರೆ" ಎಂದವರು ತಿಳಿಸಿದ್ದಾರೆ.

ಕರೋನಾ ವೈರಸ್ (CoronaVirus)  ತಡೆಗಟ್ಟಲು ತಮ್ಮ ಸರ್ಕಾರದೊಂದಿಗೆ ಸಹಕರಿಸಬೇಕೆಂದು ಇಮ್ರಾನ್ ಪಾಕಿಸ್ತಾನದ ಜನರಿಗೆ ಮನವಿ ಮಾಡಿದರು. ಅಲ್ಲಿನ ಜನರು ಸರ್ಕಾರವನ್ನು ಬೆಂಬಲಿಸಿದ್ದರಿಂದ ಮಾತ್ರ ಚೀನಾ ಕರೋನಾ ವಿರುದ್ಧದ ಯುದ್ಧವನ್ನು ಗೆದ್ದಿತು ಎಂದು ಇಮ್ರಾನ್ ಹೇಳಿದ್ದಾರೆ.

ಇಮ್ರಾನ್ ಖಾನ್ ಮುಂದಿರುವ ಎರಡು ಸವಾಲುಗಳು:
ಪಾಕಿಸ್ತಾನದಲ್ಲಿ ಕರೋನಾದಿಂದ ಬಲಿಯಾದವರ ಸಂಖ್ಯೆ 237 ತಲುಪಿದೆ. ಪಾಕಿಸ್ತಾನದ ಆರ್ಥಿಕತೆಯು ಅತ್ಯಂತ ಕೆಟ್ಟ ಹಂತದ ಮೂಲಕ ಸಾಗುತ್ತಿದೆ, ಅಂತಹ ಪರಿಸ್ಥಿತಿಯಲ್ಲಿ, ಇಮ್ರಾನ್ ಖಾನ್ ಮುಂದೆ ಎರಡು ದೊಡ್ಡ ಸವಾಲುಗಳಿವೆ. ಒಂದು ಕರೋನಾ ವಿರುದ್ಧ ಹೋರಾಡುವುದು, ಇನ್ನೊಂದು ಪಾಕಿಸ್ತಾನದ ಜನರ ಹಸಿವು ನೀಗಿಸುವುದು.

ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಒಟ್ಟು 172 ಕರೋನಾ ರೋಗಿಗಳು ಪತ್ತೆಯಾಗಿದ್ದಾರೆ. ಪಾಕಿಸ್ತಾನದ ಪಂಜಾಬ್‌ನಲ್ಲಿ 26, ಖೈಬರ್ ಪಖ್ತುನ್ವಾದಲ್ಲಿ 16, ಬಲೂಚಿಸ್ತಾನದಲ್ಲಿ 16, ಗಿಲ್ಗಿಟ್‌ನಲ್ಲಿ 5, ಬಾಲ್ಟಿಸ್ತಾನದಲ್ಲಿ 5 ಮತ್ತು ಇಸ್ಲಾಮಾಬಾದ್‌ನಲ್ಲಿ 2 ರೋಗಿಗಳು ಪತ್ತೆಯಾಗಿದ್ದಾರೆ.

Trending News