PM Modi To Preside Over UNSC Meeting: UNSC ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಇತಿಹಾಸ ಬರೆಯಲು ಹೊರಟ PM Modi!

UN Security Council Meeting: ಈ ಕುರಿತು ಹೇಳಿಕೆ ನೀಡಿರುವ ವಿಶ್ವಸಂಸ್ಥೆಯಲ್ಲಿ ಭಾರತದ ಮಾಜಿ ಖಾಯಂ ಪ್ರತಿನಿಧಿಯಾಗಿದ್ದ ಸೈಯ್ಯದ್ ಅಕ್ಬರುದ್ದೀನ್, ಆಗಸ್ಟ್ 9 ರಂದು ಜರುಗುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯ ಅಧ್ಯಕ್ಷತೆ ವಹಿಸುವ ಸಾಧ್ಯತೆ ಇದೆ ಎಂದಿದ್ದಾರೆ. 

Written by - Nitin Tabib | Last Updated : Aug 1, 2021, 05:16 PM IST
  • UNSC ಸಭೆಯ ಅಧ್ಯಕ್ಷತೆ ವಹಿಸಲು ಹೊರಟ ಪ್ರಧಾನಿ ಮೋದಿ.
  • ಸ್ವಾತಂತ್ರ್ಯಾ ನಂತರ ಈ ರೀತಿ ನಡೆಯುತ್ತಿರುವುದು ಇದೆ ಮೊದಲ ಬಾರಿಗೆ.
  • ಕಳೆದ 75 ವರ್ಷಗಳಲ್ಲಿ UNSC ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲು ಹೊರಟ ಮೊದಲ ಭಾರತೀಯ ಪ್ರಧಾನಿ PM ನರೇಂದ್ರ ಮೋದಿ.
PM Modi To Preside Over UNSC Meeting: UNSC ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಇತಿಹಾಸ ಬರೆಯಲು ಹೊರಟ PM Modi! title=
PM Modi To Preside Over UNSC Meeting (File Photo)

ನವದೆಹಲಿ:  UN Security Council Meeting - ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಅಂತಾರಾಷ್ಟ್ರೀಯ ವೇದಿಕೆಯ ಮೇಲೆ ಇತಿಹಾಸ ರಚಿಸಲು ಹೊರಟಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಇದೆ ಮೊದಲ ಬಾರಿಗೆ ಭಾರತೀಯ ಪ್ರಧಾನ ಮಂತ್ರಿಯೊಬ್ಬರು ವಿಶ್ವಸಂಸ್ಥೆಯ (United Nations) ಭದ್ರತಾ ಮಂಡಳಿ (UNSC) ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಕುರಿತು ಭಾನುವಾರ ವಿಶ್ವಸಂಸ್ಥೆಯಲ್ಲಿ ಭಾರತದ ಮಾಜಿ  ಖಾಯಂ ಪ್ರತಿನಿಧಿಯಾಗಿದ್ದ ಸಯ್ಯದ್ ಅಕ್ಬರುದ್ದೀನ್ ಮಾಹಿತಿ ನೀಡಿದ್ದಾರೆ.  ಇಂದು ಅಂದರೆ ಆಗಸ್ಟ್ 1 ರಿಂದ ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಆಜ್ಞೆಯನ್ನು ಪಡೆದುಕೊಳ್ಳುತ್ತಿದೆ. ಈ ಸಮಯದಲ್ಲಿ, ಸಮುದ್ರ ಭದ್ರತೆ, ಶಾಂತಿ ಪಾಲನೆ ಮತ್ತು ಭಯೋತ್ಪಾದನೆ ತಡೆ ಎಂಬ ಮೂರು ಪ್ರಮುಖ ಕ್ಷೇತ್ರಗಳಿಗೆ ಸಂಬಂಧಿಸಿದ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ಭಾರತ ಸಿದ್ಧವಾಗಿದೆ.

ವಿಶ್ವಸಂಸ್ಥೆಯ (United Nations) ಭಾರತದ ಮಾಜಿ ಖಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ (Sayed Adbaruddin) ಪ್ರಕಾರ, ಆಗಸ್ಟ್ 9 ರಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ಮೋದಿ ವಹಿಸಿಕೊಳ್ಳುವ ಸಾಧ್ಯತೆ ಇದೆ (PM Modi To Preside Over UNSC Meeting). ಎಲ್ಲವು ಅಂದುಕೊಂಡಂತೆ ಸಾಗಿದರೆ ಭಾರತಕ್ಕೆ ಸ್ವಾತಂತ್ರ್ಯ ದೊರೆತೆ 75 ವರ್ಷಗಳ ನಂತರ ಭಾರತೀಯ ಪ್ರಧಾನಿಯೊಬ್ಬರು 15 ಖಾಯಂ ಸದಸ್ಯರನ್ನು ಒಳಗೊಂಡ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ  ಕಾರ್ಯಕ್ರಮವೊಂದಕ್ಕೆ ಅಧ್ಯಕ್ಷರಾಗುತ್ತಿರುವುದು ಇದೆ ಮೊದಲ ಬಾರಿಗೆ ಎಂಬುದು ಇಲ್ಲಿ ಉಲ್ಲೇಖನೀಯ. ಈ ಕುರಿತು ಟ್ವೀಟ್ ಮಾಡಿರುವ, ಸೈಯದ್ ಅಕ್ಬರುದ್ದೀನ್, "ನಮ್ಮ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯ ಅಧ್ಯಕ್ಷತೆ ವಹಿಸಲು ನಿರ್ಧರಿಸಿದ ಮೊದಲ ಭಾರತೀಯ ಪ್ರಧಾನಿಯಾಗಲಿದ್ದಾರೆ. ನಮ್ಮ ನಾಯಕರುಗಳು ಇದೀಗ ಮುಂಚೂಣಿ ಸಾಧಿಸಲು ಬಯಸುತ್ತಿದ್ದಾರೆ ಎಂಬುದನ್ನು ಇದು ಸಾಬೀತುಪಡಿಸುತ್ತದೆ" ಎಂದಿದ್ದಾರೆ. 

ಇದನ್ನೂ ಓದಿ - PM Kisan ಯೋಜನೆಯ 9ನೇ ಕಂತಿನ ಪಟ್ಟಿ ಬಿಡುಗಡೆ : ಲಿಸ್ಟ್ ಅಲ್ಲಿ ನಿಮ್ಮ ಹೆಸರು ಇದೆಯಾ ಬೇಗ ಪರಿಶೀಲಿಸಿ 

ಸಯ್ಯದ್ ಅಕ್ಬರುದ್ದೀನ್ ಟ್ವೀಟ್
ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ ಸೇರಿದಂತೆ ಭಾರತದ ಉನ್ನತ ಅಧಿಕಾರಿಗಳುಹಲವು ಉನ್ನತ ಮಟ್ಟದ ಅಧ್ಯಕ್ಷತೆ ವಹಿಸಲಿದ್ದಾರೆ. "ಯುಎನ್‌ಎಸ್‌ಸಿಯಲ್ಲಿ ಇದು ನಮ್ಮ ಎಂಟನೇ ಅವಧಿಯಾಗಿದೆ, ಆದರೆ, ಇದೇ ಮೊದಲ ಬಾರಿಗೆ ನಮ್ಮ ರಾಜಕೀಯ ನಾಯಕತ್ವ ಭದ್ರತಾ ಮಂಡಳಿಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲು 75 ವರ್ಷಗಳಲ್ಲಿ  ಆಸಕ್ತಿ ತೋರಿಸಿದೆ" ಎಂದು ಸೈಯದ್ ಅಕ್ಬರುದ್ದೀನ್ ಹೇಳಿದ್ದಾರೆ. 

ಇದನ್ನೂ ಓದಿ- Airstrike on Taliban Terrorists: ತಾಲಿಬಾನ್ ಉಗ್ರರ ಮೇಲೆ Airstrike, 254 ಉಗ್ರರ ಹತ್ಯೆ

ಭದ್ರತಾ ಮಂಡಳಿಯ ಶಾಶ್ವತವಲ್ಲದ ಸದಸ್ಯ ರೂಪದಲ್ಲಿ ಭಾರತದ ಎರಡು ವರ್ಷಗಳ ಅವಧಿಯು ಜನವರಿ 1, 2021 ರಂದು ಆರಂಭವಾಗಿದೆ. ಆಗಸ್ಟ್ ತಿಂಗಳಲ್ಲಿ ಭಾರತ ವಹಿಸಿಕೊಳ್ಳುತ್ತಿರುವ ಭದ್ರತಾ ಮಂಡಳಿಯ ಅಧ್ಯಕ್ಷತೆ, ಶಾಶ್ವತವಲ್ಲದ ಸದಸ್ಯನ ರೂಪದಲ್ಲಿ 2021-22ರ ಅವಧಿಯಾಗಿ ಭಾರತದ ಮೊದಲ ಅಧ್ಯಕ್ಷತೆಯಾಗಿರಲಿದೆ.  ಭಾರತವು ತನ್ನ ಎರಡು ವರ್ಷಗಳ ಅವಧಿಯ ಕೊನೆಯ ತಿಂಗಳಲ್ಲಿ ಅಂದರೆ ಮುಂದಿನ ವರ್ಷ ಡಿಸೆಂಬರ್‌ನಲ್ಲಿ ಕೌನ್ಸಿಲ್‌ನ ಅಧ್ಯಕ್ಷತೆಯನ್ನು ವಹಿಸಲಿದೆ. ತನ್ನ ಅಧ್ಯಕ್ಷತೆಯ ಅವಧಿಯಲ್ಲಿ, ಭಾರತವು ಮೂರು ಅತಿ ದೊಡ್ಡ ಕ್ಷೇತ್ರಗಳಾಗಿರುವ - ಸಾಗರ ಸುರಕ್ಷತೆ, ಶಾಂತಿ ರಕ್ಷಣೆ ಹಾಗೂ ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿದಂತೆ ಮೂರು ಉನ್ನತ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸಲಿದೆ.

ಇದನ್ನೂ ಓದಿ-LPG Gas Cylinder Price: ಅಡುಗೆ ಅನಿಲ ಬೆಲೆಯಲ್ಲಿ ರೂ.73.50 ಏರಿಕೆ, ಈ ತಿಂಗಳ ದರ ಎಷ್ಟು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News