ಪಾಕ್ ಗೆ ಏಕಾಏಕಿ ಶಾಕ್ ನೀಡಿದ ಸೌದಿ ಅರೇಬಿಯಾ ಮಾಡಿದ್ದೇನು ಗೊತ್ತೇ?

ಇದ್ದಕ್ಕಿದ್ದಂತೆ ಸೌದಿ ಅರೇಬಿಯಾ (Soudi Arabia) ಪಾಕಿಸ್ತಾನಕ್ಕೆ (Pakistan)ಶಾಕ್ ನೀಡಿದೆ. ಪಾಕಿಸ್ತಾನ  ನಕ್ಷೆಯಿಂದ ಪಾಕ್ ಆಕ್ರಮಿತ ಕಾಶ್ಮೀರ, ಗಿಲ್ಗಿಟ್ (Gilgit) ಮತ್ತು ಬಾಲ್ಟಿಸ್ತಾನಗಳನ್ನು (Baltistan )ತೆಗೆದು ಹಾಕುವ ಮೂಲಕ ಸೌದಿ ಅರೇಬಿಯಾ ಪಾಕಿಸ್ತಾನಕ್ಕೆ ಸರಿಯಾದ ಏಟು ನೀಡಿದೆ.

Last Updated : Oct 29, 2020, 11:13 AM IST
ಪಾಕ್ ಗೆ ಏಕಾಏಕಿ ಶಾಕ್ ನೀಡಿದ ಸೌದಿ ಅರೇಬಿಯಾ ಮಾಡಿದ್ದೇನು ಗೊತ್ತೇ?

ನವದೆಹಲಿ: ಇದ್ದಕ್ಕಿದ್ದಂತೆ ಸೌದಿ ಅರೇಬಿಯಾ (Soudi Arabia) ಪಾಕಿಸ್ತಾನಕ್ಕೆ (Pakistan)ಶಾಕ್ ನೀಡಿದೆ. ಪಾಕಿಸ್ತಾನ  ನಕ್ಷೆಯಿಂದ ಪಾಕ್ ಆಕ್ರಮಿತ ಕಾಶ್ಮೀರ, ಗಿಲ್ಗಿಟ್ (Gilgit) ಮತ್ತು ಬಾಲ್ಟಿಸ್ತಾನಗಳನ್ನು (Baltistan )ತೆಗೆದು ಹಾಕುವ ಮೂಲಕ ಸೌದಿ ಅರೇಬಿಯಾ ಪಾಕಿಸ್ತಾನಕ್ಕೆ ಸರಿಯಾದ ಏಟು ನೀಡಿದೆ.

ಈ ದೇಶದಿಂದ ಲಕ್ಷಾಂತರ ಪಾಕಿಸ್ತಾನಿಗಳು ಹೊರಕ್ಕೆ; ಇಮ್ರಾನ್ ಖಾನ್‌ಗೆ ಮರ್ಮಾಘಾತ

ಮುಂದಿನ ತಿಂಗಳು 21 ಮತ್ತು 22ರಂದು ಸೌದಿ ಅರೇಬಿಯಾದ ರಿಯಾದ್ ನಲ್ಲಿ ಜಿ-20 ಶೃಂಗಸಭೆ ನಡೆಯಲಿದೆ. ಇದಕ್ಕಾಗಿ ಸೌದಿ ಅರೇಬಿಯಾ 20 ವಿಶೇಷ ನೋಟ್ ಗಳನ್ನು ಬಿಡುಗಡೆ ಮಾಡಿದೆ. ಈ ನೋಟ್ ಗಳ ಹಿಂಭಾಗದಲ್ಲಿ ಜಿ-20 ರಾಷ್ಟ್ರಗಳ ನಕ್ಷೆಯನ್ನು(Map) ಮುದ್ರಿಸಲಾಗಿದೆ.

ಈ ನಕ್ಷೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಗಿಲ್ಗಿಟ್,  ಬಾಲ್ಟಿಸ್ತಾನಗಳನ್ನು ಪಾಕಿಸ್ತಾನದಿಂದ ತೆಗೆದು ಹಾಕಲಾಗಿದೆ.ಆದರೆ ಇದುವರೆಗೆ ಪಾಕಿಸ್ತಾನ  ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸೌದಿ ಅರೇಬಿಯಾದ  ನಡೆ ಪಾಕಿಸ್ತಾನಕ್ಕೆ ತೀವ್ರ ಮುಜುಗರ ತರುವಂಥದ್ದು ಎಂದು ಸೌದಿ ಮಾಧ್ಯಮಗಳು ವರದಿ ಮಾಡಿವೆ.
 

More Stories

Trending News