ನವದೆಹಲಿ: ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಮಂಗಳವಾರ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ 2020 ಅನ್ನು ರೋಜರ್ ಪೆನ್ರೋಸ್, ರೀನ್ಹಾರ್ಡ್ ಜೆನ್ಜೆಲ್ ಮತ್ತು ಆಂಡ್ರಿಯಾ ಘೆಜ್ ಮೂವರು ವಿಜ್ಞಾನಿಗಳಿಗೆ ಘೋಷಿಸಿದೆ.
BREAKING NEWS:
The Royal Swedish Academy of Sciences has decided to award the 2020 #NobelPrize in Physics with one half to Roger Penrose and the other half jointly to Reinhard Genzel and Andrea Ghez. pic.twitter.com/MipWwFtMjz— The Nobel Prize (@NobelPrize) October 6, 2020
ಭಾರತೀಯ ಮೂಲದ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿಗೆ ನೊಬೆಲ್ ಪ್ರಶಸ್ತಿ
ಯುಕೆನ ಆಕ್ಸ್ಫರ್ಡ್ ವಿಶ್ವವಿದ್ಯಾಲಯ ರೋಜರ್ ಪೆನ್ರೋಸ್ ಅವರಿಗೆ ಕಪ್ಪು ಕುಳಿ ರಚನೆಯು ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತದ ದೃಢವಾದ ಮುನ್ಸೂಚನೆ ಕಂಡು ಹಿಡಿದಿದ್ದಕ್ಕೆ ಅರ್ಧ ಪ್ರಶಸ್ತಿಯನ್ನು ನೀಡಲಾಗುತ್ತಿದೆ.ಉಳಿದ ಅರ್ಧವನ್ನು ರೀನ್ಹಾರ್ಡ್ ಜೆನ್ಜೆಲ್ ಮತ್ತು ಆಂಡ್ರಿಯಾ ಘೆಜ್ ಅವರಿಗೆ ನಕ್ಷತ್ರಪುಂಜದ ಮಧ್ಯಭಾಗದಲ್ಲಿ ಒಂದು ಸೂಪರ್ಮಾಸಿವ್ ಕಾಂಪ್ಯಾಕ್ಟ್ ವಸ್ತುವಿನ ಆವಿಷ್ಕಾರಕ್ಕಾಗಿ ಜಂಟಿಯಾಗಿ ನೀಡಲಾಗಿದೆ.
The stars’ orbits are the most convincing evidence yet that a supermassive black hole is hiding in Sagittarius A*. This black hole is estimated to weigh about 4 million solar masses, squeezed into a region no bigger than our solar system.#NobelPrize pic.twitter.com/fbhwQicaVR
— The Nobel Prize (@NobelPrize) October 6, 2020
ಬಹುಮಾನದ ಮೊತ್ತ 10 ಮಿಲಿಯನ್ ಸ್ವೀಡಿಷ್ ಕ್ರೋನರ್ ನ್ನು ಹಂಚಿಕೊಳ್ಳಲಾಗುವುದು. ಪ್ರಶಸ್ತಿಯ ಅರ್ಧ ಭಾಗವನ್ನು ರೋಜರ್ ಪೆನ್ರೋಸ್ಗೆ ಮತ್ತು ಉಳಿದ ಭಾಗವನ್ನು ಜಂಟಿಯಾಗಿ ರೀನ್ಹಾರ್ಡ್ ಗೆನ್ಜೆಲ್ ಮತ್ತು ಆಂಡ್ರಿಯಾ ಘೆಜ್ಗೆ ಹಂಚಲಾಗುತ್ತದೆ.