ಸದ್ಯ ನೀವು ಹಣ ಗಳಿಸುವ ಕುರಿತು ಗಂಭೀರ ಆಲೋಚನೆಯಲ್ಲಿ ತೊಡಗಿದ್ದಾರೆ ಇಲ್ಲಿದೆ ನಿಮಗೊಂದು ಸುವರ್ಣಾವಕಾಶ. ಹೌದು, ಮೈಕ್ರೋಸಾಫ್ಟ್ ನ ಕೋ-ಫೌಂಡರ್ ಆಗಿರುವ ಬಿಲ್ ಗೇಟ್ಸ್ ನಿಮಗೆ 35 ಲಕ್ಷ ರೂ. ಹಣ ನೀಡಲಿದ್ದಾರೆ. ಆದರೆ, ಈ ಹಣ ಗಳಿಸಲು ನೀವು ಒಂದು ಕೆಲಸ ಮಾಡಬೇಕು. ಭಾರತದಲ್ಲಿ ವ್ಯಾಪಕವಾಗಿ ಸ್ಮಾರ್ಟ್ ಫೋನ್ ಬಳಕೆಯಾಗುತ್ತಿರುವುದು ನಮ್ಮ ನಿಮ್ಮೆಲ್ಲರಿಗೂ ತಿಳಿದ ವಿಷಯ. ಏತನ್ಮಧ್ಯೆ ಬಿಲ್ ಗೇಟ್ಸ್ ಸ್ಪರ್ಧೆಯೊಂದನ್ನು ಆಯೋಜಿಸುವ ನಿರ್ಣಯ ಕೈಗೊಂಡಿದ್ದಾರೆ. ಈ ಸ್ಪರ್ಧೆಯಯಲ್ಲಿ ಬಹುಮಾನವಾಗಿ ನಿಮಗೆ ಈ ಹಣ ಸಿಗಲಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವುದು ಹೇಗೆ?
ಈ ಸ್ಪರ್ಧೆಯಲ್ಲಿ ಭಾಗವಹಿಸಿ ಮೊದಲ ಬಹುಮಾನ ಗೆಲ್ಲುವವರಿಗೆ 50 ಸಾವಿರ ಡಾಲರ್ ಅಂದರೆ ಸುಮಾರು 35,84,275 ರೂ.ಗಳು ಸಿಗಲಿವೆ. ಎರಡನೆಯ ಬಹುಮಾನ ಗೆಲ್ಲುವವರಿಗೆ 21,50,565 ರೂ. ಸಿಗಲಿದೆ ಮತ್ತು ಮೂರನೇ ಬಹುಮಾನ ಪಡೆಯುವವರಿಗೆ 14,33,710 ರೂ. ಸಿಗಲಿದೆ. ಈ ಸ್ಪರ್ಧೆಯಲ್ಲಿ ವಿಜೇತರಾಗುವವರನ್ನು NPCI ಪೇಮೆಂಟ್ ಸೆಕ್ಯೂರಿಟಿ ಸೇರಿದಂತೆ ಇತರೆ ನಾಲ್ಕು ಮಾನದಂಡಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ನೀವು https://grand-challenge.ciie.co/ ವೆಬ್ ಸೈಟ್ ಗೆ ಭೇಟಿ ನೀಡಬೇಕು.
ಪೇಮೆಂಟ್ ಸಿಸ್ಟಮ್ ಅಭಿವೃದ್ಧಿ ಪಡಿಸಬೇಕು
ಈ ಸ್ಪರ್ಧೆಯ ಭಾಗವಾಗಿ ನೀವು ಫೀಚರ್ ಫೋನ್ ಗಾಗಿ ಒಂದು ಪೇಮೆಂಟ್ ಸಿಸ್ಟಮ್ ಸಿದ್ಧಪಡಿಸಬೇಕು. ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ (NPCI) ಮಾನದಂಡಗಳನ್ನು ಆಧರಿಸಿ ಇದನ್ನು ಸಿದ್ಧಪಡಿಸಬೇಕು. ಫೀಚರ್ ಫೋನ್ ಮೂಲಕ *99# ಡಯಲ್ ಮಾಡಿ ತುಂಬಾ ಕಡಿಮೆ ಅಂದರೆ ಸುಮಾರು 5 ಲಕ್ಷ ವಹಿವಾಟುಗಳು ಸದ್ಯ ನಡೆಯುತ್ತಿವೆ. ಏಕೆಂದರೆ ಡಿಜಿಟಲ್ ಫೋನ್ ಗೆ ಹೋಲಿಸಿದರೆ ಫೀಚರ್ ಫೋನ್ ಗಳ ಮೂಲಕ ಪೇಮೆಂಟ್ ಮಾಡುವುದು ಸುಲಭದ ಮಾತಲ್ಲ ಎನ್ನಲಾಗುತ್ತಿದೆ.
ಜನವರಿ 12ರೊಳಗೆ ನಿಮ್ಮ ಅಪ್ಲಿಕೇಶನ್ ಸಲ್ಲಿಸಬೇಕು
‘Grand Challenge Payments Using Feature Phones’ ಹೆಸರಿನ ಈ ಸ್ಪರ್ಧೆಯಲ್ಲಿ ನಿಮ್ಮ ಅಪ್ಲಿಕೇಶನ್ ಅನ್ನು ಸಲ್ಲಿಸಲು ಜನವರಿ 12, 2020 ಕೊನೆಯ ದಿನಾಂಕವಾಗಿದೆ. ಈ ಸ್ಪರ್ಧೆಯಲ್ಲಿ ವಿಜೆತರಾದವರ ಹೆಸರನ್ನು ಮಾರ್ಚ್ 14,2020ಕ್ಕೆ ಪ್ರಕಟಿಸಲಾಗುತ್ತಿದೆ. ಈ ಸ್ಪರ್ಧೆಯಲ್ಲಿ ಆಯ್ಕೆಯಾದ ಸ್ಪರ್ಧಿಗೆ ಫೆಬ್ರವರಿ 11, 2020ರಂದು NPCI APIನ ಅಕ್ಸಸ್ ಸಿಗಲಿದೆ.
ಬಿಲ್ ಗೇಟ್ಸ್ ಜೊತೆ ಒಪ್ಪಂದ
ಈ ಸ್ಪರ್ಧೆಗಾಗಿ NPCI, CIIE.CO, ಬಿಲ್ ಗೇಟ್ಸ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದದ ಅಡಿ ಈ ಬಹುಮಾನ ನೀಡಲಾಗುತ್ತಿದೆ. ಫೀಚರ್ ಫೋನ್ ಗಳಿಗಾಗಿ ಡಿಜಿಟಲ್ ಪೇಮೆಂಟ್ ಸಿಸ್ಟಮ್ ತಯಾರಿಸುವುದು ಈ ಸ್ಪರ್ಧೆಯ ಮೂಲ ಉದ್ದೇಶ. ಇಂತಹ ಸಿಸ್ಟಮ್ ಸಿದ್ಧಪಡಿಸುವವರಿಗೆ 35 ಲಕ್ಷ ರೂ.ವರೆಗೆ ಬಹುಮಾನ ಸಿಗಲಿದೆ.
ಕೆಳಗೆ ನಮೂದಿಸಲಾದ ಮಾನದಂಡಗಳ ಆಧಾರದ ಮೇಲೆ ಸಿಗಲಿದೆ ಬಹುಮಾನ
NPCI ಹಾಗೂ CIIE.CO ಜಂಟಿಯಾಗಿ ಈ ಸ್ಪರ್ಧೆಯ ವಿಜೇತರ ಹೆಸರನ್ನು ಆಯ್ಕೆ ಮಾಡಲಿವೆ. ಚೆಕ್ಕಿಂಗ್ ಗಾಗಿ ಒಟ್ಟು ನಾಲ್ಕು ಮಾನದಂಡಗಳನ್ನು ಈಗಾಗಲೇ ನಿರ್ಧರಿಸಲಾಗಿದೆ. ಸುಲಭ ಉಪಯೋಗ, ವ್ಯವಹಾರದ ಅನುಭವ ಹೆಚ್ಚಳಕ್ಕೆ ಆಸ್ಪದ, ಸಿಕ್ಯೂರಿಟಿ ಫೀಚರ್ ಹಾಗೂ ವ್ಯವಹಾರಗಳಲ್ಲಿ ಯಾವುದೇ ಅಡಚಣೆ ಉಂಟಾದಲ್ಲಿ ಅದರ ಶೀಘ್ರ ನಿವಾರಣೆ ಇವು ಶಾಮೀಲಾಗಿವೆ.