ಕಾಂಗ್ರೆಸ್ ಪಕ್ಷವು ಜೆಡಿಎಸ್ ಜೊತೆ ಮಾಡಿಕೊಂಡಿರುವ ಒಳ ಒಪ್ಪಂದವನ್ನು ಸ್ಪಷ್ಟಪಡಿಸಬೇಕು-ಮೋದಿ

ಇಲ್ಲಿನ ಚುನಾವಣಾ ಪ್ರಚಾರದಲ್ಲಿ ಭಾಷಣ ಮಾಡುತ್ತಾ ಮೋದಿ ರಾಜ್ಯ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷವು ಮಾಡಿಕೊಂಡಿರುವ ಒಳ ಒಪ್ಪಂದದ ಕುರಿತು ಸ್ಪಷ್ಟನೇ ನೀಡಬೇಕು ಎಂದು ತಿಳಿಸಿದರು  

Last Updated : May 5, 2018, 04:13 PM IST
ಕಾಂಗ್ರೆಸ್ ಪಕ್ಷವು ಜೆಡಿಎಸ್ ಜೊತೆ ಮಾಡಿಕೊಂಡಿರುವ ಒಳ ಒಪ್ಪಂದವನ್ನು ಸ್ಪಷ್ಟಪಡಿಸಬೇಕು-ಮೋದಿ  title=

ತುಮಕೂರು: ಇಲ್ಲಿನ ಚುನಾವಣಾ ಪ್ರಚಾರದಲ್ಲಿ ಭಾಷಣ ಮಾಡುತ್ತಾ ಮೋದಿ ರಾಜ್ಯ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷವು ಮಾಡಿಕೊಂಡಿರುವ ಒಳ ಒಪ್ಪಂದದ ಕುರಿತು ಸ್ಪಷ್ಟನೇ ನೀಡಬೇಕು ಎಂದು ತಿಳಿಸಿದರು  

ಜೆಡಿಎಸ್ ಮತ್ತು ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿವೆ ಎಂದು ಆರೋಪಿಸಿದ ಮೋದಿ.ಮುಂದುವರೆದು ಚುನಾವಣಾ ಸಮೀಕ್ಷೆಗಳು ರಾಜಕೀಯ ತಜ್ಞರು ಪ್ರತಿಯೊಬ್ಬರೂ ಹೇಳಿದ್ದಾರೆ. ಜೆಡಿಎಸ್  ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಸಾಧ್ಯವಿಲ್ಲ,ಒಂದುವೇಳೆ  ಅಂತಹ ಶಕ್ತಿ ಇದ್ದರೆ ಅದು ಬಿಜೆಪಿಗೆ ಮಾತ್ರ ಎಂದು ತಿಳಿಸಿದರು. 

ಆದ್ದರಿಂದ ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಜೆಡಿಎಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿದೆಯೋ ಇಲ್ಲವೋ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಅವರು ತಿಳಿಸಿದರು. 

Trending News