Aadhaar-PAN Link Deadline - ನಾಳೆ ಸಂಜೆಯ ಒಳಗೆ ಈ ಕೆಲಸ ಮುಗಿಸದಿದ್ದರೆ ಬೀಳುತ್ತೆ 10 ಸಾವಿರ ದಂಡ

Aadhaar-PAN Link Deadline - ನಾಳೆ ಮಾರ್ಚ್ 31 ಅಂದರೆ ಈ ಆರ್ಥಿಕ ವರ್ಷದ ಕೊನೆಯ ದಿನ. ಇದರ ಜೊತೆಗೆ ಆಧಾರ್ ಹಾಗೂ ಪ್ಯಾನ್ ಕಾರ್ಡ್ ಜೋಡಣೆಗೂ ಕೂಡ ಕೊನೆಯ ದಿನ. ನಾಳೆ ಸಂಜೆಯ ಒಳಗೆ ಒಂದು ವೇಳೆ ನೀವು ಈ ಕೆಲಸ ಮಾಡದೆ ಹೋದಲ್ಲಿ ನಿಮಗೆ ಭಾರಿ ಹಾನಿಯಾಗುವ ಸಾಧ್ಯತೆ ಇದೆ. ನೀವು ಮನೆಯಲ್ಲಿಯೇ ಕುಳಿತು ಈ ಎರಡು ದಾಖಲೆಗಳನ್ನು ಲಿಂಕ್ ಮಾಡಬಹುದು. ಅದರ ಪ್ರೋಸೆಸ್ ನಾವು ನಿಮಗೆ ಹೇಳಲಿದ್ದೇವೆ.

Written by - Nitin Tabib | Last Updated : Mar 30, 2021, 01:41 PM IST
  • ನೀವೂ ನಿಮ್ಮ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಜೋಡಿಸಿದ್ರಾ?
  • ಇಲ್ಲ ಎಂದಾದಲ್ಲಿ ಈ ಕೆಲಸ ಇಂದೇ ಮಾಡಿ.
  • ಏಕೆಂದರೆ ಈ ಕೆಲಸ ಮಾಡಲು ನಾಳೆಯೇ ಡೆಡ್ ಲೈನ್.
Aadhaar-PAN Link Deadline - ನಾಳೆ ಸಂಜೆಯ ಒಳಗೆ ಈ ಕೆಲಸ ಮುಗಿಸದಿದ್ದರೆ ಬೀಳುತ್ತೆ 10 ಸಾವಿರ ದಂಡ  title=
Aadhaar Card-PAN Card Linking(Representational Image)

ನವದೆಹಲಿ: Aadhaar-PAN Link Deadline - ವರ್ಷ 2019 ರಲ್ಲಿ ಆದಾಯ ತೆರಿಗೆ ಇಲಾಖೆ ಆಧಾರ್ ಕಾರ್ಡ್ ಅನ್ನು ಪ್ಯಾನ್ ಕಾರ್ಡ್ ಜೊತೆಗೆ ಜೋಡಿಸುವುದು ಕಡ್ಡಾಯಗೊಳಿಸಿತ್ತು. ಅಂದಿನಿಂದ ಇಲ್ಲಿಯವರೆಗೆ ಈ ಕೆಲಸಕ್ಕೆ ನಿಗದಿಪಡಿಸಿದ್ದ ಗಡುವಿನಲ್ಲಿ ವಿಸ್ತರಣೆಯಾಗುತ್ತಲೇ ಇದೆ. ಒಂದು ವೇಳೆ ನೀವೂ ಕೂಡ ನಿಮ್ಮ ಆಧಾರ್ ಹಾಗೂ ಪ್ಯಾನ್ ಕಾರ್ಡ್ ಅನ್ನು ಜೋಡಣೆ ಮಾಡದೆ ಇದ್ದರೆ, ಅದನ್ನು ಇಂದೇ ಪೂರ್ಣಗೊಳಿಸಿ. ಏಕೆಂದರೆ ಆದಾಯ ತೆರಿಗೆ ಇಲಾಖೆ ಈ ಕೆಲಸ ಮಾಡಲು ಮಾರ್ಚ್ 31, 2021  ಅಂತಿಮ ಗಡುವು ನೀಡಿದ್ದು, ಇನ್ಮುಂದೆ ಈ ಗಡುವು ವಿಸ್ತರಣೆಯಾಗುವುದಿಲ್ಲ ಎಂದಿದೆ. ಮಾರ್ಚ್ 31ರವರೆಗೆ ಒಂದು ವೇಳೆ ನೀವು ಈ ಕೆಲಸ ಮಾಡದೆ ಹೋದಲ್ಲಿ ನಿಮಗೆ ಭಾರಿ ಹಾನಿಯಾಗುವ ಸಾಧ್ಯತೆ ಇದೆ. ಈ ದಿನಾಂಕದ ಬಳಿಕ ಈ ಕೆಲಸ ಒಂದು ವೇಳೆ ನೀವು ಹಣಕಾಸಿನ ವ್ಯವಹಾರ ನಡೆಸಿದರೆ, ನಿಮಗೆ ಶೇ.20 ರಷ್ಟು ತೆರಿಗೆ ಬೀಳಲಿದೆ.

1000 ರೂ. ಜುರ್ಮಾನೆ To Link PAN-Aadhaar Card
ಭಾರತ ಸರ್ಕಾರ ಆಧಾರ್ ಕಾರ್ಡ್ ಅನ್ನು ಪ್ಯಾನ್ ಕಾರ್ಡ್(PAN Card) ಗೆ ಜೋಡಿಸದಿದ್ದರೆ ರೂ. 1000  ದಂಡ ವಿಧಿಸುವುದಾಗಿ ಹೇಳಿತ್ತು. ಆದರೆ ನೂತನ ಸೆಕ್ಷನ್ 234H (ಫೈನಾನ್ಸ್ ಬಿಲ್) ಪ್ರಕಾರ, ಈ ಎರಡೂ ದಾಖಲೆಗಳನ್ನು ಲಿಂಕ್ ಮಾಡದೆ ಹೋದಲ್ಲಿ 1000 ರೂ ಜುರ್ಮಾನೆ ರೂಪದಲ್ಲಿ ಪಡೆಯಲಾಗುವುದು ಎನ್ನಲಾಗಿದೆ. ಇದಲ್ಲದೆ ಒಂದು ನಿಷ್ಕ್ರೀಯ ಪ್ಯಾನ್ ಕಾರ್ಡ್ ನಿಮ್ಮ ಬಳಿ ಇಟ್ಟುಕೊಂಡ ಕಾರಣ ಪಡೆಯುವ ಶುಲ್ಕ ಇದಕ್ಕಿಂತ ಭಿನ್ನವಾಗಿರಲಿದೆ ಎನ್ನಲಾಗಿದೆ.

ಮನೆಯಿಂದಲೇ ನೀವು ಈ ಕೆಲಸ ಮಾಡಬಹುದು
ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ (Aadhaar Card) ಗೆ ಲಿಂಕ್ ಮಾಡಲು ನೀವು ಇ-ಮಿತ್ರ ಅಥವಾ ಯಾವುದಾದರೊಂದು ಅಂಗಡಿಗೆ ಹೋಗಬೇಕಾದ ಅವಶ್ಯಕತೆ ಇಲ್ಲ. ಈ ಕೆಲಸವನ್ನು ನೀವು ಮನೆಯಿಂದಲೇ ಮಾಡಬಹುದು. ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ನೀವು ಈ ಕೆಲಸವನ್ನು ಮಾಡಬಹುದು. ಇದಲ್ಲದೆ ಇಲಾಖೆ ಜಾರಿಗೊಳಿಸಿರುವ ಸಂಖ್ಯೆಗೆ SMS ಮಾಡುವ ಮೂಲಕ ಕೂಡ ನೀವು ಈ ಕೆಲಸ ಮಾಡಬಹುದು.

ಇದನ್ನೂ ಓದಿ-Aadhaar-PAN Card: ಮಾ.31ರೊಳಗೆ ಪ್ಯಾನ್ 'ಕಾರ್ಡ್ ಗೆ ಆಧಾರ್' ಜೋಡಿಸದಿದ್ದರೆ ಏನೆಲ್ಲ ಪ್ರಾಬ್ಲಮ್ ಗೊತ್ತ?

SMS ಮೂಲಕ ಆಧಾರ್-ಪ್ಯಾನ್ ಜೋಡಣೆ ಹೇಗೆ ಮಾಡಬೇಕು? Process To Link PAN-Aadhaar Card
ಒಂದು ವೇಳೆ ನೀವು ನಿಮ್ಮ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಅನ್ನು SMS ಕಳುಹಿಸುವ ಮೂಲಕ ಲಿಂಕ್ ಮಾಡಲು ಬಯಸುತ್ತಿದ್ದರೆ, ಇದಕ್ಕಾಗಿ ನೀವು ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆಯಿಂದ UIDPAN <12-digit Aadhaar> <10-digit PAN> ಟೈಪ್ ಮಾಡಿ  567678 ಅಥವಾ  561561 ಸಂಖ್ಯೆಗೆ ಸಂದೇಶ ಕಳುಹಿಸಿ. ಬಳಿಕ ನಿಮ್ಮ ಪ್ಯಾನ್ ಸಂಖ್ಯೆ ನಿಮ್ಮ ಆಧಾರ್ ಸಂಖ್ಯೆಯ ಜೊತೆಗೆ ಲಿಂಕ್ ಆಗಿರುವ ಸೂಚನೆ ನಿಮಗೆ ಸಿಗಲಿದೆ.

ಇದನ್ನೂ ಓದಿ- Post Office India: ಇನ್ಮುಂದೆ 'ಪೋಸ್ಟ್ ಆಫೀಸ್' ನಲ್ಲೂ ಮಾಡಿಸಬಹುದು 'ಪ್ಯಾನ್ ಕಾರ್ಡ್'..! 

ವೆಬ್ಸೈಟ್ ಮೂಲಕ ಲಿಂಕ್ ಮಾಡುವುದು ಹೇಗೆ? How To Link PAN-Aadhaar Card
>>ಇದಕ್ಕಾಗಿ ಮೊದಲು ನೀವು ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್ಸೈಟ್ ಆಗಿರುವ https://incometaxindiaefiling.gov.in ಭೇಟಿ ನೀಡಬೇಕು. ಇಲ್ಲಿ ನಿಮ್ಮ ಮುಂದೆ ಹೋಮ್ ಪೇಜ್ ತೆರೆದುಕೊಳ್ಳಲಿದೆ.
>>ಈ ಹೋಮ್ ಪೇಜ್ ನಲ್ಲಿ ನಿಮಗೆ Link Aadhaar ಆಯ್ಕೆ ಕಾಣಿಸಿಕೊಳ್ಳಲಿದೆ. ಆದರ ಮೇಲೆ ಕ್ಲಿಕ್ಕಿಸಿ.
>>ಇದಾದ ಬಳಿಕ ನಿಮಗೆ ನಿಮ್ಮ ಪ್ಯಾನ್ ಸಂಖ್ಯೆ, ಆಧಾರ್ ಸಂಖ್ಯೆ ಹಾಗೂ ಇತರೆ ಆವಶ್ಯಕ ಮಾಹಿತಿ ನಮೂದಿಸುವ ವಿಕಲ್ಪ ಕಾಣಿಸಲಿದೆ.
>>ಸಂಪೂರ್ಣ ಮಾಹಿತಿ ತುಂಬಿದ ಬಳಿಕ ಕ್ಯಾಪ್ಚಾ ಕೋಡ್ ನಮೂದಿಸಿ. ಲಿಂಕ್ ಆಧಾರ್ ಮೇಲೆ ಕ್ಲಿಕ್ಕಿಸಿ. 
>>ಈ ವಿಧಾನ ಪೂರ್ಣಗೊಳ್ಳುತ್ತಲೇ ನಿಮ್ಮ ಮುಂದೆ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಆದ ಸೂಚನೆ ಪ್ರಕಟವಾಗಲಿದೆ.

ಇದನ್ನೂ ಓದಿ- PAN Card: ಕೇವಲ 10 ನಿಮಿಷಗಳಲ್ಲಿ ಹೊಸ ಪ್ಯಾನ್ ಕಾರ್ಡ್ ಪಡೆಯಲು ಇಲ್ಲಿದೆ ಸುಲಭ ಮಾರ್ಗ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News