ನವದೆಹಲಿ: Crorepati Formula - ಕಾಫಿ (Coffee) ಸೇವಿಸುವುದು ಕೆಟ್ಟ ವಿಷಯವಲ್ಲ, ಆದರೆ ಅದು ಚಟವಾಗಿ ಪರಿಣಮಿಸಿದರೆ ಅದು ಖಂಡಿತವಾಗಿಯೂ ಸೂಕ್ತವಲ್ಲ. ನೀವು ಈ ಅಭ್ಯಾಸವನ್ನು ಬಿಡಲು ಸಾಧ್ಯವಾದರೆ, ನಿಮ್ಮ ದೈಹಿಕ ಆರೋಗ್ಯದ ಜೊತೆಗೆ ಆರ್ಥಿಕ ಆರೋಗ್ಯವು ಸುಧಾರಣೆಯಾಗುವುದರಲ್ಲಿ ಎರಡು ಮಾತಿಲ್ಲ. ಕಾಫಿಯನ್ನುತ್ಯಜಿಸಿ ನಿವೃತ್ತಿಯವರೆಗೆ ನೀವು ಕೋಟ್ಯಾಧಿಪತಿಯಾಗಬಹುದು. ಇದಕ್ಕಾಗಿ ನೀವು ಹೆಚ್ಚಿನದ್ದೇನು ಮಾಡಬೇಕಾಗಿಲ್ಲ (Retirement Plan). ಕೇವಲ ಒಂದು ಕಪ್ ಕಾಫಿ ತ್ಯಜಿಸಬೇಕು.
ಕೇಳಲು ಸ್ವಲ್ಪ ವಿಚಿತ್ರ ಎನಿಸಿದರೂ ಕೂಡ ಇದು ಸತ್ಯ. ಇದಕ್ಕೆ ಒಂದು ಕ್ಯಾಲ್ಕ್ಯೂಲೆಶನ್ ಇದೆ. ಇಂದು ಕಾಫಿ ಮಾರಾಟದ ರೆಸ್ಟೋರೆಂಟ್ ಗಳಲ್ಲಿ ಒಂದು ಕಾಫಿಯ ಬೆಲೆ ರೂ.200 ಇದೆ. ಈ ರೀತಿ ತಿಂಗಳಿಗೆ ರೂ.6000 ಉಳಿತಾಯವಾಗುತ್ತದೆ. ಇದರಿಂದ ನೀವು SIP (Systematic Investment Plan) ಪ್ರಾರಂಭಿಸಬಹುದು. ಈ ರೀತಿ 30 ವರ್ಷಗಳಲ್ಲಿ ಸಂಗ್ರಹವಾದ ಹಣದ ಮೇಲೆ ಶೇ.10ರಷ್ಟು ರಿಟರ್ನ್ ಮೂಲಕ 1,24,75,654 ರೂ. ಸಂಗ್ರಹಿಸಬಹುದು. ಅಂದರೆ ಒಟ್ಟು 60 ವರ್ಷಗಳ ಬಳಿಕ ನೀವು ಕೋಟ್ಯಾಧಿಪತಿಯಾಗಬಹುದು (Crorepati).
ಇದನ್ನೂ ಓದಿ-SIP ಬಗೆಗಿನ ತಪ್ಪು ಕಲ್ಪನೆಗಳನ್ನು ಬಿಟ್ಟು ಹೂಡಿಕೆ ಮಾಡಿ
ಮಾಸಿಕ SIP ಅಂದಾಜು ರಿಟರ್ನ್ ಅಂದಾಜು ಗಳಿಕೆ
ರೂ.6000 ಶೇ.10 1,24,75,654 ರೂ.
ಮಾಸಿಕ SIP ಹೂಡಿಕೆ ಒಟ್ಟು ಹೂಡಿಕೆ ಒಟ್ಟು ಅಂದಾಜು ಗಳಿಕೆ
ರೂ.6000 21, 60, 000 1,03,15,654 ರೂ.
ಇದನ್ನೂ ಓದಿ- WhatsApp ಮೂಲಕ SIP ಹೂಡಿಕೆ, UTI MFನಿಂದ ಹೊಸ ಸೇವೆ ಬಿಡುಗಡೆ
ಇದರಲ್ಲಿ ವಿಶೇಷ ಎಂದರೆ ನೀವು ತಿಂಗಳಿಗೆ 6000 ರೂ.ಗಳಂತೆ ಹೂಡಿಕೆ ಮಾಡಿದಾಗ 30 ವರ್ಷಗಳ ವರೆಗೆ ನಿಮ್ಮ ಒಟ್ಟು ಹೂಡಿಕೆ ಲೆಕ್ಕ ಹಾಕಿದರೆ ಅದು 21.60 ಲಕ್ಷಗಳಷ್ಟಾಗುತ್ತದೆ. ಆದರೆ, ಅದರ ಮೇಲೆ ನಿಮ್ಮ ಒಟ್ಟು ಗಳಿಕೆ ರೂ. 1,03,15,654 ರೂ. ಗಳಷ್ಟಾಗುತ್ತದೆ. ಅಂದರೆ ಒಟ್ಟು ಹೂಡಿಕೆಯನ್ನು ನೀವು ಪಕ್ಕಕಿಟ್ಟರೂ ಕೂಡ ವೆಲ್ತ್ ಗೇನ್ ನಿಮ್ಮನ್ನು ಕೋಟ್ಯಾಧಿಪತಿಯನ್ನಾಗಿಸುತ್ತದೆ. ಇಂದಿನಿಂದಲೇ ನಿತ್ಯ ಒಂದು ಕಪ್ ಕಾಫಿ ಸೇವಿಸುವುದನ್ನು ಬಿಟ್ಟು ಕೋಟ್ಯಾಧಿಪತಿಯಾಗಿ.
ಇದನ್ನೂ ಓದಿ- ಮಕ್ಕಳ ಹೆಸರಿನಲ್ಲಿ ಹಣ ಹೂಡಿಕೆ ಮಾಡಬೇಕೇ? ಈ ಹೊಸ ನಿಯಮಗಳು ನಿಮಗೆ ತಿಳಿದಿರಲಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.