EPFO Data Hack: 28 ಕೋಟಿ EPFO ಖಾತೆದಾರರ ವೈಯಕ್ತಿಕ ದತ್ತಾಂಶ ಸೋರಿಕೆ, ಇಲ್ಲಿದೆ ಸಂಪೂರ್ಣ ವಿವರ

EPFO Data Hack: ನೀವೂ ಕೂಡ ಭಾರತ ಸರ್ಕಾರದ EPFO ​​ಪಿಂಚಣಿ ಯೋಜನೆಯ ಲಾಭವನ್ನು ಸಹ ಪಡೆಯುತ್ತಿದ್ದರೆ, ಈ ಸುದ್ದಿ ನಿಮಗೆ ಆಘಾತವನ್ನು ನೀಡಲಿದೆ. ವರದಿಗಳ ಪ್ರಕಾರ, 28.8 ಕೋಟಿ ಇಪಿಎಫ್‌ಒ ಪಿಂಚಣಿ ಖಾತೆದಾರರ ಮಾಹಿತಿ ಸೋರಿಕೆಯಾಗಿದೆ ಎನ್ನಲಾಗಿದೆ.  

Written by - Nitin Tabib | Last Updated : Aug 4, 2022, 10:09 PM IST
  • ನೀವೂ ಕೂಡ ಭಾರತ ಸರ್ಕಾರದ EPFO ​​ಪಿಂಚಣಿ ಯೋಜನೆಯ ಲಾಭವನ್ನು ಸಹ ಪಡೆಯುತ್ತಿದ್ದರೆ,
  • ಈ ಸುದ್ದಿಯನ್ನು ತಪ್ಪದೆ ಓದಿ. ಏಕೆಂದರೆ,
  • ಈ ಸುದ್ದಿ ನಿಮಗೆ ದೊಡ್ಡ ಆಘಾತವನ್ನು ನೀಡಬಹುದು.
EPFO Data Hack: 28 ಕೋಟಿ EPFO ಖಾತೆದಾರರ ವೈಯಕ್ತಿಕ ದತ್ತಾಂಶ ಸೋರಿಕೆ, ಇಲ್ಲಿದೆ ಸಂಪೂರ್ಣ ವಿವರ title=
EPFO Data Hack

EPFO Data Hack: ನೀವೂ ಕೂಡ ಭಾರತ ಸರ್ಕಾರದ EPFO ​​ಪಿಂಚಣಿ ಯೋಜನೆಯ ಲಾಭವನ್ನು ಸಹ ಪಡೆಯುತ್ತಿದ್ದರೆ, ಈ ಸುದ್ದಿಯನ್ನು ತಪ್ಪದೆ ಓದಿ. ಏಕೆಂದರೆ, ಈ ಸುದ್ದಿ ನಿಮಗೆ ದೊಡ್ಡ ಆಘಾತವನ್ನು ನೀಡಬಹುದು. INS ವರದಿಯ ಪ್ರಕಾರ, ಉಕ್ರೇನ್ ಮೂಲದ ಸೈಬರ್ ಭದ್ರತಾ ಸಂಶೋಧಕ ಮತ್ತು ಪತ್ರಕರ್ತರೊಬ್ಬರು, ನೌಕರರ ಭವಿಷ್ಯ ನಿಧಿ ಸಂಸ್ಥೆಯ (EPFO) ಸುಮಾರು 288 ಮಿಲಿಯನ್ (28.8 ಮಿಲಿಯನ್) ಚಂದಾದಾರರ ಪೂರ್ಣ ಹೆಸರುಗಳು, ಬ್ಯಾಂಕ್ ಖಾತೆ ಸಂಖ್ಯೆಗಳು ಮತ್ತು ನೌಕರರ ಪಿಂಚಣಿಯ ನಾಮಿನಿ ವಿವರ ಮತ್ತು ಇತರೆ ಮಾಹಿತಿ  ಆನ್ಲೈನ್ ನಲ್ಲಿ ಸೋರಿಕೆಯಾಗಿವೆ ಎಂದು ಹೇಳಿಕೊಂಡಿದ್ದಾರೆ.

ಖಾತೆ ಸಂಖ್ಯೆ ಮತ್ತು ನಾಮಿನಿ ವಿವರಗಳು ಸೋರಿಕೆಯಾಗಿವೆ
SecurityDiscovery.com ನ ಸೈಬರ್ ಬೆದರಿಕೆಗಳ ಗುಪ್ತಚರ ನಿರ್ದೇಶಕ ಮತ್ತು ಪತ್ರಕರ್ತ ಬಾಬ್ ಡಯಾಚೆಂಕೊ ತನ್ನ ಸಿಸ್ಟಮ್ ಯುನಿವರ್ಸಲ್ ಅಕೌಂಟ್ ನಂಬರ್ (UAN) ಡೇಟಾದೊಂದಿಗೆ ಎರಡು ವಿಭಿನ್ನ IP ಗಳನ್ನು ಗುರುತಿಸಿದೆ ಎಂದು ಹೇಳಿದ್ದಾರೆ. IP ವಿಳಾಸವು ಇಂಟರ್ನೆಟ್ ಅಥವಾ ಸ್ಥಳೀಯ ನೆಟ್‌ವರ್ಕ್‌ನಲ್ಲಿ ಸಾಧನವನ್ನು ಗುರುತಿಸುವ ಅನನ್ಯ ವಿಳಾಸವಾಗಿದೆ ಎಂದು ಅವರು ಬ್ಲಾಗ್‌ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಐಪಿ ಎಂದರೆ 'ಇಂಟರ್ನೆಟ್ ಪ್ರೋಟೋಕಾಲ್'. ಆದಾಗ್ಯೂ, ವಿಷಯ ಬೆಳಕಿಗೆ ಬಂದ ನಂತರ ಈ ಡೇಟಾವನ್ನು ತೆಗೆದುಹಾಕಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಮತ್ತೊಂದೆಡೆ, 'ಯುಎಎನ್' ಯುನಿವರ್ಸಲ್ ಅಕೌಂಟ್ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ ಮತ್ತು ಇದು ಭಾರತ ಸರ್ಕಾರದ ನೋಂದಣಿಯ ಪ್ರಮುಖ ಭಾಗವಾಗಿದೆ. ಯುಎಎನ್ ಅನ್ನು ಇಪಿಎಫ್‌ಒ ನಿಗದಿಪಡಿಸುತ್ತದೆ." ಪ್ರತಿ ದಾಖಲೆಯು ವೈವಾಹಿಕ ಸ್ಥಿತಿ, ಲಿಂಗ ಮತ್ತು ಜನ್ಮ ದಿನಾಂಕ, ಯುಎಎನ್, ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಉದ್ಯೋಗದ ಸ್ಥಿತಿ ಸೇರಿದಂತೆ ವೈಯಕ್ತಿಕ ವಿವರಗಳನ್ನು ಒಳಗೊಂಡಿದೆ ಎಂದು ಸಂಶೋಧಕರು ಹೇಳಿಕೊಂಡಿದ್ದಾರೆ. ಮೊದಲ ಐಪಿ ವಿಳಾಸದಲ್ಲಿ 280 ಮಿಲಿಯನ್ (ಅಂದರೆ 28.8 ಕೋಟಿ) ದಾಖಲೆಗಳನ್ನು ಒಳಗೊಂಡಿದ್ದರೆ, ಎರಡನೇ ಐಪಿ ವಿಳಾಸದಲ್ಲಿ ಸುಮಾರು 8.4 ಮಿಲಿಯನ್ (ಅಂದರೆ 84 ಲಕ್ಷ) ದಾಖಲೆಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-Good News: ಅಡುಗೆ ಎಣ್ಣೆ ಬೆಲೆಯಲ್ಲಿ ಮತ್ತೆ ರೂ.10 ರಷ್ಟು ಇಳಿಕೆ ಮಾಡಲು ತೈಲ ಕಂಪನಿಗಳಿಗೆ ಮೋದಿ ಸರ್ಕಾರದ ಸೂಚನೆ

ಪ್ರಸ್ತುತ ಯಾವುದೇ ಡೇಟಾ ಇಲ್ಲ
"ದತ್ತಾಂಶದ ಪ್ರಮಾಣ ಮತ್ತು ಸ್ಪಷ್ಟವಾದ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು, ಮೂಲ ಮತ್ತು ಸಂಬಂಧಿತ ಮಾಹಿತಿಯ ಬಗ್ಗೆ ಯಾವುದೇ ವಿವರಗಳನ್ನು ನೀಡದೆ ನಾನು ಅದರ ಬಗ್ಗೆ ಟ್ವೀಟ್ ಮಾಡಲು ನಿರ್ಧರಿಸಿದೆ" ಎಂದು ಡಯಾಚೆಂಕೊ ಹೇಳಿಕೊಂಡಿದ್ದಾರೆ. "ನನ್ನ ಟ್ವೀಟ್ ಮಾಡಿದ 12 ಗಂಟೆಗಳಲ್ಲಿ ಎರಡೂ ಐಪಿಗಳನ್ನು ತೆಗೆದುಹಾಕಲಾಗಿದೆ ಮತ್ತು ಇನ್ನು ಮುಂದೆ ಲಭ್ಯವಿರುವುದಿಲ್ಲ". "ಆಗಸ್ಟ್ 3 ರವರೆಗೆ, ಸ್ವೀಕರಿಸಿದ ಡೇಟಾದ ಜವಾಬ್ದಾರಿಯನ್ನು ಯಾವುದೇ ಏಜೆನ್ಸಿ ಅಥವಾ ಕಂಪನಿಯಿಂದ ಯಾವುದೇ ಪ್ರತಿಕ್ರಿಯೆಯನ್ನು ಸ್ವೀಕರಿಸಿಲ್ಲ" ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-FRP for Sugarcane: ಪಿಎಂ ಕಿಸಾನ್ 12ನೇ ಕಂತು ಬಿಡುಗಡೆಗೂ ಮುನ್ನ ಕಬ್ಬು ಬೆಳೆಗಾರರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ಮೋದಿ ಸರ್ಕಾರ?

ಭದ್ರತಾ ಸಂಶೋಧಕರ ಪ್ರಕಾರ, 'ಎರಡೂ ಐಪಿಗಳು ಅಜುರೆ-ಹೋಸ್ಟ್ ಮಾಡಲಾಗಿದ್ದವು ಮತ್ತು ಭಾರತೀಯ ಮೂಲದ ಐಪಿಗಳಾಗಿದ್ದವು ಎನ್ನಳೈದೆ.' ರಿವರ್ಸ್ ಡಿಎನ್ಎಸ್ ವಿಶ್ಲೇಷಣೆಯ ಮೂಲಕವೂ ಯಾವುದೇ ಇತರ ಮಾಹಿತಿಯನ್ನು ಪಡೆಯಲಾಗಿಲ್ಲ ಎಂದು ಭದ್ರತಾ ಸಂಶೋಧಕರು ಹೇಳಿದ್ದಾರೆ. ಶೋಡಾನ್ ಮತ್ತು ಸೆನ್ಸಿಸ್ ಸರ್ಚ್ ಇಂಜಿನ್‌ಗಳು ಆಗಸ್ಟ್ 1 ರಂದು ಅವುಗಳನ್ನು ಎತ್ತಿಕೊಂಡವು, ಆದರೆ ಸರ್ಚ್ ಇಂಜಿನ್‌ಗಳು ಅವುಗಳನ್ನು ಸೂಚಿಸುವ ಮೊದಲು ಈ ಮಾಹಿತಿಯನ್ನು ಎಷ್ಟು ಸಮಯದವರೆಗೆ ಬಹಿರಂಗಪಡಿಸಲಾಯಿತು ಎಂಬುದು ತಿಳಿದಿಲ್ಲ. ಅವರು ಟ್ವೀಟ್ ಮಾಡಿದ್ದಾರೆ, 'ಈ ಭಾರತೀಯ ಡೇಟಾಬೇಸ್‌ನಲ್ಲಿರುವ 280M+ ದಾಖಲೆಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಾಗಿದೆ. ಎಲ್ಲಿ ವರದಿ ಮಾಡಬೇಕು? @IndianCERT?" ಎರಡೂ ಐಪಿಗಳನ್ನು ಈಗ ಸಾರ್ವಜನಿಕ ಡೊಮೇನ್‌ನಿಂದ ತೆಗೆದುಹಾಕಲಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
  

Trending News