ಬೆಂಗಳೂರು: ಚಿನ್ನ ಪ್ರಿಯರಿಗೆ ಮಹ ಸಂತಸದ ಸುದ್ದಿ. ಕಳೆದ ಹನ್ನೊಂದು ತಿಂಗಳಲ್ಲಿ ಶೇ. 20 ರಷ್ಟು ದರ ಇಳಿಕೆ ಕಂಡು ದಾಖಲೆ ಬರೆದಿದೆ. ಕಳೆದ ಆಗಸ್ಟ್ ನಲ್ಲಿ 5600 ರೂ. ಇದ್ದ ಒಂದು ಗ್ರಾಂ ಚಿನ್ನ ಹಂತ ಹಂತವಾಗಿ ಕಡಿಮೆಯಾಗಿ ಇದೀಗ 4100 ರೂ.ಗೆ (ಜಿಎಸ್ ಟಿ ಹೊರತು ಪಡಿಸಿ) ಇಳಿದಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇನ್ನೂ ಕಡಿಮೆಯಾಗಲಿದೆ. ಚಿನ್ನ ಖರೀದಿ ಮಾಡಲಿಕ್ಕೆ ಸೂಕ್ತ ಕಾಲ. ಚಿನ್ನದ ಬೆಲೆ(Gold Rate) ಕಡಿಮೆ ಆಗುವ ಹಿಂದೆ ಎರಡು ಮಹತ್ವದ ಕಾರಣಗಳಿವೆ ! ಹೀಗಾಗಿ ಬರುವ ದಿನಗಳಲ್ಲಿ ಚಿನ್ನದ ಬೆಲೆ ಇನ್ನೂ ಕಡಿಮೆಯಾಗಲಿದೆ ಅಂತ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಅದಕ್ಕೆ ನೈಜ ಕಾರಣವೂ ವಿವರಿಸಿದ್ದಾರೆ.
SBI YONO ಅಪ್ಲಿಕೇಶನ್‌ನಲ್ಲಿ ಬಂಪರ್ ರಿಯಾಯಿತಿ, ಯಾವ ಬ್ರಾಂಡ್‌ನಲ್ಲಿ ಎಷ್ಟು ಆಫರ್ ಲಭ್ಯ
ಕರೋನಾ(Corona) ಸಂಕಷ್ಟ ಕಾಲದಲ್ಲೂ ಚಿನ್ನದ ಬೆಲೆ ಗಗನಕ್ಕೇರಿತ್ತು. 4,000 ಆಸು ಪಾಸಿನಲ್ಲಿದ್ದ ಒಂದು ಗ್ರಾಂ. ಚಿನ್ನದ ದರ ಏಕಾಏಕಿ 5600 ರೂ. ಜಿಗಿದಿತ್ತು. ಇದೀಗ ಹಂತ ಹಂತವಾವಾಗಿ ಇಳಿದು 4170 ರೂ.(GST ಹೊರತು ಪಡಿಸಿ) ಆಗಿದೆ. ಇದೇ ಚಿನ್ನದ ಮಾರುಕಟ್ಟೆ ಇತಿಹಾಸದಲ್ಲಿ ಈ ಪರಿ ಕಡಿಮೆಯಾಗಿದೆ. ಇನ್ನೂ ಕೆಲವು ದಿನಗಳಲ್ಲಿ ಮತ್ತಷ್ಟು ಚಿನ್ನದ ದರ ಭಾರತದ ಮಾರುಕಟ್ಟೆಯಲ್ಲಿ ಕಡಿಮೆಯಾಗಲಿದೆ ಎಂದು ಷೇರು ಮಾರುಕಟ್ಟೆಯಲ್ಲಿ ಪರಿಣಿತ ಟ್ರೇಡರ್ ತಿಳಿಸಿದ್ದಾರೆ. ಇದರ ಹಿಂದೆ ನೈಜ ಕಾರಣವೂ ಇದೆ.
LPG Gas Cylinder - ದುಬಾರಿ LPG Cylinder ನಿಂದ ನೆಮ್ಮದಿ, ಈ ರೀತಿ ಸಿಲಿಂಡರ್ ಬುಕ್ ಮಾಡಿ ಹಣ ಉಳಿತಾಯ ಮಾಡಿ
ಭಾರತ ವಿಶ್ವದಲ್ಲಿ ಚಿನ್ನವನ್ನು ಅಮದು ಮಾಡುಕೊಳ್ಳುವಳ್ಳಿ ಅಗ್ರಗಣ್ಯ ರಾಷ್ಟ್ರ. ಹಟ್ಟಿ ಚಿನ್ನದ ಗಣಿ ಹೊರತು ಪಡಿಸಿದರೆ ಭಾರತ(India)ದಲ್ಲಿ ಚಿನ್ನದ ಗಣಿಗಾರಿಕೆ ಇಲ್ಲ. ಹೀಗಾಗಿ ಹೊರ ದೇಶಗಳಿಂದಲೇ ಚಿನ್ನವನ್ನು ಅಮದು ಮಾಡಿಕೊಳ್ಳುತ್ತಿದ್ದೇವೆ. ಆಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪೂರೈಕೆ ಜಾಸ್ತಿಯಾಗಿದ್ದು, ಬೇಡಿಕೆ ಇಳಿ ಮುಖವಾಗಿ ಬೆಲೆ ಕಡಿಮೆಯಾಗಿದೆ.
Banking Facility In Villages: ಇನ್ಮುಂದೆ ಅನ್ನದಾತರಿಗೆ ಅವರ ಗ್ರಾಮದಲ್ಲಿಯೇ ಸಿಗಲಿದೆ ಬ್ಯಾಂಕಿಂಗ್ ಸೇವೆ
ಇದೇ ಅವಧಿಯಲ್ಲಿ ರೂಪಾಯಿ ಮೌಲ್ಯವೂ ಅಮೆರಿಕಾ ಡಾಲರ್(Dollar ) ಮುಂದೆ ಹೆಚ್ಚಾಗುತ್ತಿದ್ದು, ಅದರ ಪ್ರತಿಫಲ ಚಿನ್ನದ ದರ ದಾಖಲೆ ಪ್ರಮಾಣದಲ್ಲಿ ಶೇ. 20 ರಷ್ಟು ಗಣನೀಯವಾಗಿ ಇಳಿದಿದೆ. ಈಗಿನ ಅಂತಾರಾಷ್ಟೀಯ ಷೇರು ಮಾರುಕಟ್ಟೆ ಬೆಳವಣಿಗೆ ನೋಡಿದರೆ ಪ್ರತಿ ಗ್ರಾಂ ಚಿನ್ನದ ಮೇಲೆ ಇನ್ನೂ 200 ರೂ. ನಿಂದ 300 ರೂ. ಇಳಿಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಇನ್ಮುಂದೆ Android ಫೋನೇ ನಿಮ್ಮ POS ! SBI Payments-NPCIನಿಂದ ಹೊಸ ಸೇವೆ ಆರಂಭ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.