Today Gold Price: ಸಾರ್ವಕಾಲಿಕ ಮಟ್ಟದಿಂದ 4 ಸಾವಿರ ರೂ. ಕುಸಿತ ಕಂಡಿರುವ ಚಿನ್ನ; ನಿಮ್ಮ ನಗರದ ದರ ಪರಿಶೀಲಿಸಿ

ಚಿನ್ನದ ದರವು ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಕಳೆದ 9 ತಿಂಗಳಲ್ಲಿ 4 ಸಾವಿರ ರೂ.ನಷ್ಟು ಕಡಿಮೆಯಾಗಿದೆ.

Written by - Puttaraj K Alur | Last Updated : Sep 13, 2021, 12:54 PM IST
  • ಇತ್ತೀಚಿನ ದಿನಗಳಲ್ಲಿ ಹಳದಿ ಲೋಹದ ದರದಲ್ಲಿ ಸತತ ಕುಸಿತ ಕಾಣುತ್ತಿದೆ
  • ಭಾರತದಲ್ಲಿ ಚಿನ್ನದ ದರವು ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಗಣನೀಯ ಇಳಿಕೆಗೆ ಸಾಕ್ಷಿಯಾಗಿದೆ
  • ಸೋಮವಾರ(ಸೆ.13)ಚಿನ್ನದ ದರವು ಪ್ರತಿ 10 ಗ್ರಾಂ 22 ಕ್ಯಾರೆಟ್‌ಗೆ 46,100 ರೂ. ಇದೆ
Today Gold Price: ಸಾರ್ವಕಾಲಿಕ ಮಟ್ಟದಿಂದ 4 ಸಾವಿರ ರೂ. ಕುಸಿತ ಕಂಡಿರುವ ಚಿನ್ನ; ನಿಮ್ಮ ನಗರದ ದರ ಪರಿಶೀಲಿಸಿ   title=
ಪ್ರಮುಖ ನಗರಗಳಲ್ಲಿ ಚಿನ್ನದ ದರ ಪರಿಶೀಲಿಸಿರಿ (Photo Courtesy: @India.com)

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಹಳದಿ ಲೋಹದ ದರದಲ್ಲಿ ಸತತ ಕುಸಿತ ಕಾಣುತ್ತಿದೆ. ಇದು ಚಿನ್ನ ಖರೀದಿದಾರರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ವಾಸ್ತವವಾಗಿ ಭಾರತದಲ್ಲಿ ಚಿನ್ನದ ದರ(Gold Price)ವು ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಗಣನೀಯ ಇಳಿಕೆಗೆ ಸಾಕ್ಷಿಯಾಗಿದೆ. ಈ ವರ್ಷ ಜನವರಿ 5 ರಂದು ಚಿನ್ನದ ದರವು 22 ಕ್ಯಾರೆಟ್‌ನ 10 ಗ್ರಾಂಗೆ 50,320 ರೂ.ಗೆ ಏರಿಕೆಯಾಗಿತ್ತು.  ಆದರೆ ಸೋಮವಾರ(ಸೆಪ್ಟೆಂಬರ್ 13)ಚಿನ್ನದ ದರವು ಪ್ರತಿ 10 ಗ್ರಾಂ 22 ಕ್ಯಾರೆಟ್‌ಗೆ 46,100 ರೂ. ಕ್ಕಿಂತ ಕಡಿಮೆ ಇದೆ. ಇದರೊಂದಿಗೆ ಚಿನ್ನದ ದರವು ಪ್ರತಿ 10 ಗ್ರಾಂಗೆ ಕಳೆದ 9 ತಿಂಗಳಲ್ಲಿ 4 ಸಾವಿರ ರೂ.ನಷ್ಟು ಕಡಿಮೆಯಾಗಿದೆ ಎಂದು ತಿಳಿದುಬಂದಿದೆ.  

ಇದನ್ನೂ ಓದಿ: PM Kisan: ಸೆಪ್ಟೆಂಬರ್ 30ರೊಳಗೆ ಈ ಕೆಲಸ ಮಾಡಿ ಪಿಎಂ ಕಿಸಾನ್ ಯೋಜನೆಯಡಿ 4000 ರೂ.ಗಳನ್ನು ಗಳಿಸಿ 

2019ರಲ್ಲಿ ಚಿನ್ನದ ದರವು  35 ಸಾವಿರ ರೂ. ಗಡಿ ದಾಟಿತ್ತು. ಅಲ್ಲಿಂದ ಪ್ರತಿತಿಂಗಳು ಏರಿಕೆಯಾಗುತ್ತಲೇ ಬಂದ ಬಂಗಾರದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತ್ತು. ಭಾರತದ ಬಹು ಸರಕು ವಿನಿಮಯ ಕೇಂದ್ರ(Multi Commodity Exchange of India)ದಲ್ಲಿ ಚಿನ್ನದ ದರವು ಶೇ.0.40 ರಷ್ಟು ಕಡಿಮೆಯಾಗಿದೆ ಎಂದು ತಿಳಿದುಬಂದಿದೆ. ಏತನ್ಮಧ್ಯೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನವು ಶೇ.2.1ರಷ್ಟು ಇಳಿಕೆಯಾಗಿದ್ದು, ಪ್ರತಿ ಔನ್ಸ್‌ ಗೆ 1,787.40 ಡಾಲರ್ ತಲುಪಿದೆ. ಅಮೆರಿಕದ ಡಾಲರ್ ಸ್ಥಿರವಾಗಿದ್ದಾಗ್ಯೂ ಯುಎಸ್ ಚಿನ್ನದ ಫ್ಯೂಚರ್ಸ್ ಶೇ. 0.3 ರಷ್ಟು ಇಳಿಕೆಯಾಗಿ 1,786.90 ಕ್ಕೆ ತಲುಪಿದೆ.

ದೇಶದ ವಿವಿಧ ನಗರಗಳಲ್ಲಿ ಚಿನ್ನದ ದರ

ಬೆಂಗಳೂರಿನಲ್ಲಿ(Bengaluru) ಚಿನ್ನದ ದರ ಪ್ರತಿ 10 ಗ್ರಾಂ 22 ಕ್ಯಾರೆಟ್‌ಗೆ 43,990 ರೂ.

ಮುಂಬೈನಲ್ಲಿ ಚಿನ್ನದ ದರ 22 ಕ್ಯಾರೆಟ್‌ನ ಪ್ರತಿ 10 ಗ್ರಾಂಗೆ 46,070ರೂ.

ಚೆನ್ನೈನಲ್ಲಿ ಚಿನ್ನದ ಬೆಲೆ(Gold Price) 22 ಕ್ಯಾರೆಟ್ನ 10 ಗ್ರಾಂಗೆ 44,390 ರೂ.

ದೆಹಲಿಯಲ್ಲಿ ಚಿನ್ನದ ದರ 22 ಕ್ಯಾರೆಟ್‌ನ ಪ್ರತಿ 10 ಗ್ರಾಂಗೆ 46,140 ರೂ.

ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂ 22 ಕ್ಯಾರೆಟ್‌ಗೆ 46,440 ರೂ.

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ 10 ಕ್ಯಾರೆಟ್‌ಗೆ 10 ಗ್ರಾಂಗೆ 43,990 ರೂ.

ಕೇರಳದಲ್ಲಿ ಚಿನ್ನದ ದರ ಪ್ರತಿ 10 ಗ್ರಾಂ 22 ಕ್ಯಾರೆಟ್(22 Carat Gold Rate) ಗೆ 43,990 ರೂ.

ಪುಣೆಯಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂ 22 ಕ್ಯಾರೆಟ್‌ಗೆ 45,170 ರೂ.

ಅಹಮದಾಬಾದ್‌ನಲ್ಲಿ ಚಿನ್ನದ ದರ ಪ್ರತಿ 10 ಗ್ರಾಂ 22 ಕ್ಯಾರೆಟ್‌ಗೆ 45,280 ರೂ.

ಲಕ್ನೋದಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂ 22 ಕ್ಯಾರೆಟ್‌ಗೆ 46,140 ರೂ.

ಜೈಪುರದಲ್ಲಿ ಚಿನ್ನದ ದರ ಪ್ರತಿ 10 ಗ್ರಾಂ 22 ಕ್ಯಾರೆಟ್‌ಗೆ 46,190 ರೂ.

ಪಾಟ್ನಾದಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂ 22 ಕ್ಯಾರೆಟ್‌ಗೆ 45,070 ರೂ.

ನಾಗಪುರದಲ್ಲಿ ಚಿನ್ನದ ದರವು 10 ಕ್ಯಾರೆಟ್‌ನ ಪ್ರತಿ 10 ಗ್ರಾಂಗೆ 46,070 ರೂ.

ಇದನ್ನೂ ಓದಿ: Driving License: ಮನೆಯಲ್ಲಿ ಕುಳಿತು ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಪ್ರಕ್ರಿಯೆ 

ಮೇಲೆ ಉಲ್ಲೇಖಿಸಿರುವ ಚಿನ್ನದ ಬೆಲೆ ಆಭರಣ ಅಂಗಡಿಯಲ್ಲಿನ ದರಗಳಿಗೆ ಹೊಂದಿಕೆಯಾಗುವುದಿಲ್ಲ ಎಂಬುದನ್ನು ಗ್ರಾಹಕರು ದಯವಿಟ್ಟು ಗಮನಿಸಬೇಕು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News