Gold Price Today: ಮತ್ತೆ ಕುಸಿತ ಕಂಡ ಚಿನ್ನದ ದರ; ನಿಮ್ಮ ನಗರದ ಇಂದಿನ ಬೆಲೆ ಪರಿಶೀಲಿಸಿ

ಹಬ್ಬದ ಸೀಸನ್ ಸಮೀಪಿಸುತ್ತಿದ್ದಂತೆ ಹಳದಿ ಲೋಹದ ದರದಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿರುವುದರಿಂದ ಸಾಮಾನ್ಯ ಖರೀದಿದಾರರಿಗೆ ಹೆಚ್ಚಿನ ಸಂತೋಷವನ್ನು ನೀಡಿದೆ.

Written by - Puttaraj K Alur | Last Updated : Sep 29, 2021, 10:52 AM IST
  • ಚಿನ್ನದ ಬೆಲೆಯಲ್ಲಿ ಬುಧವಾರ ಪ್ರತಿ 10 ಗ್ರಾಂಗೆ 250 ರೂ. ಇಳಿಕೆಯಾಗಿದೆ
  • ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ನಿರಂತರವಾಗಿ ಇಳಿಕೆಯಾಗುತ್ತಿದೆ
  • ಹಬ್ಬದ ಸೀಸನ್ ನಲ್ಲಿ ಬಂಗಾರದ ಬೆಲೆ ಇಳಿಕೆಯಾಗುತ್ತಿರುವುದು ಖರೀದಿದಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ
Gold Price Today: ಮತ್ತೆ ಕುಸಿತ ಕಂಡ ಚಿನ್ನದ ದರ; ನಿಮ್ಮ ನಗರದ ಇಂದಿನ ಬೆಲೆ ಪರಿಶೀಲಿಸಿ

ನವದೆಹಲಿ: ಚಿನ್ನದ ಬೆಲೆ 10 ಗ್ರಾಂಗೆ 250 ರೂ. ಇಳಿಕೆಯಾಗಿದ್ದು, 45,100 ರೂ.ಗಿಂತಲೂ ಕೆಳಗೆ ವಹಿವಾಟು ನಡೆಸುತ್ತಿದೆ. ಇದರೊಂದಿಗೆ ದೇಶದಲ್ಲಿ ಚಿನ್ನದ ದರವು ಜೂನ್ ತಿಂಗಳಿನಿಂದ ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿಕೆ ಕಂಡಿದೆ. ಹಬ್ಬದ ಸೀಸನ್ ಸಮೀಪಿಸುತ್ತಿದ್ದಂತೆ ಹಳದಿ ಲೋಹದ ದರದಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿರುವುದರಿಂದ ಸಾಮಾನ್ಯ ಖರೀದಿದಾರರಿಗೆ ಹೆಚ್ಚಿನ ಸಂತೋಷವನ್ನು ನೀಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ 7 ವಾರಗಳ ಕನಿಷ್ಠ ಮಟ್ಟಕ್ಕೆ ಕುಸಿದಿರುವುದಿರುವುದು ಮತ್ತಷ್ಟು ಖುಷಿ ಹೆಚ್ಚಿಸಿದೆ.

ಇದನ್ನೂ ಓದಿ: ಕಾರು ವಿಮಾ ಪಾಲಿಸಿ ಖರೀದಿಸುವ ಮೊದಲು ತಿಳಿದುಕೊಳ್ಳಿ ಈ ನಿಯಮಗಳನ್ನು, ಇಲ್ಲದಿದ್ದರೆ ಕ್ಲೈಮ್ ತಿರಸ್ಕೃತವಾಗಬಹುದು

ಭಾರತದಲ್ಲಿ ಜೂನ್ ತಿಂಗಳಿನಲ್ಲಿ ಚಿನ್ನದ ದರವು 22 ಕ್ಯಾರೆಟ್ ನ 10 ಗ್ರಾಂಗೆ 45,740 ರೂ. ಇತ್ತು, ಜುಲೈನಲ್ಲಿ 46,190 ರೂ. ಮತ್ತು ಆಗಸ್ಟ್ ನಲ್ಲಿ  45,280 ರೂ. ಇತ್ತು.ಭಾರತದ ಬಹು ಸರಕು ವಿನಿಮಯ ಕೇಂದ್ರ(Multi Commodity Exchange of India)ದಲ್ಲಿ ಚಿನ್ನದ ಫ್ಯೂಚರ್ಸ್ 87 ರೂ . ಅಥವಾ ಶೇ.0.19ರಷ್ಟು ಕಡಿಮೆಯಾಗಿದೆ. 2,755 ಲಾಟ್‌ಗಳ ವ್ಯಾಪಾರ ವಹಿವಾಟಿನಲ್ಲಿ ಪ್ರತಿ 10 ಗ್ರಾಂ ಚಿನ್ನ 45,982 ರೂ. ತಲುಪಿದೆ. ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ತಾಜಾ ಸ್ಥಾನಗಳನ್ನು ಕಡಿತಗೊಳಿಸಿದ್ದರಿಂದ ಚಿನ್ನದ ಬೆಲೆ ಇಳಿಕೆಗೆ ಕಾರಣವಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನವು ಪ್ರತಿ ಔನ್ಸ್‌ ಗೆ 1,735.17 ಡಾಲರ್‌ಗೆ ಇಳಿದಿದೆ. ರಾಯಿಟರ್ಸ್ ವರದಿಯ ಪ್ರಕಾರ ಇದು ಆಗಸ್ಟ್ 11 ರ ನಂತರ ಅತ್ಯಂತ ಕಡಿಮೆ ಎಂದು ತಿಳಿದುಬಂದಿದೆ.

 ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ ನೋಡಿ...

  • ಬೆಂಗಳೂರಿನಲ್ಲಿ 10 ಗ್ರಾಂನ 22 ಕ್ಯಾರೆಟ್‌ಗೆ ಚಿನ್ನದ ದರ 43,190 ರೂ.
  • ಮುಂಬೈನಲ್ಲಿ ಚಿನ್ನದ ದರ ಪ್ರತಿ 10 ಗ್ರಾಂ 22 ಕ್ಯಾರೆಟ್‌ಗೆ 45,030 ರೂ.
  • ದೆಹಲಿಯಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂ 22 ಕ್ಯಾರೆಟ್‌ಗೆ 45,340 ರೂ.
  • ಚೆನ್ನೈನಲ್ಲಿ 22 ಕ್ಯಾರೆಟ್‌ನ ಪ್ರತಿ 10 ಗ್ರಾಂ ಚಿನ್ನದ ದರ 43,540 ರೂ.
  • ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ನ ಪ್ರತಿ 10 ಗ್ರಾಂ ಚಿನ್ನದ ದರ 43,190 ರೂ.
  • ಕೇರಳದಲ್ಲಿ ಚಿನ್ನದ ದರ 22 ಕ್ಯಾರೆಟ್‌ನ 10 ಗ್ರಾಂಗೆ 43,190 ರೂ.
  • ಪುಣೆಯಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂ 22 ಕ್ಯಾರೆಟ್‌ಗೆ 44,470 ರೂ.
  • ಅಹಮದಾಬಾದ್‌ನಲ್ಲಿ ಚಿನ್ನದ ದರ 22 ಕ್ಯಾರೆಟ್‌ನ 10 ಗ್ರಾಂಗೆ 44,370 ರೂ.
  • ಜೈಪುರದಲ್ಲಿ ಚಿನ್ನದ ದರ 10 ಕ್ಯಾರೆಟ್‌ನ ಪ್ರತಿ 10 ಗ್ರಾಂಗೆ 45,090 ರೂ.
  • ಲಕ್ನೋದಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂ 22 ಕ್ಯಾರೆಟ್‌ಗೆ 43,990 ರೂ.
  • ಪಾಟ್ನಾದಲ್ಲಿ ಚಿನ್ನದ ದರ ಪ್ರತಿ 10 ಗ್ರಾಂ 22 ಕ್ಯಾರೆಟ್‌ಗೆ 44,470 ರೂ.
  • ನಾಗಪುರದಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂ 22 ಕ್ಯಾರೆಟ್‌ಗೆ 45,030 ರೂ. ಇದೆ

ಇದನ್ನೂ ಓದಿ: ಇನ್ನು ಅಗ್ಗವಾಗಲಿದೆ ಬೆಲೆ..! ಸರ್ಕಾರದ ಈ ಪೋರ್ಟಲ್ ನಿಂದ ಗ್ರಾಹಕರಿಗೆ ಸಿಗಲಿದೆ ಅನೇಕ ಪ್ರಯೋಜನಗಳು

ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಕುಸಿತ ಕಾಣುತ್ತಿರುವುದು ಖರೀದಿದಾರರಿಗೆ ಖುಷಿ ನೀಡುತ್ತಿದೆ. ಕಡಿಮೆ ಬೆಲೆಯಲ್ಲಿ ಹಳದಿ ಲೋಹ ಲಭ್ಯವಾಗುತ್ತಿರುವುದರಿಂದ ಹಬ್ಬದ ದಿನಗಳಲ್ಲಿ ಚಿನ್ನ ಖರೀದಿ ಜೋರಾಗಿದೆ. ಮೇಲೆ ಉಲ್ಲೇಖಿಸಿರುವ ಚಿನ್ನದ ಬೆಲೆ ಸರಕು ಮತ್ತು ಸೇವಾ ತೆರಿಗೆ (GST) ಇಲ್ಲದಿದ್ದು ಮತ್ತು ಆಭರಣ ಅಂಗಡಿಗಳಲ್ಲಿನ ದರಕ್ಕೆ ಹೊಂದಿಕೆಯಾಗದೇ ಇರಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News