Wheat Price: ಗೋಧಿ ಬೆಲೆ ನಿಯಂತ್ರಣಕ್ಕೆ ಸರ್ಕಾರದ ದೊಡ್ಡ ನಿರ್ಧಾರ, ಫೆ.22ರಂದು ಈ ಕಾರ್ಯ ನಡೆಯಲಿದೆ

ಇದುವರೆಗೆ 2 ಹರಾಜು ಪ್ರಕ್ರಿಯೆ ನಡೆದಿದ್ದು, ಈಗ 3ನೇ ಹರಾಜು ಪ್ರಕ್ರಿಯೆ ಮುಂದಿನ ವಾರ ನಡೆಯಲಿದೆ. 3ನೇ ಇ-ಹರಾಜಿನಲ್ಲಿ 11.72 ಲಕ್ಷ ಟನ್ ಗೋಧಿಯನ್ನು ಹಿಟ್ಟಿನ ಗಿರಣಿಗಳಂತಹ ಬೃಹತ್ ಗ್ರಾಹಕರಿಗೆ ಮಾರಾಟ ಮಾಡಲು ನೀಡಲಾಗುತ್ತದೆ.

Written by - Puttaraj K Alur | Last Updated : Feb 19, 2023, 11:07 AM IST
  • ದುಬಾರಿ ಗೋಧಿ & ಹಿಟ್ಟಿನಿಂದ ಸಾಮಾನ್ಯ ಜನರಿಗೆ ಪರಿಹಾರ ನೀಡಲು ಸರ್ಕಾರದಿಂದ ಪ್ರಯತ್ನ
  • ಈ ಹಿನ್ನೆಲೆ ಕೇಂದ್ರ ಸರ್ಕಾರವು ಗೋಧಿಯ ಮೀಸಲು ಬೆಲೆಯನ್ನು ಇಳಿಕೆ ಮಾಡಿದೆ
  • ಮುಕ್ತ ಮಾರುಕಟ್ಟೆಯಡಿ ಇ-ಹರಾಜು ಮೂಲಕ 25 ಲಕ್ಷ ಟನ್ ಗೋಧಿ ಮಾರಾಟ
Wheat Price: ಗೋಧಿ ಬೆಲೆ ನಿಯಂತ್ರಣಕ್ಕೆ ಸರ್ಕಾರದ ದೊಡ್ಡ ನಿರ್ಧಾರ, ಫೆ.22ರಂದು ಈ ಕಾರ್ಯ ನಡೆಯಲಿದೆ title=
ಗೋಧಿ ಬೆಲೆ ನಿಯಂತ್ರಣಕ್ಕೆ ಕ್ರಮ

ನವದೆಹಲಿ: ದುಬಾರಿ ಗೋಧಿ ಮತ್ತು ಹಿಟ್ಟಿನಿಂದ ಸಾಮಾನ್ಯ ಜನರಿಗೆ ಪರಿಹಾರ ನೀಡಲು ಸರ್ಕಾರದಿಂದ ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಈ ಹಿನ್ನೆಲೆ ಸರ್ಕಾರ ಗೋಧಿಯ ಮೀಸಲು ಬೆಲೆಯನ್ನು ಇಳಿಕೆ ಮಾಡಿದೆ. ಇದಲ್ಲದೇ ಸರ್ಕಾರ ಮುಕ್ತ ಮಾರುಕಟ್ಟೆಯಡಿ ಇ-ಹರಾಜು ಮೂಲಕ 25 ಲಕ್ಷ ಟನ್ ಗೋಧಿಯನ್ನು ಮಾರಾಟ ಮಾಡುತ್ತಿದೆ. ಈ ಹರಾಜುಗಳನ್ನು ಎಫ್‌ಸಿಐ ಮೂಲಕ ಮಾಡಲಾಗುತ್ತಿದೆ. ಇದುವರೆಗೆ 2 ಹರಾಜು ಪ್ರಕ್ರಿಯೆ ನಡೆದಿದ್ದು, ಈಗ 3ನೇ ಹರಾಜು ಪ್ರಕ್ರಿಯೆ ಮುಂದಿನ ವಾರ ನಡೆಯಲಿದೆ. 3ನೇ ಇ-ಹರಾಜಿನಲ್ಲಿ 11.72 ಲಕ್ಷ ಟನ್ ಗೋಧಿಯನ್ನು ಹಿಟ್ಟಿನ ಗಿರಣಿಗಳಂತಹ ಬೃಹತ್ ಗ್ರಾಹಕರಿಗೆ ಮಾರಾಟ ಮಾಡಲು ನೀಡಲಾಗುತ್ತದೆ.

ಇದನ್ನೂ ಓದಿ: ಶಿವರಾತ್ರಿಯಂದೇ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ 12 ಚಿರತೆಗಳು..!

ದೇಶೀಯ ಬೆಲೆ ಏರಿಕೆಯ ಮಧ್ಯೆ ಕಳೆದ 2 ವಾರದ ಇ-ಹರಾಜಿನಲ್ಲಿ ಸುಮಾರು 12.98 ಲಕ್ಷ ಟನ್ ಗೋಧಿ ಮಾರಾಟವಾಗಿದ್ದು, ಈ ಪೈಕಿ 8.96 ಲಕ್ಷ ಟನ್‌ಗಳನ್ನು ಬಿಡ್‌ದಾರರು ಎತ್ತಿದ್ದಾರೆ. ಈ ಹಂತದ ನಂತರ ಗೋಧಿ ಮತ್ತು ಹಿಟ್ಟಿನ ಚಿಲ್ಲರೆ ದರ ಕಡಿಮೆಯಾಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಸರ್ಕಾರದಲ್ಲಿ ಭಯೋತ್ಪಾದನೆ, ದಂಗೆ, ಹಿಂಸಾಚಾರ ಶೇ.80ರಷ್ಟು ಇಳಿಕೆ: ಅಮಿತ್ ಶಾ

ಮೀಸಲು ಬೆಲೆ ಕಡಿತ 

ಕೇಂದ್ರ ಆಹಾರ ಸಚಿವಾಲಯ ಹೊರಡಿಸಿದ ಪ್ರಕಟಣೆಯಲ್ಲಿ, ಫೆಬ್ರವರಿ 22ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿರುವ 3ನೇ ಇ-ಹರಾಜಿನಲ್ಲಿ ಎಫ್‌ಸಿಐ ದೇಶಾದ್ಯಂತದ 620 ಡಿಪೋಗಳಿಂದ 11.72 ಲಕ್ಷ ಟನ್ ಗೋಧಿಯನ್ನು ಮಾರಾಟಕ್ಕೆ ನೀಡಲಿದೆ ಎಂದು ಹೇಳಲಾಗಿದೆ. ಗೋಧಿ ಮತ್ತು ಹಿಟ್ಟಿನ ಬೆಲೆಯನ್ನು ತಗ್ಗಿಸಲು ಸರ್ಕಾರವು OMSS ಯೋಜನೆಯಡಿ ಗೋಧಿ ಮಾರಾಟಕ್ಕಾಗಿ ಮೀಸಲು ಬೆಲೆಯನ್ನು ಕ್ವಿಂಟಲ್‌ಗೆ 2,150 ರೂ. ನಿಗದಿಪಡಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News