EPFO Balance: ಉದ್ಯೋಗಿಗಳ ಭವಿಷ್ಯ ನಿಧಿ ಖಾಸಗಿ ವಲಯದಲ್ಲಿ ಅರ್ಹ ಉದ್ಯೋಗಿಗಳಿಗೆ ನಿವೃತ್ತಿ ಉಳಿತಾಯ ಯೋಜನೆಯಾಗಿ ಪ್ರಮುಖ ಪಾತ್ರ ವಹಿಸುತ್ತದೆ. ಉದ್ಯೋಗದಾತ/ಕಂಪನಿ ಮತ್ತು ಉದ್ಯೋಗಿ ಇಬ್ಬರೂ ಪ್ರತಿ ತಿಂಗಳು ಇಪಿಎಫ್‌ಗೆ ಮೂಲ ವೇತನದ ಶೇಕಡಾ 12 ರಷ್ಟು ಕೊಡುಗೆ ನೀಡುತ್ತಾರೆ. ಠೇವಣಿ ಮಾಡಿದ ಮೊತ್ತಕ್ಕೆ ವಾರ್ಷಿಕವಾಗಿ ಬಡ್ಡಿಯನ್ನು ನೀಡಲಾಗುತ್ತದೆ. EPFಗೆ ಸಂಬಂಧಿಸಿದಂತೆ ಅನೇಕ ಅನುಮಾನಗಳು ಉದ್ಯೋಗಿಗಳ ಮನದಲ್ಲಿ ಆಗಾಗ ಮೂಡುತ್ತದೆ. ಅವುಗಳಲ್ಲಿ ಪ್ರಮುಖವಾದ ಸಂದೇಹವೆಂದರೆ ಸ್ಯಾಲರಿ ಸ್ಲಿಪ್‌ನಲ್ಲಿ ಕಡಿತಗೊಳಿಸಿದ ಪಿಎಫ್ ಮೊತ್ತವು ಪಿಎಫ್ ಖಾತೆಗೆ ಸರಿಯಾಗಿ ಜಮೆಯಾಗಿದೆಯೇ ಎನ್ನುವುದು.
ಕೆಲವು ಸಂದರ್ಭಗಳಲ್ಲಿ, ಸಂಬಳದಲ್ಲಿ PF ಮೊತ್ತವನ್ನು ಕಡಿತಗೊಳಿಸಲಾಗುತ್ತದೆ. ಆದರೆ ಕಡಿತಗೊಳಿಸಿದ ಮೊತ್ತವನ್ನು ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ನಿರ್ವಹಿಸುವ EPF ಖಾತೆಗೆ ಜಮಾ ಮಾಡಲಾಗಿರುವುದಿಲ್ಲ .
EPF ಮೊತ್ತವನ್ನು ಕ್ರೆಡಿಟ್ ಮಾಡದಿದ್ದರೆ ಏನು? :
ನಿಮ್ಮ ಪೇಸ್ಲಿಪ್‌ನಲ್ಲಿ ನಮೂದಿಸಲಾದ ಪ್ರಾವಿಡೆಂಟ್ ಫಂಡ್ (ಪಿಎಫ್) ಮೊತ್ತವು ನಿರ್ದಿಷ್ಟ ಸಮಯದ ನಂತರ ನಿಮ್ಮ ಇಪಿಎಫ್ ಖಾತೆಗೆ ಜಮೆಯಾಗದಿದ್ದರೆ ಏನು ಮಾಡುವುದು ಎನ್ನುವ ಪ್ರಶ್ನೆ ಬಹುತೇಕರನ್ನು ಕಾಡುತ್ತಿರುತ್ತದೆ. ಹೀಗಾದಾಗ ಭಯ ಪಡಬೇಕಿಲ್ಲ, ನೀವು ತೆಗೆದುಕೊಳ್ಳಬೇಕಾದ ಕೆಲವು ಕ್ರಮಗಳಿವೆ.
ಇದನ್ನೂ ಓದಿ : Car Loan ಕೊಳ್ಳುವಾಗ ಇವುಗಳ ಮೇಲಿನ ನಿರ್ಲಕ್ಷ್ಯದಿಂದ ಭಾರೀ ನಷ್ಟ
ಮೊದಲು, ನಿಮ್ಮ ಇಪಿಎಫ್ ಬ್ಯಾಲೆನ್ಸ್ ಪರಿಶೀಲಿಸಲು ಇಪಿಎಫ್‌ಒ ಅಥವಾ ಯುಎಎನ್ ವೆಬ್‌ಸೈಟ್‌ಗೆ ಭೇಟಿ ನೀಡಿ. ನಿಮ್ಮ ಸಂಬಳದಿಂದ ಕಡಿತಗೊಳಿಸಲಾದ ಮೊತ್ತವನ್ನು ನಿಮ್ಮ ಉದ್ಯೋಗದಾತರು ಅಥವಾ ಕಂಪನಿ ಖಾತೆಗೆ ಠೇವಣಿ ಮಾಡಿದ್ದಾರೆಯೇ ಎಂಬುದನ್ನು ಅರ್ಥಮಾಡಿಕೊಳ್ಳಲು ಇದು ನಿಮಗೆ ಸಹಾಯ ಮಾಡುತ್ತದೆ.
EPF ಕ್ರೆಡಿಟ್‌ನಲ್ಲಿ ಗಮನಾರ್ಹ ವಿಳಂಬದ ಸಂದರ್ಭದಲ್ಲಿ, ನಿಮ್ಮ ಉದ್ಯೋಗದಾತ / ಕಂಪನಿಯನ್ನು ಸಂಪರ್ಕಿಸಿ. ಉದ್ಯೋಗದಾತರು ನಿಮ್ಮ EPF ಕೊಡುಗೆಗಳನ್ನು ಕಡಿತಗೊಳಿಸಿ ಪಾವತಿಸದಿರಬಹುದು. ಒಂದು ವೇಳೆ ಹೀಗಾಗಿದ್ದರೆ ಇದು ಕ್ರಿಮಿನಲ್ ಅಪರಾಧ. ಉದ್ಯೋಗದಾತರು PF ಮೊತ್ತವನ್ನು ಠೇವಣಿ ಮಾಡದಿದ್ದರೆ, EPF ಪೋರ್ಟಲ್ ಮೂಲಕ EPFOಗೆ ದೂರು ಸಲ್ಲಿಸಬೇಕು.
ಇದರಲ್ಲಿ ನೀವು ನಿಮ್ಮ ಇಪಿಎಫ್ ಖಾತೆ ಸಂಖ್ಯೆ, ಯುಎಎನ್ ಮತ್ತು ವೈಯಕ್ತಿಕ ವಿವರಗಳನ್ನು ಒದಗಿಸಬೇಕು. ಅದರ ನಂತರ ನೀವು ನಿಮ್ಮ ಸಮಸ್ಯೆಯನ್ನು ವಿವರವಾಗಿ ವಿವರಿಸಬೇಕು. ಇದಾದ ಮೇಲೆ EPFO ಅಗತ್ಯ ಕ್ರಮವನ್ನು ತೆಗೆದುಕೊಳ್ಳುತ್ತದೆ.
ಇದನ್ನೂ ಓದಿ : ಇನ್ನು ಎಲ್ಲಾ ಸರ್ಕಾರಿ ನೌಕರರಿಗೆ ಸಿಗುವುದು ಹಳೆಯ ಪಿಂಚಣಿ ಯೋಜನೆಯ ಲಾಭ !
ಉದ್ಯೋಗದಾತ / ಕಂಪನಿ ಕಡಿತಗಳು ಮತ್ತು ಕಾನೂನು :
EPF ಕಾಯಿದೆ, 1952 ರ ಪ್ರಕಾರ, ಉದ್ಯೋಗದಾತರು / ಕಂಪನಿಯು EPF ಗಾಗಿ ಮೊತ್ತವನ್ನು ಕಡಿತಗೊಳಿಸಿ, EPF ಖಾತೆಯಲ್ಲಿ ಠೇವಣಿ ಮಾಡದಿದ್ದರೆ ಕಾಯಿದೆಯು ಪರಿಹಾರವನ್ನು ಒದಗಿಸುತ್ತದೆ.
ಅಲ್ಲದೆ, ಉದ್ಯೋಗದಾತ / ಕಂಪನಿಯ ಕೊಡುಗೆಗಳಲ್ಲಿ ಯಾವುದೇ ವಿಳಂಬವಾದರೆ, ಉದ್ಯೋಗಿಗಳು ನಿಗದಿತ ದಿನಾಂಕದಿಂದ ಸಂಪೂರ್ಣ ಬಡ್ಡಿಯನ್ನು ಪಡೆಯುತ್ತಾರೆ. EPF ಖಾತೆಗಳ ಬಡ್ಡಿ ಜಮಾ ಮಾಡುವಲ್ಲಿ ಕೆಲವು ಸಾಫ್ಟ್‌ವೇರ್ ಅಪ್‌ಡೇಟ್‌ಗಳಿಂದ ವಿಳಂಬವಾಗಿದ್ದರೂ, PF ಚಂದಾದಾರರಿಗೆ ಬಡ್ಡಿದರದಲ್ಲಿ ನಷ್ಟವಾಗುವುದಿಲ್ಲ.
ಚಂದಾದಾರರು ತಮ್ಮ ಇಪಿಎಫ್ ವಿವರಗಳು ಮತ್ತು ಪಿಎಫ್ ವರ್ಗಾವಣೆಯನ್ನು ಹೇಗೆ ಅಪ್ಡೇಟ್ ಮಾಡಬಹುದು ? :
EPF ಚಂದಾದಾರರು EPFO UAN ಪೋರ್ಟಲ್ ಮೂಲಕ ತಮ್ಮ ಹೆಸರಿನಂತಹ ವಿವರಗಳನ್ನು ಅಪ್ಡೇಟ್ ಮಾಡಬಹುದು. ಕ್ಲೈಮ್ ನಿರಾಕರಣೆಯಂತಹ ಸಮಸ್ಯೆಗಳನ್ನು ತಡೆಗಟ್ಟಲು ಈ ವಿವರಗಳು ನಿಖರವಾಗಿವೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ.
ಅಲ್ಲದೆ, ಇಪಿಎಫ್‌ಒ ಉದ್ಯೋಗಿಗಳಿಗೆ ತಮ್ಮ ಪಿಎಫ್ ಅನ್ನು ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ವರ್ಗಾಯಿಸುವ ಸೌಲಭ್ಯವನ್ನು ಒದಗಿಸಲಾಗುತ್ತದೆ. ಉದ್ಯೋಗಿ ಉದ್ಯೋಗವನ್ನು ಬದಲಾಯಿಸಿದಾಗ ಯುಎಎನ್ ಬಳಸಿ ಇದನ್ನೂ ಮಾಡಬಹುದು. ಇದು ದೀರ್ಘಾವಧಿಯ ಉಳಿತಾಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : ಇಶಾ ಅಂಬಾನಿ ನೇತೃತ್ವದ ಸಂಸ್ಥೆಯಲ್ಲಿ 5000 ಕೋಟಿ ರೂ ಹೂಡಲು ಮುಂದಾದ ಮುಖೇಶ್ ಅಂಬಾನಿ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.