ಭಾರತೀಯ ರೈಲ್ವೆ ಹೊಸ ನಿಯಮ: ಈಗ ಟಿಕೆಟ್ ಕ್ಯಾನ್ಸಲ್ ಮಾಡಿದ್ರೆ ಸಿಗುತ್ತೆ ಈ ಲಾಭ

ಭಾರತೀಯ ರೈಲ್ವೆಯು ಟಿಕೆಟ್ ರದ್ದುಗೊಳಿಸುವ ನಿಯಮಗಳಲ್ಲಿ ಪ್ರಮುಖ ಬದಲಾವಣೆ ಮಾಡಿದೆ. ಇದರಿಂದ ಪ್ರಯಾಣಿಕಾರಿಗೆ ಟಿಕೆಟ್ ರದ್ದುಗೊಳಿಸುವುದರಿಂದ ಪ್ರಯೋಜನ ಲಭ್ಯವಾಗಲಿದೆ. ಏನಿದು ಹೊಸ ನಿಯಮ ತಿಳಿಯಿರಿ.

Written by - Yashaswini V | Last Updated : Jul 21, 2022, 01:17 PM IST
  • ಪ್ರಯಾಣಿಕರ ಟಿಕೆಟ್‌ಗೆ ಸಂಬಂಧಿಸಿದಂತೆ ರೈಲ್ವೆ ಇಲಾಖೆ ಹೊಸ ನಿಯಮ ರೂಪಿಸಿದೆ.
  • ಈಗ ನೀವು ಕೆಲವೇ ನಿಮಿಷಗಳಲ್ಲಿ ಟಿಕೆಟ್‌ಗಳನ್ನು ಸುಲಭವಾಗಿ ರದ್ದುಗೊಳಿಸಬಹುದು.
  • ಈಗ ನೀವು ರೈಲ್ವೆ ಅಪ್ಲಿಕೇಶನ್ ಅಥವಾ ರೈಲ್ವೆ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ಟಿಕೆಟ್ ಅನ್ನು ರದ್ದುಗೊಳಿಸಬಹುದು.
ಭಾರತೀಯ ರೈಲ್ವೆ ಹೊಸ ನಿಯಮ: ಈಗ ಟಿಕೆಟ್ ಕ್ಯಾನ್ಸಲ್ ಮಾಡಿದ್ರೆ ಸಿಗುತ್ತೆ ಈ ಲಾಭ  title=
Railway ticket cancellation

ಭಾರತೀಯ ರೈಲ್ವೆ ಹೊಸ ನಿಯಮ:  ಭಾರತೀಯ ರೈಲ್ವೇ ಈಗ ನಿಮ್ಮ ಪ್ರಯಾಣವನ್ನು ಹೆಚ್ಚು ಆರಾಮದಾಯಕವಾಗಿಸಲು ಹೊಸ ಸೌಲಭ್ಯವನ್ನು ಪರಿಚಯಿಸಿದೆ. ಹಲವು ಬಾರಿ ಪ್ರಯಾಣಕ್ಕಾಗಿ ರೈಲ್ವೆ ಟಿಕೆಟ್ ಅನ್ನು ಮೊದಲೇ ಕಾಯ್ದಿರಿಸುತ್ತೇವೆ. ಆದರೆ, ಕೊನೆಯ ಕ್ಷಣದಲ್ಲಿ ಹಲವು ಕಾರಣಗಳಿಂದಾಗಿ ಟಿಕೆಟ್ ಕ್ಯಾನ್ಸಲ್ ಮಾಡಬೇಕಾಗುತ್ತದೆ. ಮೊದಲೆಲ್ಲಾ ಇಂತಹ ಸಂದರ್ಭದಲ್ಲಿ ಹಣ ನಷ್ಟವಾಗುತ್ತಿತ್ತು. ಆದರೀಗ ರೈಲ್ವೆ ಹೊಸ ನಿಯಮವನ್ನು ಜಾರಿಗೆ ತಂದಿದ್ದು ಪ್ರಯಾಣಿಕರು ಕೆಲವು ಸಂದರ್ಭದಲ್ಲಿ ಟಿಕೆಟ್ ರದ್ದುಗೊಳಿಸಲು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಪ್ರಯಾಣಿಕರು ಸ್ವತಃ ಟಿಕೆಟ್ ರದ್ದುಗೊಳಿಸಲು ಸಾಧ್ಯವಾಗದಿದ್ದರೆ, ಟಿಕೆಟ್ ರದ್ದುಗೊಳಿಸಲು ಪ್ರಯಾಣಿಕರು ತಮ್ಮ ನೋಂದಾಯಿತ ಇ-ಮೇಲ್ ಐಡಿಯಿಂದ ರೈಲ್ವೆಗೆ ಇ-ಮೇಲ್ ಮಾಡಬಹುದು. 

ಈ ರೀತಿ ಸುಲಭವಾಗಿ ಟಿಕೆಟ್ ಕ್ಯಾನ್ಸಲ್ ಮಾಡಬಹುದು:
ಪ್ರಯಾಣಿಕರ ಟಿಕೆಟ್‌ಗೆ ಸಂಬಂಧಿಸಿದಂತೆ ರೈಲ್ವೆ ಇಲಾಖೆ ಹೊಸ ನಿಯಮ ರೂಪಿಸಿದೆ. ಈಗ ನೀವು ಕೆಲವೇ ನಿಮಿಷಗಳಲ್ಲಿ ಟಿಕೆಟ್‌ಗಳನ್ನು ಸುಲಭವಾಗಿ ರದ್ದುಗೊಳಿಸಬಹುದು. ಈಗ ನೀವು ರೈಲ್ವೆ ಅಪ್ಲಿಕೇಶನ್ ಅಥವಾ ರೈಲ್ವೆ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ಟಿಕೆಟ್ ಅನ್ನು ರದ್ದುಗೊಳಿಸಬಹುದು. ಈಗ ರೈಲ್ವೇ ಇ-ಮೇಲ್ ಮೂಲಕ ರೈಲು ಟಿಕೆಟ್ ರದ್ದು ಮಾಡಲು ಉತ್ತಮ ಸೌಲಭ್ಯವನ್ನು ನೀಡುತ್ತಿದೆ. ಭಾರತೀಯ ರೈಲ್ವೇ ಈ ಸೌಲಭ್ಯದ ಬಗ್ಗೆ ಟ್ವೀಟ್ ಮಾಡುವ ಮೂಲಕ ಸಂಪೂರ್ಣ ಮಾಹಿತಿ ನೀಡಿದೆ. 

ಇದನ್ನೂ ಓದಿ- Indian Railways Rule: ಟ್ರೈನ್ ಟಿಕೆಟ್ ಬುಕ್ ಮಾಡುವ ಮುನ್ನ ಬರ್ತ್‌ಗೆ ಸಂಬಂಧಿಸಿದ ಈ ನಿಮಯ ತಿಳಿಯಿರಿ

ಈ ಕುರಿತಂತೆ ಟ್ವೀಟ್ ಮಾಡಿರುವ ರೈಲ್ವೆ, ಪ್ರಯಾಣಿಕರು ರೈಲ್ವೆಗೆ ಇ-ಮೇಲ್ ಮಾಡುವ ಮೂಲಕ ತಮ್ಮ ಟಿಕೆಟ್ ಅನ್ನು ರದ್ದುಗೊಳಿಸಬಹುದು. ವಾಸ್ತವವಾಗಿ, ಈ ಹಿಂದೆ ಪ್ರಯಾಣಿಕರೊಬ್ಬರು ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಿದ್ದು ರೈಲು ರದ್ದಾದ ಕಾರಣ, ಅವರು ಪ್ರಯಾಣದ ಮತ್ತೊಂದು ಆಯ್ಕೆಯನ್ನು ಆರಿಸಿಕೊಳ್ಳಬೇಕಾಯಿತು ಎಂದು ಟ್ವಿಟರ್‌ನಲ್ಲಿ ರೈಲ್ವೆಗೆ ದೂರು ನೀಡಿದ್ದರು. ಟಿಕೆಟ್ ಕಾಯ್ದಿರಿಸಲು ಅವಕಾಶ ಸಿಕ್ಕಿದ್ದು, ಟಿಕೆಟ್ ರದ್ದು ಮಾಡಿದರೂ ಹಣ ಮರುಪಾವತಿಯಾಗುತ್ತಿಲ್ಲ ಎಂದು ಪ್ರಯಾಣಿಕರು ಇದರಲ್ಲಿ ದೂರಿದ್ದಾರೆ. ಇದಕ್ಕೆ ರೈಲ್ವೆ ಇಲಾಖೆ ಉತ್ತರ ನೀಡಿದೆ.

ಇದನ್ನೂ ಓದಿ- Train Ticket Booking Tips: ತತ್ಕಾಲ್ ಟಿಕೆಟ್ ಬುಕ್ ಮಾಡುವಾಗ ಈ ಕೆಲಸ ಮಾಡಿದರೆ ಸಿಗುತ್ತೆ ಕನ್ಫರ್ಮ್ ಟಿಕೆಟ್

ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ ರೈಲ್ವೆ, 'ಪ್ರಯಾಣಿಕರು ಸ್ವತಃ ಟಿಕೆಟ್ ರದ್ದುಗೊಳಿಸಲು ಸಾಧ್ಯವಾಗದಿದ್ದರೆ, ಪ್ರಯಾಣಿಕರು ಟಿಕೆಟ್ ರದ್ದುಗೊಳಿಸಲು ಟಿಕೆಟ್‌ನಲ್ಲಿರುವ ತಮ್ಮ ನೋಂದಾಯಿತ ಇ-ಮೇಲ್ ಐಡಿಯಿಂದ ರೈಲ್ವೆಗೆ ಇ-ಮೇಲ್ ಮಾಡಬಹುದು. irctc.co.in ನಲ್ಲಿ ಟಿಕೆಟ್‌ಗಳನ್ನು ರದ್ದುಗೊಳಿಸಬಹುದು. ಇದರ ನಂತರ, ರೈಲ್ವೇ ತನ್ನ ಎರಡನೇ ಟ್ವೀಟ್‌ನಲ್ಲಿ ಕಾರ್ಯಾಚರಣೆಯ ಕಾರಣಗಳಿಂದಾಗಿ ರೈಲಿನ ಸ್ಟೇಟಸ್ ಮೇಲೆ ರೈಲ್ವೇ ಕ್ಯಾನ್ಸಲ್ ಫ್ಲಾಗ್ ವಿಧಿಸುತ್ತದೆ ಎಂದು ತಿಳಿಸಿದೆ. ಸಾಧ್ಯವಾದರೆ, ಯಾವುದೇ ಸಮಯದಲ್ಲಿ ರೈಲನ್ನು ಪುನಃಸ್ಥಾಪಿಸಬಹುದು ಎಂದು ರೈಲ್ವೆ ಹೇಳಿದೆ. ಅಂತಿಮ ಚಾರ್ಟ್ ಸಿದ್ಧವಾದ ನಂತರವೇ ಫೈನಲ್ ಸ್ಟೇಟಸ್ ಲಭ್ಯವಾಗಲಿದೆ.  ಆದ್ದರಿಂದ ಪ್ರಯಾಣಿಕರು ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಅವರು ರದ್ದತಿ ಶುಲ್ಕವನ್ನು ಪಾವತಿಸಬೇಕಾಗಬಹುದು ಎಂದು ಮಾಹಿತಿ ನೀಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News