UPI ಬಳಕೆದಾರರಿಗೆ RBI ಸಿಹಿ ಸುದ್ದಿ ! ಇನ್ನು ಒಂದೇ ಬಾರಿಗೆ ಇಷ್ಟು ಮೊತ್ತದ ಹಣ ವರ್ಗಾವಣೆ ಸಾಧ್ಯ

  UPI ಬಳಕೆದಾರರಿಗೆ ದೊಡ್ಡ ಘೋಷಣೆ ಮಾಡಿದ್ದಾರೆ. ಯುಪಿಐ ವಹಿವಾಟಿನ ಮಿತಿಯನ್ನು 5 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಆರ್‌ಬಿಐ  ಗವರ್ನರ್ ತಿಳಿಸಿದ್ದಾರೆ.

Written by - Ranjitha R K | Last Updated : Dec 8, 2023, 12:38 PM IST
  • ಯುಪಿಐ ವಹಿವಾಟಿನ ಮಿತಿ ಹೆಚ್ಚಳ
  • 5 ಲಕ್ಷದವರೆಗೆ ಪಾವತಿಗೆ ಅವಕಾಶ
  • ಹಣದುಬ್ಬರದ ಬಗ್ಗೆ ಕಳವಳ
UPI ಬಳಕೆದಾರರಿಗೆ RBI ಸಿಹಿ ಸುದ್ದಿ ! ಇನ್ನು ಒಂದೇ ಬಾರಿಗೆ  ಇಷ್ಟು ಮೊತ್ತದ ಹಣ ವರ್ಗಾವಣೆ ಸಾಧ್ಯ title=

ಬೆಂಗಳೂರು : ಶುಕ್ರವಾರ ನಡೆದ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಕುರಿತು ಆರ್‌ಬಿಐ ಗವರ್ನರ್ ಮಾಹಿತಿ ನೀಡಿದ್ದಾರೆ. ಸರ್ವ ಸದಸ್ಯರ ಒಪ್ಪಿಗೆ ಮೇರೆಗೆ  ಸತತ ಐದನೇ ಬಾರಿಗೆ ರೆಪೊ ದರದಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ ಎಂದಿದ್ದಾರೆ.  ಇದರ ಹೊರತಾಗಿ, ಅವರು UPI ಬಳಕೆದಾರರಿಗೆ ದೊಡ್ಡ ಘೋಷಣೆ ಮಾಡಿದ್ದಾರೆ. ಯುಪಿಐ ವಹಿವಾಟಿನ ಮಿತಿಯನ್ನು 5 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಆರ್‌ಬಿಐ  ಗವರ್ನರ್ ತಿಳಿಸಿದ್ದಾರೆ. ಈಗ ಒಂದೇ ಬಾರಿಗೆ 5 ಲಕ್ಷದವರೆಗೆ ಪಾವತಿ ಮಾಡಬಹುದು. ಮೊದಲು ಈ ಮಿತಿ ಒಂದು ಲಕ್ಷ ರೂಪಾಯಿಗೆ ಸೀಮಿತವಾಗಿತ್ತು. 

5 ಲಕ್ಷದವರೆಗೆ ಪಾವತಿಗೆ ಅವಕಾಶ  : 
ಹೊಸ ನಿಯಮದ ಪ್ರಕಾರ, ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ UPI ಮೂಲಕ ಒಂದು ಬಾರಿಗೆ 5 ಲಕ್ಷದವರೆಗೆ ಪಾವತಿಸಬಹುದು. ಇದಲ್ಲದೆ, ಜಿಡಿಪಿ ಬೆಳವಣಿಗೆಯ ಅಂದಾಜನ್ನು 6.50 ರಿಂದ 7 ರಷ್ಟು ಹೆಚ್ಚಿಸಿದೆ ಎಂದು ಅವರು ಹೇಳಿದ್ದಾರೆ. ಹೊಸ ವರ್ಷದ ಮೊದಲ ತ್ರೈಮಾಸಿಕದಲ್ಲಿ GDP ಅಂಕಿಅಂಶವು 6.7 ಶೇಕಡಾ ಎಂದು ನಿರೀಕ್ಷಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಬಿಡುಗಡೆಯಾದ ಅಂಕಿಅಂಶಗಳಲ್ಲಿ ಜಿಡಿಪಿ ಶೇಕಡಾ 7.6 ಕ್ಕೆ ಏರಿದೆ. 

ಇದನ್ನೂ ಓದಿ : ರೈತರಿಗೆ ಸರ್ಕಾರ ಭರ್ಜರಿ ಯೋಜನೆ ! ಲಾಭ ಪಡೆಯಲು ಇಂದೇ ನೋಂದಾಯಿಸಿಕೊಳ್ಳಿ

ಈ ಸಂದರ್ಭದಲ್ಲಿ, ಹಣದುಬ್ಬರದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಆಹಾರ ಹಣದುಬ್ಬರ ದರದ ಹೆಚ್ಚಳವು ಆತಂಕಕಾರಿಯಾಗಿದೆ ಎಂದು ಹೇಳಿದರು. ಹಣದುಬ್ಬರ ದರವನ್ನು ಶೇ.4ಕ್ಕೆ ತರುವ ಗುರಿ ತಲುಪಲು ಇಲ್ಲಿಯವರೆಗೆ ಸಾಧ್ಯವಾಗಿಲ್ಲ ಎಂದರು. ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಚಿಲ್ಲರೆ ಹಣದುಬ್ಬರ ದರವು ಶೇಕಡಾ 5.6 ರಷ್ಟಿರುವ ಸಾಧ್ಯತೆಯಿದೆ. ಅದೇ ಸಮಯದಲ್ಲಿ, ಇದು ನಾಲ್ಕನೇ ತ್ರೈಮಾಸಿಕದಲ್ಲಿ 5.2 ಶೇಕಡಾಕ್ಕೆ ಇಳಿಯಬಹುದು.  

41 ಅರ್ಥಶಾಸ್ತ್ರಜ್ಞರು ನವೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ಹೆಚ್ಚಳದ ಸಾಧ್ಯತೆಯನ್ನು ಸಮೀಕ್ಷೆಯೊಂದರಲ್ಲಿ ವ್ಯಕ್ತಪಡಿಸಿದ್ದಾರೆ. ಕಳೆದ ದಿನಗಳಲ್ಲಿ ಈರುಳ್ಳಿ ಮತ್ತು ಟೊಮೇಟೊ ಬೆಲೆ ಏರಿಕೆಯಾಗುತ್ತಿರುವುದು ಹಣದುಬ್ಬರದ ಬಗ್ಗೆ ಸರ್ಕಾರದ ಕಾಳಜಿಯನ್ನು ಹೆಚ್ಚಿಸಿದೆ. ಬೆಲೆ ನಿಯಂತ್ರಣಕ್ಕಾಗಿ ಸರ್ಕಾರ ಈರುಳ್ಳಿ ರಫ್ತು ನಿಷೇಧವನ್ನು ವಿಸ್ತರಿಸಿದೆ. ಅಕ್ಟೋಬರ್‌ನಲ್ಲಿ ಹಣದುಬ್ಬರ ದರವು ಶೇಕಡಾ 4.87 ಕ್ಕೆ ಇಳಿದಿತ್ತು. 

ಇದನ್ನೂ ಓದಿ : ಕಡಿಮೆ ಬಡ್ಡಿಯಲ್ಲಿ 3 ಲಕ್ಷದವರೆಗೆ ಸಾಲ! ರೈತರಿಗೆ ಸರ್ಕಾರದ ಯೋಜನೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News