/kannada/photo-gallery/gruhalakshmi-money-release-date-this-month-249277 ಗೃಹಲಕ್ಷ್ಮಿಯರಿಗೆ ಗುಡ್‌ ನ್ಯೂಸ್‌! ಎರಡು ಕಂತಿನ ಗೃಹಲಕ್ಷ್ಮಿ ಹಣ ಬಿಡುಗಡೆ? ಗೃಹಲಕ್ಷ್ಮಿಯರಿಗೆ ಗುಡ್‌ ನ್ಯೂಸ್‌! ಎರಡು ಕಂತಿನ ಗೃಹಲಕ್ಷ್ಮಿ ಹಣ ಬಿಡುಗಡೆ? 249277

PF ಖಾತೆದಾರರಿಗೆ ಬಂಪರ್! ಈ ದಿನ ಖಾತೆಗೆ ಸೇರುವುದು ಬಡ್ಡಿ ಮೊತ್ತ

EPF Interest Rate:ಇಲ್ಲಿಯವರೆಗೆ 2023-24ರ ಆರ್ಥಿಕ ವರ್ಷದ ಇಪಿಎಫ್ ಬಡ್ಡಿಯನ್ನು ಸರ್ಕಾರ ನೀಡಿಲ್ಲ.ಇದೀಗ ಇಪಿಎಫ್ ಬಡ್ಡಿ ಯಾವಾಗ ಖಾತೆ ಸೇರುತ್ತದೆ ಎನ್ನುವ ಪ್ರಶ್ನೆಯೇ ಜನರಲ್ಲಿ ಕೇಳಿ ಬರುತ್ತಿದೆ. 

Written by - Ranjitha R K | Last Updated : Jul 8, 2024, 12:23 PM IST
  • ವೇತನ ಪಡೆಯುವ ವರ್ಗವಾಗಿದ್ದರೆ ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ.
  • ಭವಿಷ್ಯ ನಿಧಿಯ ಮೇಲಿನ ಬಡ್ಡಿ ದರವನ್ನು ಹೆಚ್ಚಿಸುವುದಾಗಿ ಪ್ರಕಟಿಸಿತ್ತು
  • ನಡೆಯುತ್ತಿದೆ ಬಡ್ಡಿಯನ್ನು ಠೇವಣಿ ಮಾಡುವ ಪ್ರಕ್ರಿಯೆ
PF ಖಾತೆದಾರರಿಗೆ ಬಂಪರ್! ಈ ದಿನ ಖಾತೆಗೆ ಸೇರುವುದು ಬಡ್ಡಿ ಮೊತ್ತ   title=

EPF Interest Rate : ನೀವು ಸಹ ವೇತನ ಪಡೆಯುವ ವರ್ಗವಾಗಿದ್ದರೆ ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ.ಫೆಬ್ರವರಿ 2024 ರಲ್ಲಿ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) 2023-24 ರ ಆರ್ಥಿಕ ವರ್ಷಕ್ಕೆ ಭವಿಷ್ಯ ನಿಧಿಯ ಮೇಲಿನ ಬಡ್ಡಿ ದರವನ್ನು ಹೆಚ್ಚಿಸುವುದಾಗಿ ಪ್ರಕಟಿಸಿತ್ತು. EPFO  ಬಡ್ಡಿ ದರವನ್ನು 8.15% ರಿಂದ 8.25% ಕ್ಕೆ ಹೆಚ್ಚಿಸಿದೆ. ಆದರೆ ಇಲ್ಲಿಯವರೆಗೆ 2023-24ರ ಆರ್ಥಿಕ ವರ್ಷದ ಇಪಿಎಫ್ ಬಡ್ಡಿಯನ್ನು ಸರ್ಕಾರ ನೀಡಿಲ್ಲ.  ಇದೀಗ ಇಪಿಎಫ್ ಬಡ್ಡಿ ಯಾವಾಗ ಖಾತೆ ಸೇರುತ್ತದೆ ಎನ್ನುವ ಪ್ರಶ್ನೆಯೇ   ಜನರಲ್ಲಿ ಕೇಳಿ ಬರುತ್ತಿದೆ. 

ನಡೆಯುತ್ತಿದೆ ಬಡ್ಡಿಯನ್ನು ಠೇವಣಿ ಮಾಡುವ ಪ್ರಕ್ರಿಯೆ : 
ಇತ್ತೀಚೆಗೆ,ಇಪಿಎಫ್ ಸದಸ್ಯರೊಬ್ಬರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಇಪಿಎಫ್ ಬಡ್ಡಿಯ ಬಗ್ಗೆ ಪ್ರಶ್ನೆಯನ್ನು ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ಇಪಿಎಫ್‌ಒ ಬಡ್ಡಿ ಠೇವಣಿ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದೆ. ಶೀಘ್ರದಲ್ಲೇ ನಿಮ್ಮ ಖಾತೆಗೆ ಬಡ್ಡಿ ವರ್ಗವಣೆಯಾಗುವುದಾಗಿಯೂ ಹೇಳಿದೆ.   ಬಡ್ಡಿಯನ್ನು ಠೇವಣಿ ಮಾಡುವಾಗ ಅದರ ಸಂಪೂರ್ಣ ಪಾವತಿಯನ್ನು ಒಂದೇ ಬಾರಿಗೆ ಮಾಡಲಾಗುತ್ತದೆ.ಹಾಗಾಗಿ ಚಂದಾದಾರರಿಗೆ ಯಾವುದೇ ರೀತಿಯ ನಷ್ಟ  ಆಗುವುದಿಲ್ಲ.ಇನ್ನು ಬಜೆಟ್ ನಂತರ ಅಂದರೆ ಜುಲೈ 23 ರ ನಂತರ ಇ ಪಿಎಫ್ ಬಡ್ಡಿಯನ್ನು ಖಾತೆಗೆ ವರ್ಗಾಯಿಸಬಹುದು ಎಂದು ಮೂಲಗಳು ಹೇಳುತ್ತವೆ.

ಇದನ್ನೂ ಓದಿ : Gruha Lakshmi Scheme: ʼಗೃಹಲಕ್ಷ್ಮಿʼ ಹಣ ಬರದಿದ್ರೆ ಇಂದೇ ಈ ಕೆಲಸಗಳನ್ನು ಮಾಡಿ!

ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್)ಯನ್ನು ಸಾಮಾನ್ಯವಾಗಿ ಪಿಎಫ್ ಎಂದು ಕರೆಯಲಾಗುತ್ತದೆ. ಕೆಲಸ ಮಾಡುವ ಉದ್ಯೋಗಿಗಳಿಗೆ ಇದು ಪ್ರಮುಖ ಉಳಿತಾಯ ಮತ್ತು ಪಿಂಚಣಿ ಯೋಜನೆಯಾಗಿದೆ.ಉದ್ಯೋಗಿ ನಿವೃತ್ತರಾದಾಗ, ಅವರು ಈ ನಿಧಿಯಿಂದ ಹಣವನ್ನು ಪಡೆಯುತ್ತಾರೆ.EPF ಸದಸ್ಯರ ಪರವಾಗಿ,  ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಮೊತ್ತವನ್ನು ಹಿಂಪಡೆಯಲು ಅಥವಾ ವರ್ಗಾಯಿಸಲು ಕ್ಲೈಮ್ ಅನ್ನು ಸಲ್ಲಿಸಬಹುದು.

20 ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳಲ್ಲಿ ವೇತನ ಪಡೆಯುವ ವರ್ಗದ ಉದ್ಯೋಗಿಗಳಿಗೆ EPF ಖಾತೆಯಲ್ಲಿ 12% ವನ್ನು ಠೇವಣಿ ಇಡಬೇಕು.ಇಪಿಎಫ್ ಮತ್ತು ಎಂಪಿ ಆಕ್ಟ್ ಅಡಿಯಲ್ಲಿ,ಉದ್ಯೋಗಿ ತನ್ನ ಮಾಸಿಕ ಆದಾಯದ 12% ದಷ್ಟು ಇಪಿಎಫ್ ಖಾತೆಯಲ್ಲಿ ಠೇವಣಿ ಮಾಡಬೇಕು.  ಇದರ ಹೊರತಾಗಿ ಅದೇ ಮೊತ್ತವನ್ನು ಕಂಪನಿಯು ಠೇವಣಿ ಮಾಡುತ್ತದೆ. ಉದ್ಯೋಗಿ ನೀಡಿದ ಸಂಪೂರ್ಣ ಕೊಡುಗೆಯನ್ನು EPF ಖಾತೆಯಲ್ಲಿ ಠೇವಣಿ ಮಾಡಲಾಗುತ್ತದೆ. ಆದರೆ ಕಂಪನಿಯು ಠೇವಣಿ ಮಾಡಿದ ಹಣದಲ್ಲಿ 3.67% ವನ್ನು EPF ಖಾತೆಯಲ್ಲಿ ಮತ್ತು ಉಳಿದ 8.33% ಉದ್ಯೋಗಿ ಪಿಂಚಣಿ ಯೋಜನೆಗೆ (ಇಪಿಎಸ್) ಹೋಗುತ್ತದೆ.

ಇದನ್ನೂ ಓದಿ : ವ್ಯಾಪಾರೋದ್ಯಮದ ದಿಗ್ಗಜ್ಜ ಮುಖೇಶ್, ಅನಿಲ್ ಅಂಬಾನಿ ಸಹೋದರಿ ಇವರೇ ! 9 ವರ್ಷಗಳ ಹಿಂದೆಯೇ ಪತಿಯನ್ನು ಕಳೆದುಕೊಂಡ ಇವರ ಸ್ಥಿತಿ ಹೇಗಿದೆ ಗೊತ್ತಾ ?

ಬಡ್ಡಿ ದರ ಎಷ್ಟು? : 
2023-2024ರ ಹಣಕಾಸು ವರ್ಷದಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಮೇಲಿನ ಬಡ್ಡಿ ದರವನ್ನು 8.15% ರಿಂದ 8.25% ಕ್ಕೆ ಹೆಚ್ಚಿಸಲಾಗಿದೆ.ಇದರರ್ಥ ಈಗ ನಿಮ್ಮ ಇಪಿಎಫ್ ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತಕ್ಕೆ ಮೊದಲಿಗಿಂತ ಹೆಚ್ಚು ಬಡ್ಡಿ ಸಿಗುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.