ನವದೆಹಲಿ: ನೀವು ಯಾವುದೇ ರಿಸ್ಕ್ ಇಲ್ಲದೆ ಉತ್ತಮ ಲಾಭ ಬಯಸಿದರೆ ಪೋಸ್ಟ್ ಆಫೀಸ್ ಯೋಜನೆ (Post Office Scheme)ಗಳು ಉತ್ತಮವಾಗಿವೆ. ಪೋಸ್ಟ್ ಆಫೀಸ್ MIS ಅಂತಹ ಉಳಿತಾಯ ಯೋಜನೆಯಾಗಿದ್ದು, ಇದರಲ್ಲಿ ನೀವು ಒಮ್ಮೆ ಹೂಡಿಕೆ ಮಾಡುವ ಮೂಲಕ ಪ್ರತಿ ತಿಂಗಳು ಬಡ್ಡಿಯ ಲಾಭ ಪಡೆಯಲು ಸಾಧ್ಯವಾಗುತ್ತದೆ. ಈ ಖಾತೆಯಲ್ಲಿ ಅನೇಕ ಪ್ರಯೋಜನಗಳು ಲಭ್ಯವಿವೆ (Post Office Saving Scheme). ಈ ಖಾತೆಯನ್ನು 10 ವರ್ಷ ಮೇಲ್ಪಟ್ಟ ಮಕ್ಕಳ ಹೆಸರಲ್ಲೂ ತೆರೆಯಬಹುದಾಗಿದೆ. ನಿಮ್ಮ ಮಕ್ಕಳ ಹೆಸರಿನಲ್ಲಿ ನೀವು ಖಾತೆಯನ್ನು (Post Office Monthly Income Scheme)ತೆರೆದರೆ, ನಂತರ ನೀವು ಪ್ರತಿ ತಿಂಗಳು ಪಡೆಯುವ ಬಡ್ಡಿಗೆ ಮಕ್ಕಳ ಬೋಧನಾ ಶುಲ್ಕವನ್ನು ಪಾವತಿಸಬಹುದು.
ಖಾತೆಯನ್ನು ಎಲ್ಲಿ ತೆರೆಯಬೇಕು
ನೀವು ಯಾವುದೇ ಅಂಚೆ ಕಚೇರಿಗೆ ಹೋಗಿ ಈ ಪೋಸ್ಟ್ ಆಫೀಸ್ ಖಾತೆಯನ್ನು (Post Office Monthly Income Scheme Benefits)ತೆರೆಯಬಹುದು. ಇದರಡಿ ಕನಿಷ್ಠ 1000 ರೂ., ಗರಿಷ್ಠ 4.5 ಲಕ್ಷ ರೂ. ಠೇವಣಿ ಇಡಬಹುದು. ಪ್ರಸ್ತುತ ಈ ಯೋಜನೆಯಡಿ ಬಡ್ಡಿ ದರ (Post Office Monthly income Scheme Interest Rate 2021) ಶೇ.6.6ರಷ್ಟು ಇದೆ. ಮಗುವಿನ ವಯಸ್ಸು 10 ವರ್ಷಕ್ಕಿಂತ ಹೆಚ್ಚಿದ್ದರೆ ನೀವು ಅವರ ಹೆಸರಿನಲ್ಲಿ ಈ ಖಾತೆಯನ್ನು (MIS Benefits)ತೆರೆಯಬಹುದು ಮತ್ತು ಮಗುವಿನ ವಯಸ್ಸು ಕಡಿಮೆಯಿದ್ದರೆ ಪೋಷಕರು ಈ ಖಾತೆಯನ್ನು ತೆರೆಯಬಹುದು. ಈ ಯೋಜನೆಯ ಮುಕ್ತಾಯವು 5 ವರ್ಷಗಳು. ಅದರ ನಂತರ ಅದನ್ನು ನಿಲ್ಲಿಸಿ ನಿಮ್ಮ ಹಣವನ್ನು ಪಡೆದುಕೊಳ್ಳಬಹುದು.
ಇದನ್ನೂ ಓದಿ: Aadhaar-Ration Link: ಕುಳಿತಲ್ಲೇ ಮಾಡಿಬಿಡಬಹುದು ಆಧಾರ್ ಮತ್ತು ರೇಶನ್ ಕಾರ್ಡ್ ಲಿಂಕ್, ಸಿಗಲಿದೆ ಬಹಳಷ್ಟು ಪ್ರಯೋಜನ
ಹೀಗಿದೆ ಯೋಜನೆಯ ಲೆಕ್ಕಾಚಾರ
ನಿಮ್ಮ ಮಗುವಿಗೆ 10 ವರ್ಷ ವಯಸ್ಸಾಗಿದ್ದರೆ ಮತ್ತು ನೀವು 2 ಲಕ್ಷ ರೂ.ವನ್ನು ಅವರ ಹೆಸರಿನಲ್ಲಿ ಠೇವಣಿ ಮಾಡಿದರೆ ಪ್ರತಿ ತಿಂಗಳು ನಿಮ್ಮ ಬಡ್ಡಿಯು ಪ್ರಸ್ತುತ ಶೇ.6.6 ರ ದರದಲ್ಲಿ 1,100 ರೂ. ಆಗುತ್ತದೆ. 5 ವರ್ಷಗಳಲ್ಲಿ ಈ ಬಡ್ಡಿಯು ಒಟ್ಟು 66 ಸಾವಿರ ರೂ. ಆಗುತ್ತದೆ ಮತ್ತು ಕೊನೆಯಲ್ಲಿ ನೀವು 2 ಲಕ್ಷ ರೂ.ಗಳನ್ನು ಹಿಂತಿರುಗಿ ಪಡೆಯುತ್ತೀರಿ.(Post Office Monthly income Scheme In Hindi). ಈ ರೀತಿ ಒಂದು ಸಣ್ಣ ಮಗುವಿಗೆ ನೀವು ಅವನ ಶಿಕ್ಷಣಕ್ಕೆ ಬೇಕಾದ ವೆಚ್ಚ 1,100 ರೂಗಳನ್ನು ಪಡೆಯುತ್ತೀರಿ. ಈ ಸಣ್ಣ ಮೊತ್ತವು ಪೋಷಕರಿಗೆ ಉತ್ತಮ ಸಹಾಯವಾಗಬಹುದು.
ಪ್ರತಿ ತಿಂಗಳು 1,925 ರೂ. ಲಭ್ಯವಿರುತ್ತವೆ
ಈ ಖಾತೆಯ ವಿಶೇಷತೆ (Post Office Monthly income Scheme Calculator) ಒಂದೇ ಅಥವಾ 3 ವಯಸ್ಕರೊಂದಿಗೆ ಜಂಟಿ ಖಾತೆಯನ್ನು ತೆರೆಯಬಹುದು. ಈ ಖಾತೆಯಲ್ಲಿ ನೀವು 3.50 ಲಕ್ಷ ರೂ.ಗಳನ್ನು ಠೇವಣಿ ಮಾಡಿದರೆ, ನೀವು ಪ್ರಸ್ತುತ ದರದಲ್ಲಿ ಪ್ರತಿ ತಿಂಗಳು 1,925 ರೂ. ಪಡೆಯುತ್ತೀರಿ. ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಶಿಕ್ಷಣಕ್ಕೆ ಇದು ಸಹಕಾರಿಯಾಗುತ್ತದೆ.
ಇದನ್ನೂ ಓದಿ: 7th Pay Commission: Good News - ಶೀಘ್ರದಲ್ಲಿಯೇ ಈ ಸರ್ಕಾರಿ ನೌಕರರ ಖಾತೆ ಸೇರಲಿದೆ 4 ತಿಂಗಳ DA ಬಾಕಿ
ಈ ಬಡ್ಡಿಯ ಹಣದಿಂದ (Post Office Monthly income Scheme For Children) ನೀವು ಶಾಲಾ ಶುಲ್ಕ, ಬೋಧನಾ ಶುಲ್ಕ, ಪೆನ್-ಕಾಪಿ ವೆಚ್ಚಗಳನ್ನು ಸುಲಭವಾಗಿ ಹಿಂಪಡೆಯಬಹುದು. ಈ ಯೋಜನೆಯ ಗರಿಷ್ಠ ಮಿತಿಯನ್ನು ಅಂದರೆ 4.5 ಲಕ್ಷ ರೂ.ಗಳನ್ನು ಠೇವಣಿ ಮಾಡಿದರೆ ನೀವು ಪ್ರತಿ ತಿಂಗಳು 2,475 ರೂ.ಗಳ ಲಾಭವನ್ನು ಪಡೆಯಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.