ನವದೆಹಲಿ: ರಸ್ನಾ ಗ್ರೂಪ್ ಸಂಸ್ಥಾಪಕ ಮತ್ತು ಅಧ್ಯಕ್ಷ ಅರೀಜ್ ಫಿರೋಜ್ಶಾ ಖಂಬಾಟ್ ವಿಧಿವಶರಾಗಿದ್ದಾರೆ. ಅರೀಜ್ ಖಂಬಾಟ್ ಬೆನೆವೊಲೆಂಟ್ ಟ್ರಸ್ಟ್ ಮತ್ತು ರಸ್ನಾ ಫೌಂಡೇಶನ್ನ ಅಧ್ಯಕ್ಷರೂ ಆಗಿದ್ದರು. 85 ವರ್ಷದ ಖಂಬಾಟ್ ಅವರು ಶನಿವಾರ ನಿಧನರಗಿದ್ದಾರೆ ಎಂದು ತಿಳಿದುಬಂದಿದೆ. ಅವರು WAPIZ ನ ಮಾಜಿ ಅಧ್ಯಕ್ಷರಾಗಿದ್ದರು (ಪಾರ್ಸಿ ಇರಾನಿ ಝಾರ್ಥೋಸ್ಟಿಸ್ನ ವಿಶ್ವ ಒಕ್ಕೂಟ) ಮತ್ತು ಅಹಮದಾಬಾದ್ ಪಾರ್ಸಿ ಪಂಚಾಯತ್ನ ಹಿಂದಿನ ಅಧ್ಯಕ್ಷರು, ಫೆಡರೇಶನ್ ಆಫ್ ಪಾರ್ಸಿ ಜೊರಾಸ್ಟ್ರಿಯನ್ ಅಂಜುಮಾನ್ಸ್ ಆಫ್ ಇಂಡಿಯಾದ ಉಪಾಧ್ಯಕ್ಷರಾಗಿದ್ದರು.
ಇದನ್ನೂ ಓದಿ : ಇದು "ಕೊರಗಜ್ಜ ದೈವ"ದ ನಿಜ ಜೀವನದ ಕಥೆಯ ಚಿತ್ರವೇ?
ಖಂಬಾಟ್ ಅವರು ಭಾರತೀಯ ಕೈಗಾರಿಕೆ, ವ್ಯಾಪಾರ, ಮತ್ತು ಮುಖ್ಯವಾಗಿ ಸಾಮಾಜಿಕ ಸೇವೆಯ ಮೂಲಕ ಸಮಾಜದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ದೇಶದ 1.8 ಮಿಲಿಯನ್ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಮಾರಾಟವಾಗುವ ಪಾನೀಯ ಬ್ರಾಂಡ್ ರಸ್ನಾವನ್ನು ತಯಾರಿಕೆಯಲ್ಲಿ ಖಂಬಾಟ್ ಹೆಸರುವಾಸಿಯಾಗಿದೆ. ರಸ್ನಾ ಈಗ ವಿಶ್ವದ ಅತಿ ದೊಡ್ಡ ತಂಪು ಪಾನೀಯ ಸಾಂದ್ರೀಕರಣ ತಯಾರಕವಾಗಿದೆ.
ರಸ್ನಾ ಈಗ ಪ್ರಪಂಚದಾದ್ಯಂತ 60 ದೇಶಗಳಲ್ಲಿ ಮಾರಾಟವಾಗುತ್ತಿದೆ ಮತ್ತು ಬಹುರಾಷ್ಟ್ರೀಯ ಸಂಸ್ಥೆಗಳು (MNC ಗಳು) ಪ್ರಾಬಲ್ಯ ಹೊಂದಿರುವ ಪಾನೀಯ ವಿಭಾಗದಲ್ಲಿ ಖಂಬಾಟ್ ಯಾವಾಗಲೂ ಮಾರುಕಟ್ಟೆ ನಾಯಕರಾಗಿದ್ದಾರೆ. ಅವರು 1970 ರ ದಶಕದಲ್ಲಿ ಹೆಚ್ಚಿನ ವೆಚ್ಚದಲ್ಲಿ ಮಾರಾಟವಾಗುವ ತಂಪು ಪಾನೀಯ ಉತ್ಪನ್ನಗಳಿಗೆ ಪರ್ಯಾಯವಾಗಿ ಕೈಗೆಟುಕುವ ದರದಲ್ಲಿ ರಸ್ನಾದ ತಂಪು ಪಾನೀಯ ಪ್ಯಾಕ್ಗಳನ್ನು ತಯಾರಿಸಲು ಆರಂಭಿಸಿದರು.
ಇದನ್ನೂ ಓದಿ : ಚುನಾವಣಾ ಅಭ್ಯರ್ಥಿಗಳನ್ನು ಘೋಷಿಸುವ ಹಕ್ಕು ಸಿದ್ದರಾಮಯ್ಯಗಿಲ್ಲ: ಡಿಕೆಶಿ
5 ರೂಪಾಯಿಯ ರಸ್ನಾ ಪ್ಯಾಕ್ನಿಂದ 32 ಗ್ಲಾಸ್ ತಂಪು ಪಾನೀಯವನ್ನು ತಯಾರಿಸಬಹುದು. ಪ್ರತಿ ಗ್ಲಾಸ್ಗೆ ಕೇವಲ 15 ಪೈಸೆ ವೆಚ್ಚವಾಗುತ್ತದೆ. ಬ್ರ್ಯಾಂಡ್ನ "ಐ ಲವ್ ಯು ರಸ್ನಾ" ಅಭಿಯಾನವು 80 ಮತ್ತು 90 ರ ದಶಕದಲ್ಲಿ ಬೆಳೆದ ಜನರ ಮನಸ್ಸಿನಲ್ಲಿ ಇನ್ನೂ ಅಚ್ಚಳಿಯದೇ ಉಳಿದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.