ಪೇಟಿಎಂ UPI ಕಾರ್ಯಾಚರಣೆ ಮುಂದುವರಿಕೆಗೆ ಸಹಾಯ ಮಾಡುವಂತೆ NPCIಗೆ RBI ಸೂಚನೆ

2024ರ ಮಾರ್ಚ್ 15ರ ನಂತರ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ತನ್ನ ಗ್ರಾಹಕರ ಖಾತೆಗಳು ಮತ್ತು ವ್ಯಾಲೆಟ್‌ಗಳಿಗೆ ಹೆಚ್ಚಿನ ಕ್ರೆಡಿಟ್‌ಗಳನ್ನು ಸ್ವೀಕರಿಸುವುದನ್ನು ಕೇಂದ್ರ ಬ್ಯಾಂಕ್ ನಿಷೇಧಿಸಿದೆ.

Written by - Puttaraj K Alur | Last Updated : Feb 23, 2024, 07:53 PM IST
  • ಪೇಟಿಎಂ UPI ಕಾರ್ಯಾಚರಣೆ ಮುಂದುವರಿಕೆಗೆ ಸಹಾಯ ಮಾಡುವಂತೆ NPCIಗೆ RBI ಸೂಚನೆ
  • ಥರ್ಡ್ ಪಾರ್ಟಿ ಅಪ್ಲಿಕೇಶನ್ ಪ್ರೊವೈಡರ್ ಆಗುವ ಸಾಧ್ಯತೆ ಪರಿಶೀಲಿಸುವಂತೆ NPCIಗೆ RBI ತಿಳಿಸಿದೆ
  • ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ತನ್ನ ಗ್ರಾಹಕರ ಖಾತೆ ಮತ್ತು ವ್ಯಾಲೆಟ್‌ಗಳಿಗೆ ಹೆಚ್ಚಿನ ಕ್ರೆಡಿಟ್‌ ಸ್ವೀಕರಿಸುವುದನ್ನು ಕೇಂದ್ರ ಬ್ಯಾಂಕ್ ನಿಷೇಧಿಸಿದೆ

Trending Photos

ಪೇಟಿಎಂ UPI ಕಾರ್ಯಾಚರಣೆ ಮುಂದುವರಿಕೆಗೆ ಸಹಾಯ ಮಾಡುವಂತೆ NPCIಗೆ RBI ಸೂಚನೆ title=
Paytm Payments Bank

ನವದೆಹಲಿ: ಪೇಟಿಎಂ ಅಪ್ಲಿಕೇಶನ್ ಕಾರ್ಯಾಚರಣೆ ಮುಂದುವರಿಸಲು ಮತ್ತು @paytm ಹ್ಯಾಂಡಲ್‌ಗಳನ್ನು4-5 ಬ್ಯಾಂಕುಗಳಿಗೆ ಸ್ಥಳಾಂತರಿಸಲು ಅನುಕೂಲವಾಗುವಂತೆ UPI ಚಾನೆಲ್ ಬಳಕೆ ಪರಿಶೀಲಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಶುಕ್ರವಾರ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI)ಗೆ ಸೂಚಿಸಿದೆ.

ಪೇಟಿಎಂ ಆ್ಯಪ್‌ UPI ಕಾರ್ಯಾಚರಣೆ ಮುಂದುವರಿಸಲು ಥರ್ಡ್ ಪಾರ್ಟಿ ಅಪ್ಲಿಕೇಶನ್ ಪ್ರೊವೈಡರ್ ಆಗುವ ಸಾಧ್ಯತೆಯನ್ನು ಪರಿಶೀಲಿಸುವಂತೆ NPCIಗೆ RBI ತಿಳಿಸಿದೆ. 2024ರ ಮಾರ್ಚ್ 15ರ ನಂತರ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ತನ್ನ ಗ್ರಾಹಕರ ಖಾತೆಗಳು ಮತ್ತು ವ್ಯಾಲೆಟ್‌ಗಳಿಗೆ ಹೆಚ್ಚಿನ ಕ್ರೆಡಿಟ್‌ಗಳನ್ನು ಸ್ವೀಕರಿಸುವುದನ್ನು ಕೇಂದ್ರ ಬ್ಯಾಂಕ್ ನಿಷೇಧಿಸಿದೆ.

ಇದನ್ನೂ ಓದಿ: ಬೈಜುಸ್ ವಿರುದ್ಧ ನಾಲ್ವರು ಹೂಡಿಕೆದಾರರಿಂದ ಕಾನೂನು ಕ್ರಮ!: ರವೀಂದ್ರನ್ ಪದಚ್ಯುತಿಗೆ ಆಗ್ರಹ

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ನಿರ್ವಹಿಸುವ @paytm ಹ್ಯಾಂಡಲ್ ಬಳಸಿ UPI ಗ್ರಾಹಕರು ತಡೆರಹಿತ ಡಿಜಿಟಲ್ ಪಾವತಿಗಳನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಪೇಟಿಎಂ ಆ್ಯಪ್‌ UPI ಕಾರ್ಯಾಚರಣೆ ಮುಂದುವರಿಸಲು UPI ಚಾನೆಲ್‌ಗೆ ಥರ್ಡ್-ಪಾರ್ಟಿ ಅಪ್ಲಿಕೇಶನ್ ಪ್ರೊವೈಡರ್ (TPAP) ಆಗಬೇಕೆಂಬ ವಿನಂತಿಯನ್ನು ಪರಿಶೀಲಿಸುವಂತೆ RBI ರಾಷ್ಟ್ರೀಯ ಪಾವತಿ ನಿಗಮವನ್ನು (NPCI) ಕೇಳಿದೆ. ಪೇಟಿಎಂ ಬ್ರಾಂಡ್ ಮಾಲೀಕತ್ವದ One97 Communications Ltd (OCL) ಈ ಮನವಿ ಮಾಡಿದೆ ಎಂದು RBI ಹೇಳಿಕೆಯಲ್ಲಿ ತಿಳಿಸಿದೆ.

ಪೇಟಿಎಂ ಷೇರು 5% ಏರಿಕೆ!

ಶುಕ್ರವಾರದ ವಹಿವಾಟು ಅಂತ್ಯಕ್ಕೆ ಪೇಟಿಎಂ ಷೇರು Upper Circuit ಕಾಣುವ ಮೂಲಕ ಶೇ.5ರಷ್ಟು ಏರಿಕೆ ಕಂಡಿದೆ. IPOದಲ್ಲಿ ಲಿಸ್ಟ್‌ ಆದಾಗಿನಿಂದ ಇಲ್ಲಿವರೆಗೆ ಪೇಟಿಎಂ ಷೇರು ಶೇ.73.88ರಷ್ಟು ಕುಸಿತ ಕಂಡಿದೆ.

ಇದನ್ನೂ ಓದಿ: Paytm ಗೆ ಮತ್ತೊಂದು ಬಿಗ್ ಶಾಕ್ ನೀಡಿದ ಆರ್ಬಿಐ, ಬೇರೆ ಬ್ಯಾಂಕ್ ಗಳಿಗೆ ವ್ಯಾಲೇಟ್ ಶಿಫ್ಟ್ ಮಾಡಲು ಆಪ್ ಬಳಕೆದಾರರಿಗೆ ಸಲಹೆ, ಇದೇ ಲಾಸ್ಟ್ ಡೇಟ್!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
 

Trending News