ನವದೆಹಲಿ: ದೇಶೀಯ ಷೇರು ಮಾರುಕಟ್ಟೆಯಲ್ಲಿ ಇಂದು (ಏ.22) ಭಾರೀ ಮಾರಾಟದ ಒತ್ತಡ ಕಂಡುಬಂದಿದ್ದು, ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಸೂಚ್ಯಂಕಗಳು ವ್ಯವಹಾರದಲ್ಲಿ ದೊಡ್ಡ ಕುಸಿತವನ್ನು ಕಂಡಿವೆ.
ಶುಕ್ರವಾರದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ 714.53 ಅಂಕ(ಶೇ.1.23) ಕುಸಿತ ಕಂಡಿದ್ದರೆ, ನಿಫ್ಟಿ 220.65 ಅಂಕ(ಶೇ.1.27) ಕುಸಿತ ಕಂಡಿದೆ. ಸೆನ್ಸೆಕ್ಸ್ 57,197.15 ಮಟ್ಟದಲ್ಲಿ ವಹಿವಾಟು ನಡೆಸುತ್ತಿದ್ದರೆ, ನಿಫ್ಟಿಯ ವಹಿವಾಟು 17,171.95ಕ್ಕೆ ಕೊನೆಗೊಂಡಿದೆ. ಕಳೆದ ಕೆಲವು ದಿನಗಳಿಂದ ಷೇರುಮಾರುಕಟ್ಟೆ ಕುಸಿತ ಕಾಣುತ್ತಿದ್ದು, ಹೂಡಿಕೆದಾರರು ನಷ್ಟವನ್ನು ಅನುಭವಿಸಿದ್ದಾರೆ.
ಇದನ್ನೂ ಓದಿ: ಬ್ಯಾಂಕ್ ಲಾಕರ್ ಹೊಸ ನಿಯಮಗಳು: ಗ್ರಾಹಕರಿಗೆ ಸಿಗುವ ಪ್ರಯೋಜನಗಳಿವು!
ಅಮೆರಿಕದ ಮಾರುಕಟ್ಟೆ ಕುಸಿತ!
ಶುಕ್ರವಾರ ಬೆಳಗ್ಗೆ ವಹಿವಾಟಿನ ಆರಂಭದಲ್ಲಿ 30 ಸೆನ್ಸೆಕ್ಸ್ ಶೇರುಗಳ ಪೈಕಿ 26 ಷೇರುಗಳು ಕುಸಿತ ಕಂಡವು. ಇದಕ್ಕೂ ಮುನ್ನ ಅಮೆರಿಕದ ಮಾರುಕಟ್ಟೆಯಲ್ಲಿ Dow Jones 370 ಅಂಕ ಕುಸಿದು ದಿನದ ವಹಿವಾಟನ್ನು ಕನಿಷ್ಠ ಮಟ್ಟದಲ್ಲಿ ಕೊನೆಗೊಳಿಸಿತು. ಅದೇ ರೀತಿ ನಾಸ್ಡಾಕ್ ಶೇ.2 ರಷ್ಟು ಕಡಿಮೆಯಾಗಿದೆ. ಐಟಿ ಷೇರುಗಳಲ್ಲಿ ಭಾರಿ ಇಳಿಕೆಯಾಗಿದೆ. ಅಮೆರಿಕದ ಮಾರುಕಟ್ಟೆಯು ಉತ್ತಮ ಆರಂಭವನ್ನು ಹೊಂದಿದ್ದರೂ ಸಹ ಹೂಡಿಕೆದಾರರಿಗೆ ಭಾರೀ ನಷ್ಟವುಂಟಾಗಿದೆ. ನೆಟ್‌ಫ್ಲಿಕ್ಸ್‌ನ ಷೇರುಗಳು ಸಹ ಶೇ.3.5ರಷ್ಟು ಕುಸಿದಿದೆ.
ಗುರುವಾರ ಮಾರುಕಟ್ಟೆಯಲ್ಲಿ ಅಬ್ಬರ ಕಂಡು ಬಂದಿತ್ತು
ಗುರುವಾರದಂದು ಭಾರತೀಯ ಷೇರುಪೇಟೆ ಸತತ 2ನೇ ದಿನವೂ ಏರಿಕೆ ಕಂಡಿತ್ತು. ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ 874 ಪಾಯಿಂಟ್‌ಗಳ ಏರಿಕೆ ಕಂಡು 57,911.68ಕ್ಕೆ ಮತ್ತು ನಿಫ್ಟಿ 256.05 ಪಾಯಿಂಟ್‌ಗಳ ಏರಿಕೆ ಕಂಡು 17,392.60ಕ್ಕೆ ತಲುಪಿತ್ತು. ಇದಕ್ಕೂ ಮೊದಲು ಸತತ 5 ವಹಿವಾಟು ಅವಧಿಗಳಲ್ಲಿ ಸೆನ್ಸೆಕ್ಸ್ ಸುಮಾರು 3 ಸಾವಿರ ಪಾಯಿಂಟ್‌ಗಳಷ್ಟು ಕುಸಿತ ಕಂಡಿತ್ತು.
ಇದನ್ನೂ ಓದಿ: Arecanut Today Price: ರಾಜ್ಯದ ಮಾರುಕಟ್ಟೆಯಲ್ಲಿ ರಾಶಿ ಅಡಿಕೆಗೆ ಬಂಪರ್ ಬೆಲೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.