ಅಮೆಜಾನ್ ಫ್ಲಿಪ್ ಕಾರ್ಟ್ ಗೆ ಟಕ್ಕರ್ ನೀಡಲು ರೆಡಿಯಾಗಿದೆ ದೇಸಿ ‘Bharat e Market’

Bharat e Marketನ ಮೊಬೈಲ್ ಆಪ್ ಸಂಪೂರ್ಣ ಭಾರತೀಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಎಂದು CAIT ಹೆಳಿದೆ. ನರೇಂದ್ರ ಮೋದಿಯವರ ವೋಕಲ್ ಫಾರ್ ಲೋಕಲ್ ವಿಷನ್‌ ಅನ್ನು ಆಧರಿಸಿ ಈ ಆಪ್ ಅನ್ನು ತಯಾರಿಸಲಾಗಿದೆ.

Written by - Ranjitha R K | Last Updated : Mar 11, 2021, 05:15 PM IST
  • ಬಂದಿದೆ ದೇಸಿ Bharat e Market App
  • ಅಮೆಜಾನ್ ಫ್ಲಿಪ್‌ಕಾರ್ಟ್ ಗೆ ಟಕ್ಕರ್ ನೀಡಲಿದೆ 'ಭಾರತ್ ಇ ಮಾರ್ಕೆಟ್'
  • ಇಲ್ಲಿ ಚೀನಿ ವಸ್ತುಗಳ ಮಾರಾಟ ನಿಷೇಧ
ಅಮೆಜಾನ್ ಫ್ಲಿಪ್ ಕಾರ್ಟ್ ಗೆ ಟಕ್ಕರ್ ನೀಡಲು ರೆಡಿಯಾಗಿದೆ ದೇಸಿ ‘Bharat e Market’ title=
ಬಂದಿದೆ ದೇಸಿ Bharat e Market App (Photo twitter)

ನವದೆಹಲಿ: Bharat e Market App Launch : ಅಮೆಜಾನ್, ಫ್ಲಿಪ್‌ಕಾರ್ಟ್ ಜೊತೆಗೆ ಆನ್‌ಲೈನ್ ಶಾಪಿಂಗ್‌ಗಾಗಿ ಈಗ ಮತ್ತೊಂದು ದೊಡ್ಡ ಪೋರ್ಟಲ್ ಬಂದಿದೆ.  ಸುಮಾರು 8 ಕೋಟಿ ವ್ಯಾಪಾರಿಗಳ ಸಂಘಟನೆಯಾದ Confederation of All India Traders (CAIT) ವೆಂಡರ್ ಮೊಬೈಲ್ ಅಪ್ಲಿಕೇಶನ್ 'ಭಾರತ್ ಇ ಮಾರ್ಕೆಟ್' ಅನ್ನು ದೆಹಲಿಯಲ್ಲಿ ಬಿಡುಗಡೆ ಮಾಡಿದೆ. ಇದು Amazon ಮತ್ತು Flipkartಗೆ ನೇರ ಸ್ಪರ್ಧೆ ನೀಡಲಿದೆ.  Bharat e Market App ಸಂಪೂರ್ಣ ದೇಶೀಯ ಇ-ಕಾಮರ್ಸ್ ವೇದಿಕೆಯಾಗಿದೆ.

ಅಮೆಜಾನ್ ಫ್ಲಿಪ್‌ಕಾರ್ಟ್ ಗೆ ಟಕ್ಕರ್ ನೀಡಲಿದೆ  'ಭಾರತ್ ಇ ಮಾರ್ಕೆಟ್' :
Bharat e Marketನ ಮೊಬೈಲ್ ಆಪ್ ಸಂಪೂರ್ಣ ಭಾರತೀಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಎಂದು CAIT ಹೆಳಿದೆ. ನರೇಂದ್ರ ಮೋದಿಯವರ (Narendra Modi) ವೋಕಲ್ ಫಾರ್ ಲೋಕಲ್ ವಿಷನ್‌ ಅನ್ನು ಆಧರಿಸಿ ಈ ಆಪ್ ಅನ್ನು ತಯಾರಿಸಲಾಗಿದೆ. 2021 ರ ಡಿಸೆಂಬರ್ ವೇಳೆಗೆ ಸುಮಾರು 7 ಲಕ್ಷ ವ್ಯಾಪಾರಿಗಳು ಈ ಪ್ಲಾಟ್‌ಫಾರ್ಮ್‌ಗೆ ಸೇರುವ ನಿರೀಕ್ಷೆಯಿದೆ ಎಂದು CAIT ಹೇಳಿದೆ. ಡಿಸೆಂಬರ್ 2023 ರ ಹೊತ್ತಿಗೆ, ಒಂದು ಕೋಟಿ ವ್ಯಾಪಾರಿಗಳನ್ನು ಈ ಪ್ಲಾಟ್‌ಫಾರ್ಮ್‌ಗೆ ಸೇರಿಸಲಾಗುವುದು. ಇದಾದ ನಂತರ ಇದು ವಿಶ್ವದ ಅತಿದೊಡ್ಡ Portal ಆಗಲಿದೆ. 

ಇದನ್ನೂ ಓದಿ : PM-SYM ಯೋಜನೆಯಡಿ ಫಲಾನುಭವಿಗಳಿಗೆ ಪ್ರತಿ ತಿಂಗಳು ಸಿಗಲಿದೆ 3,000 ರೂ., ಹೀಗೆ ನೋಂದಾಯಿಸಿ

ದೇಸಿ Bharat e Market  ನ ವಿಶೇಷತೆ ಏನು? 
ಸಿಎಐಟಿಯ 'ಭಾರತ್ ಇ ಮಾರ್ಕೆಟ್' ಆ್ಯಪ್ ಭಾರತ ಮಾತ್ರವಲ್ಲದೆ ವಿಶ್ವದ ಯಾವುದೇ ಇ-ಕಾಮರ್ಸ್ ಪೋರ್ಟಲ್‌ನೊಂದಿಗೆ ಸ್ಪರ್ಧಿಸಲು ಸಾಧ್ಯವಾಗುತ್ತದೆ. ಅದರ ಕೆಲವು ವಿಶೇಷತೆಗಳನ್ನು ನೋಡೋಣ ..  

1. ಈ ಪೋರ್ಟಲ್‌ನಲ್ಲಿ, ವ್ಯಾಪಾರಿಗಳಿಂದ ವ್ಯಾಪಾರಿ (B2B) ಮತ್ತು ವ್ಯಾಪಾರಿಯಿಂದ  ಗ್ರಾಹಕರಿಗೆ (B2C) ತಮ್ಮ ಸರಕುಗಳ ಮಾರಾಟ ಮತ್ತು ಖರೀದಿ  ಸಾಧ್ಯವಾಗುತ್ತದೆ.
2. ಈ ಪೋರ್ಟಲ್‌ನಲ್ಲಿ 'ಇ-ಶಾಪ್' ತೆರೆಯಲು ಬಯಸುವವರು  ಮೊದಲು mobile ಆ್ಯಪ್ ಮೂಲಕ ತಮ್ಮನ್ನು ನೋಂದಾಯಿಸಿಕೊಳ್ಳಬೇಕು.
3. ಒಂದು ಪ್ರಮುಖ ವಿಷಯವೆಂದರೆ, ಅದರಲ್ಲಿ ದಾಖಲಾದ ಯಾವುದೇ ಮಾಹಿತಿಯು ವಿದೇಶಕ್ಕೆ ಸೋರಿಕೆಯಾಗುತ್ತದೆ ಎಂಬ  ಭಯ ಇರುವುದಿಲ್ಲ. ಇದು ಸಂಪೂರ್ಣವಾಗಿ ದೇಶೀಯ ಅಪ್ಲಿಕೇಶನ್ ಆಗಿದ್ದು, ಎಲ್ಲಾ ಡೇಟಾವು ದೇಶದಲ್ಲೇ ಉಳಿಯಲಿದೆ.
4. ಈ ಪ್ಲಾಟ್‌ಫಾರ್ಮ್‌ಗೆ ಯಾವುದೇ ವಿದೇಶಿ ಫಂಡಿಂಗ್ ಅನ್ನು ಸ್ವೀಕರಿಸಲಾಗುವುದಿಲ್ಲ. 
5. ಈ ಪೋರ್ಟಲ್‌ನಲ್ಲಿ ಚೀನೀ (China) ವಸ್ತುಗಳ ಮಾರಾಟವನ್ನು ನಿಷೇಧಿಸಲಾಗಿದೆ. ದೇಶೀಯ ವ್ಯಾಪಾರಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಚೀನೀ ವಸ್ತುಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. 
6. ಸ್ಥಳೀಯ ಕುಶಲಕರ್ಮಿಗಳು, ಮತ್ತು ಸಣ್ಣ ವ್ಯಾಪಾರಿಗಳಿಗೆ  ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಒದಗಿಸಲಾಗುತ್ತದೆ. 
7.  ಈ ಪೋರ್ಟ ಲ್ ನ ಇನ್ನೊಂದು ಉತ್ತಮ ವಿಚಾರ ಎಂದರೆ, ಇಲ್ಲಿ ವ್ಯಾಪಾರ ನಡೆಸಲು ಯಾವುದೇ ಕಮಿಷನ್ ವಿಧಿಸಲಾಗುವುದಿಲ್ಲ. 

'ಭಾರತ್ ಇ ಮಾರ್ಕೆಟ್'ನಲ್ಲಿ ಕಡಿಮೆ ದರದಲ್ಲಿ ಸಿಗಲಿದೆ ಸರಕುಗಳು..! :  
'ಭಾರತ್ ಇ ಮಾರ್ಕೆಟ್' ಮೂಲಕ ಅತ್ಯಂತ ಕಡಿಮೆ ಸಮಯದಲ್ಲಿ ಸರಕುಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ 'ಭಾರತ್ ಇ-ಮಾರ್ಕೆಟ್' ಅತಿ ಕಡಿಮೆ ಬೆಲೆಗೆ ಗ್ರಾಹಕರಿಗೆ (Customers) ಸರಕುಗಳನ್ನು ಒದಗಿಸಲಿವೆ ಎಂದು ಸಿಎಐಟಿ ಹೇಳಿದೆ.

 

ಇದನ್ನೂ ಓದಿ : Cheque Bounce: ಚೆಕ್ ಬೌನ್ಸ್ ಪ್ರಕರಣಗಳ ಬಗ್ಗೆ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

ಅಮೆಜಾನ್ ಫ್ಲಿಪ್‌ಕಾರ್ಟ್ ಅನ್ನು ಹಿಂದಿಕ್ಕಲಿರುವ 'ಭಾರತ್ ಇ ಮಾರ್ಕೆಟ್’ :
ಪ್ರಸ್ತುತ 40 ಸಾವಿರ ಸಣ್ಣ ಮತ್ತು ದೊಡ್ಡ ಸಂಘಟನೆಗಳು ಮತ್ತು 8 ಕೋಟಿ ಉದ್ಯಮಿಗಳು ಸಂಪರ್ಕ ಹೊಂದಿದ್ದಾರೆ ಎಂದು ಸಿಎಐಟಿ ಹೇಳಿದೆ. ಸುಮಾರು 40 ರಿಂದ 45 ಕೋಟಿ ಜನರು ಸುಮಾರು 7 ಕೋಟಿ ಉದ್ಯಮಿಗಳೊಂದಿಗೆ ಇಲ್ಲಿಕಾರ್ಯ ನಿರ್ವಹಿಸುತ್ತಿದ್ದಾರೆ. ಒಟ್ಟಾರೆಯಾಗಿ, ಈ ಅಂಕಿ ಅಂಶವು ಭಾರತದಲ್ಲಿ ಇ-ಕಾಮರ್ಸ್ ಯಶಸ್ಸಿಗೆ ದೊಡ್ಡ ಮಟ್ಟದಲ್ಲಿ ಕಾರಣವಾಗಲಿದೆ.  ಹೀಗಾದಲ್ಲಿ 'ಭಾರತ್ ಇ ಮಾರ್ಕೆಟ್’  Amazon ಮತ್ತು Flipkart ಅನ್ನು ಸುಲಭವಾಗಿ  ಹಿಂದಿಕ್ಕಲಿದೆ.

ಇದು ಹೊಸ ಅತ್ಯಾಧುನಿಕ ತಂತ್ರಜ್ಞಾನ, ವಿತರಣಾ ವ್ಯವಸ್ಥೆ, ಸರಕುಗಳ ಗುಣಮಟ್ಟದ ನಿಯಂತ್ರಣ, digital payment ಇತ್ಯಾದಿಗಳನ್ನು ಹೊಂದಿದೆ.  ಪ್ರಸ್ತುತ, ಈ ಪೋರ್ಟಲ್ ವೆಬ್ ಮತ್ತು ಆಂಡ್ರಾಯ್ಡ್  ಅಪ್ಲಿಕೇಶನ್‌ನಲ್ಲಿ ಮಾತ್ರ ಲಭ್ಯವಿದೆ.  ಇದನ್ನು  google play store ನಿಂದ ಡೌನ್‌ಲೋಡ್ ಮಾಡಬಹುದು. ಇದು ಶೀಘ್ರದಲ್ಲೇ ಐಒಎಸ್ ನಲ್ಲಿ  ಸಹ ಬಿಡುಗಡೆಯಾಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News