Crime News: ಕ್ರಿಪ್ಟೋ ಕರೆನ್ಸಿಯಲ್ಲಿ ಲಾಭ ಕೊಡಿಸುವುದಾಗಿ ವಂಚಿಸುತ್ತಿದ್ದ ಆರೋಪಿಯ ಬಂಧನ

ಕರೆಂಟ್ ಅಕೌಂಟಿನ ಡೆಬಿಟ್ ಕಾರ್ಡ್/ಚೆಕ್ ಬುಕ್ & ಸಿಮ್ ಕಾರ್ಡ್ ನೀಡಿದರೆ ನಿಮ್ಮ ಹಣವನ್ನು ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿ ಲಾಭ ಗಳಿಸಿ ಕೊಡುವುದಾಗಿ ನಂಬಿಸುತ್ತಿದ್ದ ಆರೋಪಿ.

Written by - VISHWANATH HARIHARA | Edited by - Puttaraj K Alur | Last Updated : Sep 30, 2022, 12:44 PM IST
  • ಕ್ರಿಪ್ಟೋ ಕರೆನ್ಸಿ ಹೆಸರಲ್ಲಿ ವಂಚಿಸುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ
  • ಬ್ಯಾಂಕ್ ಖಾತೆ, ಸಿಮ್ ಕಾರ್ಡ್ ಪಡೆದು ವಂಚಿಸುತ್ತಿದ್ದ ಕೇರಳದ ಶಾನೀದ್ ಅಬ್ದುಲ್ ಬಂಧನ
  • ಬಂಧಿತನಿಂದ 222 ಸಿಮ್, 10 ಮೊಬೈಲ್, 10 ಡೆಬಿಟ್ ಕಾರ್ಡ್, ಬ್ಯಾಂಕ್ ಪಾಸ್‍ಬುಕ್, ಚೆಕ್‍ಬುಕ್ ವಶಕ್ಕೆ
Crime News: ಕ್ರಿಪ್ಟೋ ಕರೆನ್ಸಿಯಲ್ಲಿ ಲಾಭ ಕೊಡಿಸುವುದಾಗಿ ವಂಚಿಸುತ್ತಿದ್ದ ಆರೋಪಿಯ ಬಂಧನ title=
ಖತರ್ನಾಕ್ ಆರೋಪಿಯ ಬಂಧನ

ಬೆಂಗಳೂರು: ಕ್ರಿಪ್ಟೋ ಕರೆನ್ಸಿ ಹೆಸರಲ್ಲಿ ವಂಚಿಸುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಕ್ರಿಫ್ಟೋ ಕರೆನ್ಸಿ ಜಾಗತಿಕ ಮಟ್ಟದಲ್ಲಿ ಸೆನ್ಸೇಷನ್ ಸೃಷ್ಟಿಸಿದೆ. ಕ್ರಿಪ್ಟೋ ಕರೆನ್ಸಿ ಮೇಲಿನ ಕುತೂಹಲವನ್ನೇ ಬಂಡವಾಳವನ್ನಾಗಿಸಿಕೊಂಡು ಲಾಭ ಗಳಿಸಿಕೊಡುವುದಾಗಿ ಬ್ಯಾಂಕ್ ಖಾತೆ, ಸಿಮ್ ಕಾರ್ಡ್ ಪಡೆದು ವಂಚಿಸುತ್ತಿದ್ದ ಕೇರಳ ಮೂಲದ ಶಾನೀದ್ ಅಬ್ದುಲ್ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಆರೋಪಿಯನ್ನು ಈಶಾನ್ಯ ವಿಭಾಗದ ಸಿಇಎನ್ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಮೆದುಳು ನಿಷ್ಕ್ರಿಯಗೊಂಡ ಯುವಕನ ಅಂಗಾಂಗ ದಾನ ಮಾಡಿದ ಪೋಷಕರು

ಟೆಲಿಗ್ರಾಂನಲ್ಲಿ ಗ್ರೂಪ್ ಮಾಡಿಕೊಂಡಿದ್ದ ಆರೋಪಿ ಬೇರೆ ಬೇರೆ ಜನರಿಗೆ ಗ್ರೂಪ್ ಲಿಂಕ್ ಕಳಿಸಿ ಜಾಯಿನ್ ಮಾಡಿಸುತ್ತಿದ್ದ. ಬಳಿಕ ನೀವು ನಿಮ್ಮ ಕರೆಂಟ್ ಅಕೌಂಟಿನ ಡೆಬಿಟ್ ಕಾರ್ಡ್/ಚೆಕ್ ಬುಕ್ ಮತ್ತು ಸಿಮ್ ಕಾರ್ಡ್ ನೀಡಿದರೆ ನಿಮ್ಮ ಹಣವನ್ನು ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿ ಲಾಭ ಗಳಿಸಿ ಕೊಡುವುದಾಗಿ ನಂಬಿಸುತ್ತಿದ್ದ. ಬಳಿಕ ಅಕೌಂಟಿನಲ್ಲಿದ್ದ ಹಣವನ್ನು ವರ್ಗಾಯಿಸಿಕೊಂಡು ವಂಚಿಸುತ್ತಿದ್ದ.

ಇದನ್ನೂ ಓದಿ: ಡಿಕೆಶಿಗಿಂತ ಮೊದಲೇ ತೆರಳಿ ‘ರಾಗಾ’ಗೆ ಸ್ವಾಗತ: ಜೊತೆಗೆ ತಿಂಡಿ ಸೇವಿಸಿದ ಸಿದ್ದರಾಮಯ್ಯ

ಸದ್ಯ ಆರೋಪಿಯನ್ನು ಬಂಧಿಸಿರುವ ಸಿಇಎನ್ ಪೊಲೀಸರು ಬಂಧಿತನಿಂದ ಬರೊಬ್ಬರಿ 222 ಸಿಮ್ ಕಾರ್ಡುಗಳು, 10 ಮೊಬೈಲ್ ಫೋನ್‌ಗಳು, 10 ಡೆಬಿಟ್ ಕಾರ್ಡುಗಳು, ಬ್ಯಾಂಕ್ ಪಾಸ್ ಬುಕ್, ಚೆಕ್ ಬುಕ್ ಗಳನ್ನು ವಶಕ್ಕೆ ಪಡೆದಿದ್ದಾರೆ‌. ಪ್ರಕರಣದ ಮತ್ತೊರ್ವ ಆರೋಪಿ ಎಸ್ಕೇಪ್ ಆಗಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ‌. ಇತ್ತೀಚಿನ ದಿನಗಳಲ್ಲಿ ಕ್ರಿಪ್ಟೋ ಕರೆನ್ಸಿ ಹೆಸರಲ್ಲಿ  ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜಾಗೃತವಾಗಿರುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News