ಕೊಲೆ ಕೇಸಲ್ಲಿ ಜೈಲು ಸೇರಿದ್ದ ಮಾದೇಶ ಚಿತ್ರದ ನಿರ್ಮಾಪಕನಿಗೆ ಸುಪ್ರೀಂನಿಂದ ಬೇಲ್

2008ರಲ್ಲಿ ಇಡೀ ಬೆಂಗಳೂರನ್ನೇ ನಡುಗಿಸಿತ್ತು  ವಿನೋದ್‌ ಕೊಲೆ ಪ್ರಕರಣದಲ್ಲಿ ಶೂಟ್ ಮಾಡಿ ಗೋವರ್ಧನ್ ಕೇರಳದಲ್ಲಿ ತಲೆ ಮರೆಸಿಕೊಂಡಿದ್ದ.  ಬಳಿಕ ಅವನನ್ನು ಬಂಧಿಸಲಾಗಿತ್ತು.

Written by - VISHWANATH HARIHARA | Edited by - Yashaswini V | Last Updated : Aug 11, 2022, 01:29 PM IST
  • ಕುಡಿದ ಮತ್ತಿನಲ್ಲಿ ಬಾಗಲೂರಿನ ಫಾರ್ಮ್‌ಹೌಸ್‌ನಲ್ಲಿ ನಟ ವಿನೋದ್‌ ಎಂಬಾತನ ಮೇಲೆ ಶೂಟ್ ಮಾಡಿ ಕೊಂದಿದ್ದ ನಿರ್ಮಾಪಕ ಗೋವರ್ಧನ್‌ ಮೂರ್ತಿ
  • 6 ವರ್ಷ 2 ತಿಂಗಳು ಜೈಲು ಶಿಕ್ಷೆ ಅನುಭವಿಸಿರುವ ಗೋವರ್ಧನ್ ಮೂರ್ತಿ
  • ಗೋವರ್ಧನ್‌ ಮೂರ್ತಿಗೆ ಸುಪ್ರೀಂ‌ಕೋರ್ಟ್ ಜಾಮೀನು ಮಂಜೂರು
ಕೊಲೆ ಕೇಸಲ್ಲಿ ಜೈಲು ಸೇರಿದ್ದ ಮಾದೇಶ ಚಿತ್ರದ ನಿರ್ಮಾಪಕನಿಗೆ ಸುಪ್ರೀಂನಿಂದ ಬೇಲ್ title=
Madesha film producer

ಬೆಂಗಳೂರು: ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಭಿನಯದ ಮಾದೇಶ ಸಿನಿಮಾ ನಿರ್ಮಾಪಕ ಗೋವರ್ಧನ್‌ ಮೂರ್ತಿಗೆ ಸುಪ್ರೀಂ‌ಕೋರ್ಟ್ ಜಾಮೀನು  ಮಂಜೂರು ಮಾಡಿದೆ.

2008 ಅಕ್ಟೋಬರ್‌ 7ರಂದು ಮಧ್ಯರಾತ್ರಿ ಕುಡಿದ ಮತ್ತಿನಲ್ಲಿ  ಬಾಗಲೂರಿನ ಫಾರ್ಮ್‌ಹೌಸ್‌ನಲ್ಲಿ ನಟ ವಿನೋದ್‌ ಎಂಬಾತನ ಮೇಲೆ ಶೂಟ್ ಮಾಡಿ ಕೊಂದಿದ್ದ ಗೋವರ್ಧನ್ ಮೂರ್ತಿಗೆ 2012ರಲ್ಲಿ ಸೆಷನ್ಸ್ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿತ್ತು.

ಇದನ್ನೂ ಓದಿ- ADGP Alok Kumar : ಬೆಳ್ಳಾರೆ ಪ್ರವೀಣ್ ಕೊಲೆ ಕೇಸ್ : ಆರೋಪಿಗಳ ಆಸ್ತಿ ಮುಟ್ಟುಗೋಲು

2008ರಲ್ಲಿ ಇಡೀ ಬೆಂಗಳೂರನ್ನೇ ನಡುಗಿಸಿದ್ದ ವಿನೋದ್‌ ಕೊಲೆ ಪ್ರಕರಣದಲ್ಲಿ ಶೂಟ್ ಮಾಡಿ ಗೋವರ್ಧನ್ ಕೇರಳದಲ್ಲಿ ತಲೆ ಮರೆಸಿಕೊಂಡಿದ್ದ.  ಬಳಿಕ ಅವನನ್ನು ಬಂಧಿಸಲಾಗಿತ್ತು. 6 ವರ್ಷ 2 ತಿಂಗಳು ಜೈಲು ಶಿಕ್ಷೆ ಅನುಭವಿಸಿರುವ ಗೋವರ್ಧನ್ ಮೂರ್ತಿಗೆ ಸದ್ಯ ಬಿಡುಗಡೆ ಭಾಗ್ಯ ಸಿಕ್ಕಿದೆ. 

ಇದನ್ನೂ ಓದಿ- Bangalore Crime : ಕೊಟ್ಟಿದ್ದು ಕೋಟಿ ಕೋಟಿ ವರದಕ್ಷಿಣೆ : ಅನುಭವಿಸಿದ್ದು ನರಕಯಾತನೆ!

ಇದೀಗ  ಗೋವರ್ಧನ್ ಮೂರ್ತಿಗೆ ಜಾಮೀನು ಮಂಜೂರಾಗಿದ್ದು ಇನ್ನು ಮೂರು ನಾಲ್ಕು ದಿನದಲ್ಲಿ ಜೈಲಿಂದ ಗೋವರ್ದನ್‌ ಮೂರ್ತಿ ಬಿಡುಗಡೆಯಾಗಲಿದ್ದಾನೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News