ವೆಬ್‌ಸೈಟ್ ಹ್ಯಾಕ್ ಮಾಡೋದ್ರಲ್ಲಿ ಈತ ಪಂಟರ್: ರಿವರ್ಡ್ ಪಾಯಿಂಟ್ಸ್ ಕದ್ದು ಐಷಾರಾಮಿ ಜೀವನ ನಡೆಸುತ್ತಿದ್ದವನು ಅಂದರ್

ಈತ  ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ, ಎಥಿಕಲ್ ಹಾಗೂ ಅನ್ ಎಥಿಕಲ್ ಹ್ಯಾಕಿಂಗ್ ಕಲಿತುಕೊಂಡು ರಿವಾರ್ಡ್ 360 ಕಂಪನಿಯ ವೆಬ್‌ಸೈಟ್‌ ಹ್ಯಾಕ್ ಮಾಡಿ ರಿವಾರ್ಡ್ ಪಾಯಿಂಟ್ಸ್ ಮಾಹಿತಿ ಪಡೆದುಕೊಳ್ಳುತ್ತಿದ್ದ. 

Written by - VISHWANATH HARIHARA | Edited by - Yashaswini V | Last Updated : Sep 14, 2023, 09:25 PM IST
  • ಆಂಧ್ರಪ್ರದೇಶದ ಚಿತ್ತೂರು ಮೂಲದ ಬೊಮ್ಮಲೂರು ಲಕ್ಷ್ಮೀಪತಿ ಬಂಧಿತ ಆರೋಪಿ.
  • ಈತನಿಂದ ಬರೋಬ್ಬರಿ 4.16 ಕೋಟಿ ಮೌಲ್ಯದ ವಸ್ತುಗಳನ್ನ ಸೀಜ್ ಮಾಡಲಾಗಿದೆ.
  • ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ (IIIT)ಯಲ್ಲಿ ವ್ಯಾಸಂಗ ಮಾಡಿದ್ದ ಲಕ್ಷ್ಮೀಪತಿ ದುಬೈ, ಬೆಂಗಳೂರಿನ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿದ್ದ.
ವೆಬ್‌ಸೈಟ್ ಹ್ಯಾಕ್ ಮಾಡೋದ್ರಲ್ಲಿ ಈತ ಪಂಟರ್: ರಿವರ್ಡ್ ಪಾಯಿಂಟ್ಸ್ ಕದ್ದು ಐಷಾರಾಮಿ ಜೀವನ ನಡೆಸುತ್ತಿದ್ದವನು ಅಂದರ್ title=

ಬೆಂಗಳೂರು : ಗ್ರಾಹಕರಿಗೆ ತಲುಪಬೇಕಿರುವ ರಿವಾರ್ಡ್ ಪಾಯಿಂಟ್ಸ್ ಗಳನ್ನು ಹ್ಯಾಕ್ ಮಾಡಿ ದುಬಾರಿ ವಸ್ತುಗಳನ್ನ ಖರೀದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದ ಆರೋಪಿಯನ್ನ ಆಗ್ನೇಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. 

ಆಂಧ್ರಪ್ರದೇಶದ ಚಿತ್ತೂರು ಮೂಲದ ಬೊಮ್ಮಲೂರು ಲಕ್ಷ್ಮೀಪತಿ ಬಂಧಿತ ಆರೋಪಿ. ಈತನಿಂದ ಬರೋಬ್ಬರಿ 4.16 ಕೋಟಿ ಮೌಲ್ಯದ ವಸ್ತುಗಳನ್ನ ಸೀಜ್ ಮಾಡಲಾಗಿದೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ (IIIT)ಯಲ್ಲಿ ವ್ಯಾಸಂಗ ಮಾಡಿದ್ದ ಲಕ್ಷ್ಮೀಪತಿ ದುಬೈ, ಬೆಂಗಳೂರಿನ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿದ್ದ. 

ಇದನ್ನೂ ಓದಿ- ಧಾರವಾಡ: ಬಸ್ ಚಾಲಕನ ಮೇಲೆ ಏಕಾಏಕಿ ಹಲ್ಲೆ ರಿವಾರ್ಡ್ ಕಂಪನಿ

ಬಳಿಕ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ, ಎಥಿಕಲ್ ಹಾಗೂ ಅನ್ ಎಥಿಕಲ್ ಹ್ಯಾಕಿಂಗ್ ಕಲಿತುಕೊಂಡು ರಿವಾರ್ಡ್ ಕಂಪನಿಯ ವೆಬ್‌ಸೈಟ್‌ ಹ್ಯಾಕ್ ಮಾಡಿ ರಿವಾರ್ಡ್ ಪಾಯಿಂಟ್ಸ್ ಮಾಹಿತಿ ಪಡೆದುಕೊಳ್ಳುತ್ತಿದ್ದ. ಬಳಿಕ ಆ ರಿವಾರ್ಡ್ ಪಾಯಿಂಟ್ಸ್ ಬಳಸಿ ಚಿನ್ನ, ಬೆಳ್ಳಿ ವಸ್ತುಗಳು, ದ್ವಿಚಕ್ರ ವಾಹನಗಳು, ಎಲೆಕ್ಟ್ರಾನಿಕ್ ಉಪಕರಣಗಳನ್ನ ಖರೀದಿಸಿದ್ದ. ಇದೇ ರೀತಿ ಖಾಸಗಿ ಬ್ಯಾಂಕುಗಳು, ಕಂಪನಿಗಳ ಗ್ರಾಹಕರಿಗೆ ತಲುಪಬೇಕಿದ್ದ ರಿವಾರ್ಡ್ ಪಾಯಿಂಟ್ಸ್ ಬಳಕೆ ಮಾಡಿಕೊಳ್ಳುತ್ತಿದ್ದ ಆರೋಪಿಯ ವಿರುದ್ಧ ಆಗ್ನೇಯ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ- ಪುಷ್ಪ ಸಿನಿಮಾದಂತೆ ರಕ್ತ ಚಂದನ ಸಾಗಿಸುತ್ತಿದ್ದ ಖದೀಮರ ಬಂಧನ

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಚಿತ್ತೂರು ಮೂಲದ ಸೈಬರ್ ಹ್ಯಾಕರ್ ಲಕ್ಷ್ಮೀಪತಿಯನ್ನ ಬಂಧಿಸಿದ್ದು, 5.269 ಕೆ.ಜಿ ಚಿನ್ನ, 27.250 ಕೆ.ಜಿ ಬೆಳ್ಳಿ, 11.13 ಲಕ್ಷ ನಗದು, 7 ವಿವಿಧ ಕಂಪನಿಯ ದ್ವಿಚಕ್ರ ವಾಹನಗಳು, ಕ್ಲಿಪ್ ಕಾರ್ಟ್ ವ್ಯಾಲೆಟ್'ನಲ್ಲಿದ್ದ 26 ಲಕ್ಷ, ಅಮೆಜಾನ್ ವ್ಯಾಲೆಟ್'ನಿಂದ 3.50 ಲಕ್ಷ, 2 ಲ್ಯಾಪ್‌ಟಾಪ್, 3 ಮೊಬೈಲ್ ಫೋನ್‌ಗಳ ಸಹಿತ ಒಟ್ಟು 4.16 ಕೋಟಿ‌ ಮೌಲ್ಯದ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ. ಸದ್ಯ ಈತ ಇನ್ನೂ ಬೇರೆ ಬೇರೆ ವೈಬ್ ಸೈಟ್ ಗಳನ್ನು ಹ್ಯಾಕ್ ಮಾಡಿರುವ ಗುಮಾನಿ ಇದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News