ಖಾಸಗಿ ಬಸ್ ಪ್ರಯಾಣಿಕರೇ ನೀವೇಷ್ಟೂ ಸೇಫ್: ಕುಡಿದು ಚಾಲನೆ ಮಾಡ್ತಾರೆ ಕೆಲ ಡ್ರೈವರ್ಸ್

Drink and Drive: ಚಾಲಕರ ಕುಡಿತದ ಚಟ ಹತ್ತಾರು ಪ್ರಯಾಣಿಕರಿಗೆ ಸಂಕಷ್ಟ ತಂದೊಡ್ಡಬಹುದು. ಅದನ್ನ ಕಡಿವಾಣ ಹಾಕಲು ನಗರ ಟ್ರಾಫಿಕ್ ಪೊಲೀಸರು ಟೊಂಕ ಕಟ್ಟಿ ನಿಂತಿದ್ದಾರೆ. 

Written by - VISHWANATH HARIHARA | Last Updated : Jan 26, 2024, 04:54 PM IST
  • ಬೆಂಗಳೂರಿನ ವಿವಿಧೆಡೆ 881 ಬಸ್ ಗಳ ಪರಿಶೀಲನೆ
  • 2023 ರಲ್ಲಿ ಖಾಸಗಿ ಬಸ್ ಗಳಿಂದ 24 ಅಪಘಾತ
  • ಖಾಸಗಿ ಬಸ್ ಪ್ರಯಾಣಿಕರೇ ನೀವೇಷ್ಟೂ ಸೇಫ್
ಖಾಸಗಿ ಬಸ್ ಪ್ರಯಾಣಿಕರೇ ನೀವೇಷ್ಟೂ ಸೇಫ್: ಕುಡಿದು ಚಾಲನೆ ಮಾಡ್ತಾರೆ ಕೆಲ ಡ್ರೈವರ್ಸ್  title=

ಬೆಂಗಳೂರು: ಅದೆಷ್ಟೋ ಜನ ಒಂದೂರಿನಿಂದ ಮತ್ತೊಂದು ಊರಿಗೆ ಹೋಗೋದಕ್ಕೆ ಖಾಸಗಿ ಬಸ್ ಅವಲಂಬಿಸಿರುತ್ತಾರೆ. ರಾತ್ರಿ ಆಗ್ತಿದ್ದಂತೆ ನೆಮ್ಮದಿಯಿಂದ ನಿದ್ದೆಗೆ ಜಾರಿರ್ತಾರೆ. ಕಡಿಮೆ ಅಂದ್ರು ಒಂದೊಂದು ಬಸ್ ನಲ್ಲಿ ಐವತ್ತರಿಂದ ಐವತ್ತೈದು ಜನ ಇರ್ತಾರೆ. ಹಬ್ಬ ಹರಿದಿನ ಬಂತಂದ್ರೆ ಸಾಕು ಬೆಂಗಳೂರು ತೊರೆಯುವ ಜನ ಗುಂಪು ಗುಂಪಾಗಿ ಖಾಸಗಿ ಬಸ್ ನಲ್ಲಿ ತಮ್ಮೂರುಗಳಿಗೆ ಹೊರಡೋದೇನು. ಹೀಗೆ ನಾವು ನಂಬಿ ಹತ್ತೊ ಬಸ್ ಗಳು ನಮ್ಮ ಪ್ರಾಣವನ್ನೇ ತೆಗೆಯಬಹುದು ಅನ್ನೋ ಸಣ್ಣ ಅಂದಾಜು ಕೂಡ ಇರೋದಿಲ್ಲ. ಚಾಲಕರ ಕುಡಿತದ ಚಟ ಹತ್ತಾರು ಪ್ರಯಾಣಿಕರಿಗೆ ಸಂಕಷ್ಟ ತಂದೊಡ್ಡಬಹುದು. ಅದನ್ನ ಕಡಿವಾಣ ಹಾಕಲು ನಗರ ಟ್ರಾಫಿಕ್ ಪೊಲೀಸರು ಟೊಂಕ ಕಟ್ಟಿ ನಿಂತಿದ್ದಾರೆ.

ನಗರ ಟ್ರಾಫಿಕ್ ಪೊಲೀಸರು ಕಳೆದ ವರ್ಷದ ಅಪರಾಧ ವಿಮರ್ಶೆ ಮಾಡಿದ್ದು, ಯಾವ್ಯಾವ ವಾಹನದಿಂದ ಅಪಘಾತ ಆಗಿದೆ ಎಂದು ಅಧ್ಯಯನ ಮಾಡಿದ್ದಾರೆ. ಅದ್ರಲ್ಲಿ‌ ಹೆಚ್ಚಾಗಿ ಖಾಸಗಿ ವಾಹನಗಳು ,ವಾಟರ್ ಟ್ಯಾಂಕರ್, ಬಿಬಿಎಂಪಿ ಕಸದ ಲಾರಿಯಿಂದಲೇ ಹೆಚ್ಚು ಆ್ಯಕ್ಸಿಡೆಂಟ್ ಆಗಿರೋದು ಗೊತ್ತಾಗಿದೆ..2023 ರಲ್ಲಿ ಖಾಸಗಿ ಬಸ್ ಗಳಿಂದ 24 ಅಪಘಾತ ಆಗಿದ್ದು ಅದರಲ್ಲಿ ಹೆಚ್ಚಾಗಿ ಪಾದಚಾರಿಗಳು ಮರಣ ಹೊಂದಿದ್ದಾರೆ.‌ ಹಾಗಾಗಿ ಅವರ ಮೇಲೆ ಕ್ರಮ ಕೈಗೊಳ್ಳಲು ಜನವರಿ 25 ರಂದು ರಾತ್ರಿ 8 ಗಂಟೆಯಿಂದ 11.30 ರವರೆಗೆ ಡ್ರಂಕ್ ಡ್ರೈವ್ ವಿಶೇಷ ಕಾರ್ಯಾಚರಣೆಯನ್ನು ಟ್ರಾಫಿಕ್ ಪೊಲೀಸರು ನಡೆಸಿದ್ದಾರೆ.‌ 

ಇದನ್ನೂ ಓದಿ: ಬೆಂಗಳೂರಿನ ಗಣರಾಜ್ಯೋತ್ಸವಕ್ಕೆ ಪೊಲೀಸರ ಭದ್ರತಾ ವೈಫಲ್ಯ.. ಕಳರಿಪಯಟ್ಟು ಕಲೆ ಪ್ರದರ್ಶನದ ವೇಳೆ ಏಕಾಏಕಿ ನುಗ್ಗಿದ ಅಪರಚಿತ ವ್ಯಕ್ತಿ! 

ಮೆಜೆಸ್ಟಿಕ್,ಕಲಾಸಿಪಾಳ್ಯ ಸೇರಿದಂತೆ ಬೆಂಗಳೂರಿನ ವಿವಿಧೆಡೆ 881 ಬಸ್ ಗಳ ಪರಿಶೀಲನೆ ಮಾಡಲಾಗಿದ್ದು, ಅದರಲ್ಲಿ 9 ಚಾಲಕರು ಪಾನಮತ್ತರಾಗಿ ವಾಹನ ಚಾಲನೆ ಮಾಡಿದ್ದು ಕಂಡುಬಂದಿದೆ.ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿರುವ ಟ್ರಾಫಿಕ್ ಪೊಲೀಸರು,ಕೇವಲ ವೈಲೇಷನ್ ಎಂದು ಪರಿಗಣಿಸದ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ. ಡಿಎಲ್ ಸಸ್ಪೆನ್ಷನ್ ಗೆ  ಆರ್ ಟಿ ಓ ಗೆ ಪತ್ರ ಬರೆದಿದ್ದಾರೆ.‌ಅಲ್ಲದೇ ಬಸ್ ಮಾಲೀಕರಿಗೂ ನೋಟಿಸ್ ಕೊಟ್ಟಿದ್ದಾರೆ. ಯಾಕಂದ್ರೆ ಒಂದೊಂದು ಬಸ್ ನಲ್ಲಿ ಐವತ್ತರಿಂದ ಐವತ್ತೈದು ಜನ ಇರ್ತಾರೆ ಹೆಚ್ಚು ಕಡಿಮೆ ಆದರೆ ಅದಕ್ಕೆ ಯಾರು ಹೊಣೆ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.

ಏನೇ ಹೇಳಿ ಬಸ್ ಕಾರ್ ಬಿಟ್ಟು ಸೇಫ್ ಆಗಿ ನಮ್ಮ ಊರು ಸೇರ್ತಿವಿ ಅಂತ ಅದೆಷ್ಟೊ ಜನ ಖಾಸಗಿ ಬಸ್ ನಲ್ಲಿ ಪ್ರಯಾಣ ಮಾಡ್ತಾರೆ. ಆದ್ರೆ ಚಾಲಕರು ಮದ್ಯಪಾನ ಮಾಡಿ ವಾಹನೆ ಚಾಲನೆ ಮಾಡ್ತಿದ್ದು ಖಾಸಗಿ‌ ಬಸ್ ಹತ್ತಲು ಭಯಪಡುವಂತಹ ಸ್ಥಿತಿ ಬಂದೊದಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಪಕ್ಷ ಸಮುದ್ರವಿದ್ದಂತೆ, ಯಾರೇ ಹೋದರೂ ಪಕ್ಷಕ್ಕೆ ನಷ್ಟವಿಲ್ಲ: ಡಿಸಿಎಂ   

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News