“ಆರಾಧ್ಯ ಹುಟ್ಟಿದ ಕೂಡಲೇ ಆಕೆಯ…”- ವಿಚ್ಚೇದನ ಸುದ್ದಿ ಬೆನ್ನಲ್ಲೇ ಐಶ್ವರ್ಯಾ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಅಭಿಷೇಕ್

Abhishek Bacchan called Aishwaya as Super mom: ಇದೀಗ ಅಂತೆಯೇ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಡಿವೋರ್ಸ್ ಪಡೆಯಲು ಸಿದ್ಧರಾಗಿದ್ದಾರೆ ಎಂದು ವದಂತಿ ಹಬ್ಬುತ್ತಿದೆ. ಆದರೆ ಈ ಬಗ್ಗೆ ದಂಪತಿ ಯಾವುದೇ ಸ್ಪಷ್ಟನೆ ನೀಡಿಲ್ಲ.

Written by - Bhavishya Shetty | Last Updated : Dec 17, 2023, 06:02 PM IST
    • ಐಶ್ವರ್ಯಾ ರೈ ಬಚ್ಚನ್ ಮಾಜಿ ವಿಶ್ವ ಸುಂದರಿ ಮತ್ತು ಯಶಸ್ವಿ ಬಾಲಿವುಡ್ ನಟಿ
    • ಐಶ್ವರ್ಯಾ ರೈ ಅವರನ್ನು ಸೂಪರ್ ಮಾಮ್ ಎಂದ ಅಭಿಷೇಕ್
    • ಸುದ್ದಿ ಸಂಸ್ಥೆ ANI ಗೆ ನೀಡಿದ ಸಂದರ್ಶನದಲ್ಲಿ, ಅಭಿಷೇಕ್ ಬಚ್ಚನ್ ಹೇಳಿಕೆ
“ಆರಾಧ್ಯ ಹುಟ್ಟಿದ ಕೂಡಲೇ ಆಕೆಯ…”- ವಿಚ್ಚೇದನ ಸುದ್ದಿ ಬೆನ್ನಲ್ಲೇ ಐಶ್ವರ್ಯಾ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಅಭಿಷೇಕ್  title=
abhishek bachchan super mom statement

Abhishek Bacchan called Aishwaya as Super mom: ಐಶ್ವರ್ಯಾ ರೈ ಬಚ್ಚನ್ ಮಾಜಿ ವಿಶ್ವ ಸುಂದರಿ ಮತ್ತು ಯಶಸ್ವಿ ಬಾಲಿವುಡ್ ನಟಿ. ಪದಗಳಿಗೆ ನಿಲುಕದಂತಹ ಸೌಂದರ್ಯ, ಯಶಸ್ಸಿನ ಹೊರತಾಗಿಯೂ, ಐಶ್ವರ್ಯ ಕೆಲವೊಂದು ಬಾರಿ ತಮ್ಮ ವೈಯಕ್ತಿಕ ಜೀವನದ ವಿಚಾರದಲ್ಲಿ ಸುದ್ದಿಯಲ್ಲಿರುತ್ತಾರೆ.

ಇದನ್ನೂ ಓದಿ: ಅರ್ಷದೀಪ್ ಬೆಂಕಿ ಬೌಲಿಂಗ್’ಗೆ 5 ವಿಕೆಟ್ ಉಡೀಸ್! ಯಾರೂ ಬರೆಯದ ಶ್ರೇಷ್ಠ ದಾಖಲೆ ಸೃಷ್ಟಿ

ಇದೀಗ ಅಂತೆಯೇ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಡಿವೋರ್ಸ್ ಪಡೆಯಲು ಸಿದ್ಧರಾಗಿದ್ದಾರೆ ಎಂದು ವದಂತಿ ಹಬ್ಬುತ್ತಿದೆ. ಆದರೆ ಈ ಬಗ್ಗೆ ದಂಪತಿ ಯಾವುದೇ ಸ್ಪಷ್ಟನೆ ನೀಡಿಲ್ಲ.

ಈ ಬೆನ್ನಲ್ಲೇ ಈ ಹಿಂದೆ ಐಶ್ವರ್ಯಾ ರೈ ಅವರನ್ನು ಸೂಪರ್ ಮಾಮ್ ಎಂದು ಅಭಿಷೇಕ್ ಕರೆದಿದ್ದ ವಿಡಿಯೋ ಇದೀಗ ವೈರಲ್ ಆಗಿದೆ.

2017 ರಲ್ಲಿ ಸುದ್ದಿ ಸಂಸ್ಥೆ ANI ಗೆ ನೀಡಿದ ಸಂದರ್ಶನದಲ್ಲಿ, ಅಭಿಷೇಕ್ ಬಚ್ಚನ್ ತಮ್ಮ ಪತ್ನಿ ಐಶ್ವರ್ಯಾ ರೈ ಅವರ ತೂಕ ಹೆಚ್ಚಳದ ಬಗ್ಗೆ ಮಾತನಾಡುತ್ತಾ, ಆಕೆ ಸೂಪರ್ ಮಾಮ್ ಎಂದು ಹೊಗಳಿದ್ದರು. “ಅವಳು ತಾಯಿಯಾದಾಗ ಅವಳ ವೃತ್ತಿಜೀವನದಲ್ಲಿ ಹಿನ್ನಡೆ ಕಂಡುಬಂತು. ಆದರೆ ಆಕೆ ಆರಾಧ್ಯಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿದ್ದಳು. ಅವಳು ಸೂಪರ್ ಮಾಮ್. ಆರಾಧ್ಯ ಹುಟ್ಟಿದ ಕೂಡಲೇ ಆಕೆಯ ತೂಕ ಹೆಚ್ಚುತ್ತಿರುವ ಬಗ್ಗೆ ಮಾಧ್ಯಮಗಳು ಏನೇನೋ ಬರೆಯಲು ಮುಂದಾದವು. ಅಸಹ್ಯವಾದ ವಿಷಯಗಳನ್ನು ಬರೆಯಲಾಯಿತು. ಅದು ನನ್ನನ್ನು ನಿಜವಾಗಿಯೂ ಅಸಮಾಧಾನಗೊಳಿಸಿತು. ಆ ಸಮಯದಲ್ಲಿ ಆಕೆ ಜಿಮ್‌’ನಲ್ಲಿ ಒಂದು ದಿನವೂ ಕಳೆದಿರಲಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ:  ಹೆಸರಿಗೆ ತಕ್ಕಂತೆ ಐಶ್ವರ್ಯವಂತೆ ಐಶ್ವರ್ಯಾ ರೈ… ಪತಿಗಿಂತ ಶ್ರೀಮಂತೆ ಮಾಜಿ ವಿಶ್ವಸುಂದರಿ ಎಷ್ಟು ಕೋಟಿ ಆಸ್ತಿಯ ಒಡತಿ ಗೊತ್ತಾ?

ಮತ್ತಷ್ಟು ಮಾತನಾಡಿದ ಅಭಿಷೇಕ್ ಬಚ್ಚನ್, “ಜನರು ಐಶ್ವರ್ಯಾ ಅವರನ್ನು ವಿಶ್ವದ ಅತ್ಯಂತ ಸುಂದರ ಮಹಿಳೆ ಎಂದು ಉಲ್ಲೇಖಿಸುತ್ತಾರೆ. ಹೀಗಾಗಿ ಸ್ವೀಕರಿಸುವ ಪ್ರೀತಿಗೆ ಕೃತಜ್ಞರಾಗಿರಬೇಕು. ಅಷ್ಟೇ ಅಲ್ಲ ಐಶ್ವರ್ಯಾ ಎಂದಿಗೂ ಯಾವುದರ ಬಗ್ಗೆಯೂ ಕಂಪ್ಲೈಟ್ ಮಾಡುವುದಿಲ್ಲ. ಯಾವಾಗಲೂ ದಯೆ ಮತ್ತು ಸಹಾನುಭೂತಿಯಿಂದ ಇರುತ್ತಾರೆ. ಅದು ನನಗೆ ಆಶ್ಚರ್ಯ ತಂದಿದೆ” ಎಂದು ಹೇಳಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

.

Trending News