ಶಾಕಿಂಗ್‌ ಅಪ್‌ಡೇಟ್‌..! ಸಲಾರ್- 2 ನಲ್ಲಿ ಪ್ರಭಾಸ್‌ ಬದಲಿಗೆ ಈ ಯುವ ನಟ ನಾಯಕ..?

Salaar 2 hero : ಬಾಹುಬಲಿ ನಂತರ ಸತತ ಸೋಲು ಕಂಡಿದ್ದ, ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ʼಸಲಾರ್‌ʼನೊಂದಿಗೆ ಕಮ್‌ಬ್ಯಾಕ್‌ ಮಾಡಿದ್ದಾರೆ. ಸಲಾರ್‌ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್‌ ಮಾಡಿದೆ. ಅಲ್ಲದೆ, ಮಂಗಳವಾರ ಚಿತ್ರತಂಡ ಸಕ್ಸಸ್ ಪಾರ್ಟಿ ಆಯೋಜನೆ ಮಾಡಿತ್ತು.. ಇದರ ಬೆನ್ನಲ್ಲೆ, ಸಲಾರ್‌ ಭಾಗ 2ಗೆ ಸಂಬಂಧಿಸಿದ ಕುತೂಹಲಕಾರಿ ಸುದ್ದಿಯೊಂದು ಹೊರಬಿದ್ದಿದೆ.

Written by - Krishna N K | Last Updated : Jan 18, 2024, 03:07 PM IST
  • ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ʼಸಲಾರ್‌ʼನೊಂದಿಗೆ ಕಮ್‌ಬ್ಯಾಕ್‌ ಮಾಡಿದ್ದಾರೆ.
  • ಸಲಾರ್‌ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್‌ ಮಾಡಿದೆ.
  • ಸಲಾರ್‌ ಭಾಗ 2ಗೆ ಸಂಬಂಧಿಸಿದ ಕುತೂಹಲಕಾರಿ ಸುದ್ದಿಯೊಂದು ಹೊರಬಿದ್ದಿದೆ.
ಶಾಕಿಂಗ್‌ ಅಪ್‌ಡೇಟ್‌..! ಸಲಾರ್- 2 ನಲ್ಲಿ ಪ್ರಭಾಸ್‌ ಬದಲಿಗೆ ಈ ಯುವ ನಟ ನಾಯಕ..? title=

Akhil Akkineni in Salaar 2 : ಯಂಗ್‌ ರೆಬಲ್‌ ಸ್ಟಾರ್‌ ಪ್ರಭಾಸ್ ನಟನೆಯ ಪ್ರಶಾಂತ್‌ ನೀಲ್‌ ನಿರ್ದೇಶನದ ʼಸಾಲಾರ್ʼ ಚಿತ್ರ ಬ್ಲಾಕ್ ಬಸ್ಟರ್ ಹಿಟ್‌ ಆಗಿದೆ. ಅಲ್ಲದೆ, ಜನವರಿ 16 ರಂದು ಚಿತ್ರತಂಡ ಸಕ್ಸಸ್ ಪಾರ್ಟಿ ಸಹ ಆಚರಿಸಿತು. ಇದಕ್ಕೆ ನಿರ್ದೇಶಕ ಪ್ರಶಾಂತ್ ನೀಲ್, ಪ್ರಭಾಸ್, ಶ್ರುತಿ ಹಾಸನ್, ಜಗಪತಿ ಬಾಬು, ಈಶ್ವರಿ ರಾವ್ ಮತ್ತಿತರರು ಹಾಜರಿದ್ದರು. 

ಇನ್ನು ಸಂಭ್ರಮಾಚರಣೆಯಲ್ಲಿ ಟಾಲಿವುಡ್‌ ನಟ ಅಖಿಲ್ ಅಕ್ಕಿನೇನಿ ಕಾಣಿಸಿಕೊಂಡಿರುವುದು ಹೊಸ ವದಂತಿ ಹುಟ್ಟಿಕೊಳ್ಳಲು ಕಾರಣವಾಗಿದೆ. ಸಲಾರ್ ಭಾಗ 2 ನಲ್ಲಿ ಅಖಿಲ್ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಅನೇಕರನ್ನು ಅಚ್ಚರಿಗೊಳಿಸಿದೆ. 

ಇದನ್ನೂ ಓದಿ: "ಇದು ನನ್ನ ಫೋನ್ ನಂಬರ್ ಅಲ್ವೇ ಅಲ್ಲ ": ಫ್ಯಾನ್ಸ್‌ಗೆ ಎಚ್ಚರಿಸಿದ ರುಕ್ಮಿಣಿ!

ನಟ ಅಖಿಲ್ ʼಸಲಾರ್ʼ ಸೀಕ್ವೆಲ್‌ನಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹುಟ್ಟಿಕೊಂಡಿದೆ. ಇನ್ನು ಕೆಲವರು ದೇವಾ ಅವರ ಚಿಕ್ಕಣ್ಣನ ಪಾತ್ರದಲ್ಲಿ ಅಖಿಲ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಇದೆಲ್ಲಾ ಸುಳ್ಳು ಸುದ್ದಿ ಎಂದು ಸಲಾರ್ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಯೊಬ್ಬರು ಮಾಹಿತಿ ನೀಡಿದ್ದಾರೆ.. ಇತರ ಅತಿಥಿಗಳಂತೆ ಅಖಿಲ್ ಅವರನ್ನೂ ಆಹ್ವಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮತ್ತೊಂದೆಡೆ, ಸಲಾರ್‌ನ OTT ಬಿಡುಗಡೆಗಾಗಿ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಈ ತಿಂಗಳ ಕೊನೆಯಲ್ಲಿ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಈ ಚಿತ್ರ ಒಟಿಟಿಗೆ ಬರುವ ಸಾಧ್ಯತೆಗಳಿವೆ. ಈ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ. ಸಧ್ಯ ಪ್ರಭಾಸ್ ಈ ವರ್ಷ ಕಲ್ಕಿ 2898 AD ಮತ್ತು ರಾಜಾಸಾಬ್ ಮೂಲಕ ತೆರೆಗೆ ಬರಲು ರೆಡಿಯಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News