ವಿಚ್ಛೇದನ ವದಂತಿ ಮಧ್ಯೆ ದೇಶ ತೊರೆದು ಮಗಳ ಜೊತೆ ಹೊರಟ ನಟಿ ಐಶ್ವರ್ಯಾ ರೈ! ನಿಜವಾಯ್ತೇ ಡಿವೋರ್ಸ್!?

Aishwarya Bachchan Spotted at Airport: ಇಬ್ಬರೂ ಸಹ ಕಪ್ಪು ಬಟ್ಟೆ ಧರಿಸಿದ್ದು, ಕಾರಿನಿಂದ ಇಳಿದು ವಿಮಾನ ನಿಲ್ದಾಣದ ಕಡೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಪಾಪರಾಜಿಗಳು ಐಶ್ವರ್ಯಾರನ್ನು ಹಿಂಬಾಲಿಸುತ್ತಿರುವಾಗ, ಆರಾಧ್ಯ ಹೀಗೆಂದು ಸೂಚನೆ ನೀಡಿದ್ದಾರೆ; “ಹುಷಾರಾಗಿರಿ”

Written by - Bhavishya Shetty | Last Updated : Jul 16, 2024, 10:27 AM IST
    • ನಟಿ ಐಶ್ವರ್ಯಾ ರೈ ಜುಲೈ 14ರ ರಾತ್ರಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ
    • ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
    • ಕಪ್ಪು ಬಟ್ಟೆ ಧರಿಸಿದ್ದು, ಕಾರಿನಿಂದ ಇಳಿದು ವಿಮಾನ ನಿಲ್ದಾಣದ ಕಡೆ ತೆರಳಿದ್ದಾರೆ
ವಿಚ್ಛೇದನ ವದಂತಿ ಮಧ್ಯೆ ದೇಶ ತೊರೆದು ಮಗಳ ಜೊತೆ ಹೊರಟ ನಟಿ ಐಶ್ವರ್ಯಾ ರೈ! ನಿಜವಾಯ್ತೇ ಡಿವೋರ್ಸ್!? title=
Aishwarya Bachchan Spotted at Airport

Aishwarya Bachchan Spotted at Airport: ನಟಿ ಐಶ್ವರ್ಯಾ ರೈ ಬಚ್ಚನ್ ಜುಲೈ 14 ರ ರಾತ್ರಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಪುತ್ರಿ ಆರಾಧ್ಯ ಬಚ್ಚನ್ ಕೂಡ ಜೊತೆಗಿದ್ದರು. ಸದ್ಯ ಅವರ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಇಬ್ಬರೂ ಸಹ ಕಪ್ಪು ಬಟ್ಟೆ ಧರಿಸಿದ್ದು, ಕಾರಿನಿಂದ ಇಳಿದು ವಿಮಾನ ನಿಲ್ದಾಣದ ಕಡೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಪಾಪರಾಜಿಗಳು ಐಶ್ವರ್ಯಾರನ್ನು ಹಿಂಬಾಲಿಸುತ್ತಿರುವಾಗ, ಆರಾಧ್ಯ ಹೀಗೆಂದು ಸೂಚನೆ ನೀಡಿದ್ದಾರೆ; “ಹುಷಾರಾಗಿರಿ”

ಇದನ್ನೂ ಓದಿ: ಹೊಲದಲ್ಲಿದ್ದ ಶೆಡ್‌ಗೆ ದುಷ್ಕರ್ಮಿಗಳಿಂದ ಬೆಂಕಿ: ಇಬ್ಬರು ಸಜೀವ ದಹನ, ಮೂವರು ಪಾರು

ಐಶ್ವರ್ಯಾ ಮತ್ತು ಆರಾಧ್ಯ ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಇವರಿಬ್ಬರ ಬಾಂಧವ್ಯ ಅಭಿಮಾನಿಗಳಿಗೆ ತುಂಬಾ ಇಷ್ಟವಾಗುತ್ತಿದೆ. ಐಶ್ವರ್ಯಾ ಆರಾಧ್ಯಳನ್ನು ಸಂಪೂರ್ಣವಾಗಿ ಕೇರ್ ಮಾಡುತ್ತಿದ್ದು, ಪ್ರತಿ ಕಾರ್ಯಕ್ರಮಕ್ಕೂ ಮಗಳ ಜೊತೆ ಹೋಗುತ್ತಾರೆ.

ಐಶ್ವರ್ಯಾ ಮತ್ತು ಅಭಿಷೇಕ್ ಡಿವೋರ್ಸ್ ವದಂತಿ!?

ಇತ್ತೀಚೆಗೆ ಅನಂತ್ ಅಂಬಾನಿ ಮದುವೆ ಸಮಾರಂಭದಲ್ಲಿ ಐಶ್ವರ್ಯಾ ರೈ ಮಗಳು ಆರಾಧ್ಯ ಜೊತೆ ಕಾಣಿಸಿಕೊಂಡಿದ್ದಾರೆ. ತಾಯಿ ಮತ್ತು ಮಗಳು ಇಬ್ಬರೂ ಒಟ್ಟಿಗೆ ಪೋಸ್ ನೀಡಿದ್ದರು. ಆದ್ರೆ, ಬಚ್ಚನ್ ಫ್ಯಾಮಿಲಿ ಬೇರೆ ಬೇರೆ ಪೋಸ್ ಕೊಟ್ಟಿತ್ತು. ಇದಾದ ನಂತರ ಐಶ್ವರ್ಯಾ ಮತ್ತು ಅಭಿಷೇಕ್ ನಡುವೆ ಬಿರುಕು ಮೂಡಿರುವುದು ನಿಜವೇನೋ ಎಂಬಂತೆ ವದಂತಿಗಳು ಬರಲಾರಂಭಿಸಿದವು. ಆದರೆ, ನಂತರ ಮದುವೆ ಮನೆಯ ಕೆಲ ಫೋಟೋಗಳು ವೈರಲ್ ಆಗಿದ್ದು, ಈ ಸಂದರ್ಭದಲ್ಲಿ ಅಭಿಷೇಕ್ ಜೊತೆ ಐಶ್ವರ್ಯಾ ಜೊತೆಯಾಗಿ ಕುಳಿತಿರುವುದು ಕಂಡುಬಂದಿತ್ತು.

ಇದನ್ನೂ ಓದಿ:  ಮಳೆಗಾಲದಲ್ಲಿ ಕಾಡುವ ನೆಗಡಿ, ಶೀತಕ್ಕೆ ಚಿಟಿಕೆಯಲ್ಲಿ ಪರಿಹಾರ ನೀಡುತ್ತದೆ ಈ ಎಲೆ! ಕೇವಲ ವಾಸನೆ ತೆಗೆದರೆ ಸಾಕು…

ಇನ್ನು ಅನಂತ್ ಮತ್ತು ರಾಧಿಕಾ ಆರತಕ್ಷತೆ ಕಾರ್ಯಕ್ರಮಕ್ಕೆ ಐಶ್ವರ್ಯಾ ಮತ್ತು ಆರಾಧ್ಯ ಆಗಮಿಸಿರಲಿಲ್ಲ ಎಂದು ತಿಳಿದುಬಂದಿದೆ. ಈ ಬೆನ್ನಲ್ಲೇ ಮಗಳ ಜೊತೆ ಮುಂಬೈ ವಿಮಾನ ನಿಲ್ದಾಣದಲ್ಲಿ ಐಶ್ವರ್ಯಾ ಕಾಣಿಸಿಕೊಂಡಿದ್ದು, ದೇಶ ತೊರೆದು ಎತ್ತ ಹೊರಟಿದ್ದಾರೆ ಮಾಜಿ ವಿಶ್ವಸುಂದರಿ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News