ಪುತ್ರನ ಹೆಸರು ಬಹಿರಂಗಪಡಿಸಿದ ಕಾಮಿಡಿ ಕಿಂಗ್ Kapil Sharma,

ಕಪಿಲ್ ಶರ್ಮಾ ಫೆಬ್ರವರಿಯಲ್ಲಿ ಎರಡನೇ ಬಾರಿಗೆ ತಂದೆಯಾಗಿದ್ದಾರೆ. ಕಪಿಲ್ ಶರ್ಮ ಪತ್ನಿ ಗಿನ್ನಿ ಗಂಡು ಮಗಿವಿಗೆ ಜನ್ಮ ನೀಡಿದ್ದಾರೆ. ಈಗ ಕಪಿಲ್ ಶರ್ಮಾ ತಮ್ಮ ಮಗನ ಹೆಸರನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.   

Written by - Ranjitha R K | Last Updated : Apr 5, 2021, 09:11 AM IST
  • ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವ ಕಪಿಲ್ ಶರ್ಮಾ
  • ಈಗ ಕಪಿಲ್ ಸುದ್ದಿಯಲ್ಲಿರುವುದು ಕಾಮಿದಿಂದಾಗಿ ಅಲ್ಲ
  • ಮಗನಿಗೆ ಮುದ್ದಾದ ಹೆಸರಿಟ್ಟಿರುವ ಕಪಿಲ್ ದಂಪತಿ
ಪುತ್ರನ ಹೆಸರು ಬಹಿರಂಗಪಡಿಸಿದ ಕಾಮಿಡಿ ಕಿಂಗ್ Kapil Sharma,   title=
ಮಗನಿಗೆ ಮುದ್ದಾದ ಹೆಸರಿಟ್ಟಿರುವ ಕಪಿಲ್ ದಂಪತಿ (file photo)

ನವದೆಹಲಿ : ಕಾಮಿಡಿ ಕಿಂಗ್ ಎಂದೇ ಖ್ಯಾತಿ ಪಡೆದಿರುವ ಕಪಿಲ್ ಶರ್ಮಾ (Kapil Sharma) ಮತ್ತೊಮ್ಮೆ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.  ಈ ಬಾರಿ ಕಪಿಲ್ ಪ್ರಶಂಸೆ ಪಡೀತಾ ಇರುವುದು ಕಾಮಿಡಿಗಾಗಿ (Comedy) ಅಲ್ಲ. ಬದಲಾಗಿ ಅವರ ಮಗುವಿನ ನಾಮಕಾರಣದ ಕಾರಣದಿಂದಾಗಿ. ತಮ್ಮ ಮಗನಿಗೆ ಇಟ್ಟಿರುವ ಹೆಸರಿನಿಂದಾಗಿ ಕಪಿಲ್ ಈಗ ಸುದ್ದಿಯಲ್ಲಿದ್ದಾರೆ. ಕಪಿಲ್ ಶರ್ಮಾ ಮಗನ ಹೆಸರು ಕೇಳಿದ ಪ್ರತಿಯೊಬ್ಬರೂ ಕಪಿಲ್ ಅವರನ್ನು ಹೊಗಳುತ್ತಿದ್ದಾರೆ.  

ಕಪಿಲ್ ಶರ್ಮ  (Kapil Sharma) ಫೆಬ್ರವರಿಯಲ್ಲಿ ಎರಡನೇ ಬಾರಿಗೆ ತಂದೆಯಾಗಿದ್ದಾರೆ. ಇಲ್ಲಿಯವರೆಗೆ ಕಪಿಲ್ ತಮ್ಮ ಮಗನ ಹೆಸರು ಮತ್ತು ಫೋಟೋವನ್ನು (Photo) ಬಹಿರಂಗಪಡಿಸಿರಲಿಲ್ಲ. ಆದರೆ ಈಗ ಕಪಿಲ್ಫ್ ಸೋಷಿಯಲ್ ಮೀಡಿಯಾದಲ್ಲಿ (Social Media) ತಮ್ಮ ಪುತ್ರನ ಹೆಸರನ್ನು ಬಹಿರಂಗಪಡಿಸಿದ್ದಾರೆ. ಕಪಿಲ್ ಜನ್ಮದಿನದಂದು ಗಾಯಕಿ ನೀತಿ ಮೋಹನ್ (Neeti Mohan) ಶುಭಾಶಯ ನೀಡುವುದರೊಂದಿಗೆ, ಮಗನ ಏನೆಂದು ನಾಮಕರಣ ಮಾಡಲಾಗಿದೆ ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರ ನೀಡಿರುವ ಕಪಿಲ್ ತಮ್ಮ ಪುತ್ರನ ಹೆಸರನ್ನು ಕೂಡಾ ಸೋಶಿಯಲ್ ಮಿಡಿಯಾದಲ್ಲಿ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ : ಬಾಲಿವುಡ್ ನಟ ಗೋವಿಂದ್ ಗೆ ಕೊರೊನಾ ಧೃಢ

ಕಪಿಲ್ ಮತ್ತು ಗಿನ್ನಿಯ ಮಗನ ಹೆಸರೇನು?
ನೀತಿ ಮೋಹನ್, ಶುಭಾಶಯಕ್ಕೆ ಧನ್ಯವಾದ ಹೇಳಿದ ಕಪಿಲ್, ತಮ್ಮ ಮಗನ ಹೆಸರನ್ನು ತಿಳಿಸಿದ್ದಾರೆ.  ಕಪಿಲ್ ಮತ್ತು ಗಿನ್ನಿ (Ginni Chatrath) ದಂಪತಿ ತಮ್ಮ ಪುತ್ರನಿಗೆ  ತ್ರಿಶನ್ (Trishaan) ಎಂದು ನಾಮಕರಣ ಮಾಡಿದ್ದಾರೆ.  ತ್ರಿಶನ್  ಅನ್ನುವ ಹೆಸರು ಸ್ವಲ್ಪ ಡಿಫರೆಂಟ್ ಆಗಿಯೂ ಇದೆ ಅರ್ಥಗರ್ಭಿತವಾಗಿಯೂ ಇದೆ. ಈ ಹೆಸರಿಗೆ ಎರಡು ಅರ್ಥವಿದೆ. ಒಂದು ತ್ರಿಶನ್ ಎಂದರೆ ಸಂತೋಷದ ರಾಜ (King of joy) ಎಂದರ್ಥ. ಇನ್ನೊಂದು ಅರ್ಥದ ಪ್ರಕಾರ ತ್ರಿಶನ್ ಅಂದರೆ ವಿಜಯ (Victory).  

ಇದನ್ನೂ ಓದಿ : Rashmika Mandanna: ಅಮಿತಾಬ್ ಬಚ್ಚನ್ ಜೊತೆಗೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಕಿರಿಕ್ ಬೆಡಗಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News