Bollywood Actress: ಅಮಿತಾಬ್‌ ಬಚ್ಚನ್‌ ಸೇರಿ 6 ಜನರೊಂದಿಗೆ ಅಫೇರ್‌.. ಸಿನಿಮಾ ಜಗತ್ತನ್ನು ಆಳಿದ 69 ವರ್ಷದ ಈ ಹಿರಿಯ ತಾರೆ ಈಗಲೂ ಒಂಟಿ!!

Bollywood Star Actress Rekha: ಹಲವಾರು ನಟ-ನಟಿಯರು ತಮ್ಮ ಸಿನಿಮಾಗಳ ಹೊರತಾಗಿ ವೈಯಕ್ತಿಕ ವಿಚಾರಕ್ಕೆ ಹೆಚ್ಚು ಸುದ್ದಿಯಾಗುತ್ತಾರೆ.. ಇದೀಗ ನಾವು ಹೇಳಲು ಹೊರಟಿರುವ ತಾರೆಯೂ ಒಂದು ಕಾಲದಲ್ಲಿ ಸಿನಿರಂಗವನ್ನು ಆಳಿದ ಚೆಲುವೆ.. ಆದರೆ ಇವರು ಹೆಚ್ಚಾಗಿ ಮುಖ್ಯಾಂಗಳಲ್ಲಿ ಉಳಿದದ್ದು ವೈಯಕ್ತಿಕ ವಿಚಾರವಾಗಿ.. 

Written by - Savita M B | Last Updated : Apr 18, 2024, 12:35 PM IST
  • ತನ್ನ ಜೀವನದಲ್ಲಿ ಅನೇಕ ಏರಿಳಿತಗಳನ್ನು ಕಂಡ ಈ ನಟಿಗೆ ಬಾಲ್ಯದಲ್ಲಿ ಅಪ್ಪನ ಪ್ರೀತಿ ಸಿಗಲಿಲ್ಲ
  • ಈ ತಾರೆಯ ವೃತ್ತಿಜೀವನ ಎಷ್ಟು ಅದ್ಭುತವಾಗಿತ್ತೋ.. ಅವರ ವೈಯಕ್ತಿಕ ಜೀವನವೂ ಗೊಂದಲದಿಂದ ಕೂಡಿತ್ತು.
Bollywood Actress: ಅಮಿತಾಬ್‌ ಬಚ್ಚನ್‌ ಸೇರಿ 6 ಜನರೊಂದಿಗೆ ಅಫೇರ್‌.. ಸಿನಿಮಾ ಜಗತ್ತನ್ನು ಆಳಿದ 69 ವರ್ಷದ ಈ ಹಿರಿಯ ತಾರೆ ಈಗಲೂ ಒಂಟಿ!! title=

Bollywood Star Actress Rekha Affairs: ತನ್ನ ಜೀವನದಲ್ಲಿ ಅನೇಕ ಏರಿಳಿತಗಳನ್ನು ಕಂಡ ಈ ನಟಿಗೆ ಬಾಲ್ಯದಲ್ಲಿ ಅಪ್ಪನ ಪ್ರೀತಿ ಸಿಗಲಿಲ್ಲ. ಈ ತಾರೆಯ ವೃತ್ತಿಜೀವನ ಎಷ್ಟು ಅದ್ಭುತವಾಗಿತ್ತೋ.. ಅವರ ವೈಯಕ್ತಿಕ ಜೀವನವೂ ಗೊಂದಲದಿಂದ ಕೂಡಿತ್ತು. 

ಹೌದು ಈ ನಟಿ ಒಟ್ಟು ಆರು ಜನರೊಂದಿಗೆ ಅಫೇರ್‌ ಹೊಂದಿದ್ದರು.. ನಂತರ ಮೊದಲಿಗೆ ಉದ್ಯಮಿಯೊಂದಿಗೆ ಮದುವೆಯಾಗಿ ಅವರಿಂದಲೂ ವಿಚ್ಛೇದನ ಪಡೆದು ದೂರವಾದರು.. ಒಂದು ಕಾಲದಲ್ಲಿ ಸಿನಿಮಾ ಜಗತ್ತನ್ನು ಆಳಿದ ಈ ನಟಿಗೆ 69 ವರ್ಷ. ಈ ವಯಸ್ಸಿನಲ್ಲೂ ಒಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ.. 

ಇದನ್ನೂ ಓದಿ-Rishabh Shetty: ಕಾಂತಾರ ಸಿನಿಮಾ ಮೂಲಕ ಘರ್ಜಿಸಿದ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಓದಿದ್ದೇನು ಗೊತ್ತಾ? ಇವರ ವಿದ್ಯಾರ್ಹತೆ ಗೊತ್ತಾದ್ರೆ ಶಾಕ್‌ ಆಗ್ತೀರಾ!!

ಒಂದಾನೊಂದು ಕಾಲದಲ್ಲಿ ಈಕೆ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಾಗ ಅನೇಕ ಯುವಕರು ಸಿಳ್ಳೆ ಹಾಕಿ ಸಂಭ್ರಮಿಸುತ್ತಿದ್ದರು. ಅವರೇ ಬಾಲಿವುಡ್ ನಟಿ ರೇಖಾ. ವಯಸ್ಸು ಎಪ್ಪತ್ತರ ಸಮೀಪದಲ್ಲಿದ್ದರೂ ರೇಖಾ ಆ ಸೌಂದರ್ಯವನ್ನು ಕಾಪಾಡಿಕೊಂಡು ಬರುತ್ತಿದ್ದಾರೆ.. 

ಅಮಿತಾಬ್ ಬಚ್ಚನ್ ರೇಖಾ ಅವರೊಂದಿಗೆ ಸಂಬಂಧ ಹೊಂದಿದ ಮೊದಲ ನಟ ಅಲ್ಲ. ರೇಖಾ ಅವರ ಹೆಸರು ಮೊದಲು ಜೀತೇಂದ್ರನೊಂದಿಗೆ ಸೇರಿಕೊಂಡಿತ್ತು.. ಅದರ ನಂತರ, ನಟ ಕಿರಣ್ ಕುಮಾರ್ ಜೊತೆ ರೇಖಾ ಅವರ ಸಂಬಂಧವು ಸ್ವಲ್ಪ ಸಮಯದವರೆಗೆ ಮುಂದುವರೆಯಿತು. ಕಿರಣ್ ವಿನೋದ್ ಮೆಹ್ರಾ ಅವರ ಆತ್ಮೀಯ ಸ್ನೇಹಿತ. ಅದರ ನಂತರ ಇವರಿಬ್ಬರೂ ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಆದರೆ ಸಿಮಿ ಗ್ರೆವಾಲ್ ಅವರೊಂದಿಗಿನ ಸಂದರ್ಶನದಲ್ಲಿ ರೇಖಾ ಅವರು ವಿನೋದ್ ಮೆಹ್ರಾ ಅವರೊಂದಿಗಿನ ವಿವಾಹದ ಸುದ್ದಿ ಸುಳ್ಳು ಎಂದು ತಳ್ಳಿಹಾಕಿದ್ದರು.

ಇದನ್ನೂ ಓದಿ-Diganth: ಉತ್ತರಕಾಂಡದಲ್ಲಿ ಗುಟ್ಕಾ ಮಲ್ಲಿಗೆಯಾದ ದೂದ್‌ ಪೇಡ ದಿಗಂತ್:‌ ಹೊಸ ರಗಡ್‌ ಲುಕ್‌ನಲ್ಲಿ ನಟ!

ಅಮಿತಾಬ್ ಬಚ್ಚನ್ ಜೊತೆ ರೇಖಾ ಅವರ ಸಂಬಂಧ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇಬ್ಬರೂ ಮೊದಲ ಬಾರಿಗೆ ಸಿನಿಮಾದ ಸೆಟ್‌ನಲ್ಲಿ ಕಾಣಿಸಿಕೊಂಡರು. ರೇಖಾ ಅವರು ಅಮಿತಾಬ್ ಮೇಲಿನ ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಿದ್ದರು. ಅಮಿತಾಭ್-ರೇಖಾ ಮದುವೆಯ ವದಂತಿಗಳ ನಂತರ, ಜಯಾ ಬಚ್ಚನ್ ರೇಖಾ ಅವರೊಂದಿಗೆ ಕೆಲಸ ಮಾಡುವುದಕ್ಕೆ ಬಟ್ಟಿರಲಿಲ್ಲ.. ಎಂದು ಬಾಲಿವುಡ್ ಮೂಲಗಳು ಹೇಳುತ್ತವೆ. ಮೇಲಾಗಿ ರೇಖಾ ಅಮಿತಾಬ್ ಜೊತೆಗಿನ ಸಂಬಂಧ ನಮ್ಮ ದೇಶದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು.

ರೇಖಾ ಹೆಸರು ಮತ್ತೆ ಸಂಜಯ್ ದತ್ ಜೊತೆ ತಳುಕು ಹಾಕಿಕೊಂಡಿತ್ತು, ಆದರೆ ಇಬ್ಬರೂ ನಮ್ಮ ನಡುವೆ ಅಂತಹದ್ದೇನೂ ಇಲ್ಲ ಎಂದು ನಿರಾಕರಿಸಿದರು. ‘ಜಮೀನ್ ಔಸ್ಮಾನ್’ ಚಿತ್ರದಲ್ಲಿ ಇವರಿಬ್ಬರು ನಟಿಸುತ್ತಿರುವಾಗಲೇ ಇವರಿಬ್ಬರ ಅಫೇರ್ ಬಗ್ಗೆ ಮಾತುಕತೆ ಶುರುವಾಗಿತ್ತು.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News