ನವದೆಹಲಿ: ಟಾಲಿವುಡ್ ಚಿತ್ರರಂಗದ ಸೂಪರ್‌ಸ್ಟಾರ್ ದಂಪತಿಯಾಗಿದ್ದ ನಾಗ ಚೈತನ್ಯ(Naga Chaitanya) ಮತ್ತು ಸಮಂತಾ ವೈವಾಹಿಕ ಜೀವನ ಇತ್ತೀಚೆಗೆ ಭಾರೀ ಸುದ್ದಿಯಲ್ಲಿದೆ. 4 ವರ್ಷಗಳ ದಾಪಂತ್ಯ ಜೀವನಕ್ಕೆ ಈ ಜೋಡಿ ಡಿವೋರ್ಸ್ ಮೂಲಕ ಅಂತ್ಯ ಹಾಡಿದೆ. ಅನೋನ್ಯವಾಗಿಯೇ ಇದ್ದ ಈ ಸ್ಟಾರ್ ದಂಪತಿ ಬೇರೆಯಾಗಲು ಕಾರಣವೇನೆಂದು ಅವರ ಅಭಿಮಾನಿಗಳು ತಲೆಕಡೆಸಿಕೊಂಡಿದ್ದಾರೆ.
ಅನೇಕ ದಿನಗಳಿಂದ ಗಾಳಿಸುದ್ದಿಯಾಗಿಯೇ ಇದ್ದ ಸಮಂತಾ-ನಾಗಚೈತನ್ಯ ವಿಚ್ಛೇದನ(Samantha Prabhu-Naga Chaitanya divorce)ಕ್ಕೆ ತೆರೆಬಿದ್ದಿದೆ. ಆರಂಭದಲ್ಲಿ ತಮ್ಮ ವಿರುದ್ಧ ಹರಡಿದ್ದ ಸುದ್ದಿಗಳು ಕೇವಲ ಊಹಾಪೋಹಗಳು ಎಂದು ಹೇಳಿಕೊಂಡು ಬಂದಿದ್ದ ಈ ಜೋಡಿ ದಿಢೀರನೇ ಬೇರೆ ಬೇರೆ ಆಗುತ್ತಿರುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದೆ. ನಾವಿಬ್ಬರು ಸೇರಿಯೇ ವಿಚ್ಛೇದನ ಪಡೆಯಲು ನಿರ್ಧರಿಸಿದ್ದೇವೆ ಅಂತಾ ತಾರಾದಂಪತಿ ಹೇಳಿಕೊಂಡಿದೆ. ಇವರಿಬ್ಬರ ಡಿವೋರ್ಸ್ ಬೆನ್ನಲ್ಲೇ ಸಮಂತಾ ಅವರ ಮಾಜಿ ಲವರ್ ನಟ ಸಿದ್ಧಾರ್ಥ್ ಮಾಡಿರುವ ಟ್ವೀಟ್ ವೊಂದು ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಇದನ್ನೂ ಓದಿ: ಅನುಷ್ಕಾ ಶೆಟ್ಟಿ ಯಾವಾಗ ಮದುವೆಯಾಗುತ್ತಾರೆ ಗೊತ್ತಾ? ಭವಿಷ್ಯ ನುಡಿದ ಜ್ಯೋತಿಷಿ..!
ನಟ ಸಿದ್ಧಾರ್ಥ್ ಟ್ವೀಟ್ ನಲ್ಲಿ ಏನಿದೆ..?
ಸಮಂತಾ ಮಾಜಿ ಪ್ರಿಯಕರ ನಟ ಸಿದ್ಧಾರ್ಥ್(Siddharth) ಮಾಡಿರುವ ಟ್ವೀಟ್ ಇದೀಗ ವೈರಲ್ ಆಗುತ್ತಿದ್ದು, ಗಂಭೀರ ಚರ್ಚೆ ಹುಟ್ಟುಹಾಕಿದೆ. ‘ಮೋಸಗಾರರು ಎಂದಿಗೂ ಏಳಿಗೆ ಆಗುವುದಿಲ್ಲ ಎಂಬ ವಿಚಾರವನ್ನು ಶಾಲೆಯಲ್ಲಿ ಶಿಕ್ಷಕರಿಂದ ನಾನು ಕಲಿತ ಮೊದಲ ಪಾಠಗಳಲ್ಲಿ ಒಂದು. ಹಾಗಾದರೆ ನಿಮ್ಮದು ಏನು?’ ಎಂದು ಪ್ರಶ್ನಿಸಿ ಸಿದ್ಧಾರ್ಥ್ ಟ್ವೀಟ್ ಮಾಡಿದ್ದಾರೆ. ಸಿದ್ಧಾರ್ಥ್ ತಮ್ಮ ಟ್ವೀಟ್ ನಲ್ಲಿ ಎಲ್ಲಿಯೂ ಯಾರ ಹೆಸರನ್ನು ಉಲ್ಲೇಖಿಸಿಲ್ಲ. ಆದರೆ ಈ ಟ್ವೀಟ್ ಸಮಂತಾ(Samantha Ruth Prabhu)ರನ್ನು ಉದ್ದೇಶಿಸಿಯೇ ಮಾಡಲಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಇದಕ್ಕೆ ಇದುವರೆಗೂ ಸಿದ್ಧಾರ್ಥ್ ಯಾವುದೇ ರೀತಿ ಉತ್ತರ ನೀಡಿಲ್ಲ.
One of the first lessons I learnt from a teacher in school...
"Cheaters never prosper."
What's yours?
— Siddharth (@Actor_Siddharth) October 2, 2021
ಇದನ್ನೂ ಓದಿ: ಕೊನೆಗೂ ತನ್ನ ಸುದೀರ್ಘ ಸಂಬಂಧದ ಬಗ್ಗೆ ಬಾಯ್ಬಿಟ್ಟ ಸಲ್ಮಾನ್ ಖಾನ್, ಹೆಸರು ಯಾರದ್ದು ಗೊತ್ತಾ?
ತೆಲುಗು ಚಿತ್ರರಂಗದಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಸಿದ್ಧಾರ್ಥ್(Siddharth) ಓರ್ವ ಅದ್ಭುತ ನಟನಾಗಿ ಗುರುತಿಸಿಕೊಂಡಿದ್ದಾರೆ. ಸ್ಟಾರ್ ನಟನಾದ ಬಳಿಕ ಅವರ ವೈಯಕ್ತಿಕ ಜೀವನ ಕೂಡ ಹೆಚ್ಚು ಸುದ್ದಿಯಲ್ಲಿತ್ತು. ಅನೇಕ ನಟಿಯರ ಜೊತೆಗೆ ಸಿದ್ಧಾರ್ಥ್ ಹೆಸರು ತಳಕು ಹಾಕಿಕೊಂಡಿತ್ತು. 2003ರಲ್ಲಿ ಮೇಘನಾ ಎಂಬುವರನ್ನು ವಿವಾಹವಾಗಿದ್ದ ನಟ 2007ರಲ್ಲಿ ಅವರಿಂದ ವಿಚ್ಛೇದನ ಪಡೆದುಕೊಂಡರು. ಇದಲ್ಲದೆ ‘ರಂಗ್ ದೇ ಬಸಂತಿ’ ಸಹನಟಿ ಸೋಹಾ ಅಲಿ ಖಾನ್ ಜೊತೆ ಸಿದ್ಧಾರ್ಥ್ ಗೆ ಲವ್ ಅಫೇರ್ ಇತ್ತು ಎಂಬ ಗಾಳಿಸುದ್ದಿಗಳು ಹರಡಿದ್ದವು. ಬಳಿಕ ಅವರ ಹೆಸರು ನಟಿ ಶ್ರುತಿ ಹಾಸನ್ ಜೊತೆಗೂ ತಳುಕು ಹಾಕಿಕೊಂಡಿತ್ತು. ಶ್ರುತಿ ಹಾಸನ್ ಬಳಿಕ ಅವರು ಸಮಂತಾ ಜೊತೆ ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. ಆರಂಭದಲ್ಲಿ ಪ್ರೀತಿಸಿದ್ದ ಈ ಜೋಡಿ ಬಳಿಕ ದೂರವಾಗಿದ್ದರಂತೆ. ಬಳಿಕ ಸಮಂತಾ 2010ರಲ್ಲಿ ನಾಗಚೈತನ್ಯ(Naga Chaitanya) ಜೊತೆಗೆ ಡೇಟಿಂಗ್ ಶುರು ಮಾಡಿ, 2017ರಲ್ಲಿ ಸಪ್ತಪದಿ ತುಳಿದಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.