ಮೆಜೆಸ್ಟಿಕ್​ ಸಿನಿಮಾದಲ್ಲಿ ದರ್ಶನ್​ ಹೀರೋ ಆಗಲು ನಿಜವಾದ ಕಾರಣ ಇವರೇ ಅಂತೆ.!?

Mejestic Movie : ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸಿದ ಸಿನಿಮಾ ಮೆಜೆಸ್ಟಿಕ್. ಇಂದಿಗೆ ಈ ಚಿತ್ರ ಬಿಡುಗಡೆಯಾಗಿ 21 ವರ್ಷಗಳು ಕಳೆದಿವೆ. ಪಿ.ಎನ್ ಸತ್ಯ ನಿರ್ದೇಶಿಸಿದ ಈ ಸಿನಿಮಾವನ್ನು ಬಾ.ಮಾ ಹರೀಶ್ - ಎಂ.ಜಿ.ರಾಮಮೂರ್ತಿ ಪ್ರೊಡ್ಯೂಸ್‌ ಮಾಡಿದ್ದರು. 

Written by - Chetana Devarmani | Last Updated : Feb 8, 2023, 05:37 PM IST
  • ದರ್ಶನ್ ಮೊದಲ ಬಾರಿಗೆ ನಾಯಕನಾಗಿ ತೆರೆ ಮೇಲೆ ಕಾಣಿಸಿಕೊಂಡ ಸಿನಿಮಾ
  • ದಾಸ ದರ್ಶನ್ ಅಭಿನಯದ 'ಮೆಜೆಸ್ಟಿಕ್' ಸಿನಿಮಾಗೆ 21 ವರ್ಷಗಳ ಸಂಭ್ರಮ
  • ಮೆಜೆಸ್ಟಿಕ್​ ಸಿನಿಮಾದಲ್ಲಿ ದರ್ಶನ್​ ಹೀರೋ ಆಗಲು ನಿಜವಾದ ಕಾರಣ ಇವರೇ ಅಂತೆ.!?
ಮೆಜೆಸ್ಟಿಕ್​ ಸಿನಿಮಾದಲ್ಲಿ ದರ್ಶನ್​ ಹೀರೋ ಆಗಲು ನಿಜವಾದ ಕಾರಣ ಇವರೇ ಅಂತೆ.!?
Mejestic Movie

Mejestic Movie : ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸಿದ ಸಿನಿಮಾ ಮೆಜೆಸ್ಟಿಕ್. ಇಂದಿಗೆ ಈ ಚಿತ್ರ ಬಿಡುಗಡೆಯಾಗಿ 21 ವರ್ಷಗಳು ಕಳೆದಿವೆ. ಪಿ.ಎನ್ ಸತ್ಯ ನಿರ್ದೇಶಿಸಿದ ಈ ಸಿನಿಮಾವನ್ನು ಬಾ.ಮಾ ಹರೀಶ್ - ಎಂ.ಜಿ.ರಾಮಮೂರ್ತಿ ಪ್ರೊಡ್ಯೂಸ್‌ ಮಾಡಿದ್ದರು. ದರ್ಶನ್‌ ಅನೇಕ ಹಿಟ್‌ ಸಿನಿಮಾಗಳನ್ನು ನೀಡಿದ್ದರು, ಮೆಜೆಸ್ಟಿಕ್ ಮಾತ್ರ ಎಂದೆಂದಿಗೂ ಸ್ಪೆಷಲ್‌. ಆದರೆ ಸಿನಿಮಾ ರಿಲೀಸ್‌ ಆಗಿ 21 ವರ್ಷ ಕಳೆದಿರುವ ಸಂಭ್ರಮದ ಮಧ್ಯೆ ಮತ್ತೊಂದು ಇಂಟರೆಸ್ಟಿಂಗ್‌ ವಿಚಾರ ಮುನ್ನೆಲೆಗೆ ಬಂದಿದೆ.

ದರ್ಶನ್ ಮತ್ತು ಕಿಚ್ಚ ಸುದೀಪ್ ಅಂದಿನ ಸ್ನೇಹ ಸ್ಯಾಂಡಲ್‌ವುಡ್‌ನಲ್ಲಿ ಚಿರಕಾಲ ನೆನಪುಳಿಯುವಂತಹದ್ದು. ಆದರೆ ಕೆಲವು ಭಿನ್ನಾಭಿಪ್ರಾಯಗಳಿಂದ ಇಬ್ಬರೂ ಸದ್ಯ ಮೌನವಾಗಿದ್ದಾರೆ. 2002ರಲ್ಲಿ ರಿಲೀಸ್ ಮೆಜೆಸ್ಟಿಕ್ ಆದ ಕನ್ನಡದ ಸೂಪರ್‌ಹಿಟ್‌ ಸಿನಿಮಾಗಳಲ್ಲಿ ಒಂದು. ಈ ಸಿನಿಮಾ ಮೂಲಕವೇ ದರ್ಶನ್ ನಾಯಕ ನಟನಾಗಿ ಎಂಟ್ರಿಕೊಟ್ಟಿದ್ದು. ನಿರ್ಮಾಪಕ ರಾಮಮೂರ್ತಿ, ನಿರ್ದೇಶಕ ಸತ್ಯು ಹಾಗೂ ಛಾಯಾಗ್ರಾಹಕ ಅಣಜಿ ನಾಗರಾಜ್ - ಈ ಮೂವರು ಮೆಜೆಸ್ಟಿಕ್‌ ಸಿನಿಮಾದ ಕಾರಣಿಕರ್ತರು.

ಇದನ್ನೂ ಓದಿ : Mejestic : ದಾಸ ದರ್ಶನ್ ಅಭಿನಯದ 'ಮೆಜೆಸ್ಟಿಕ್' ಸಿನಿಮಾಗೆ 21 ವರ್ಷಗಳ ಸಂಭ್ರಮ.!

21 ವರ್ಷಗಳ ಹಿಂದೆ ಮೆಜೆಸ್ಟಿಕ್ ಸಿನಿಮಾ ಹಲವು ವಿಚಾರವಾಗಿ ಸುದ್ದಿಯಲ್ಲಿತ್ತು. ದರ್ಶನ್‍ ಹೀರೋ ಆಗಿ ಅಭಿನಯಿಸಿದ ಮೊದಲ ಸಿನಿಮಾ ಎಂಬುದು ಒಂದೆಡೆಯಾದರೆ ಮೆಜೆಸ್ಟಿಕ್ ಸಿನಿಮಾಗೆ ಕಿಚ್ಚ ಸುದೀಪ್ ಅವರೇ  ದರ್ಶನ್‌ ಅವರನ್ನು ರೆಫರ್ ಮಾಡಿದ್ದರು ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಮೆಜೆಸ್ಟಿಕ್‌ ಸಿನಿಮಾಗಾಗಿ ನಾಯಕನ ಹುಡುಕಾಟದಲ್ಲಿದ್ದಾಗ ಆಗಿದ್ದೇ ಬೇರೆ. 

ಆ ಸಮಯದಲ್ಲಿ ಕಿಚ್ಚ ಸುದೀಪ್ ಅವರನ್ನು ಮೆಜೆಸ್ಟಿಕ್ ಚಿತ್ರತಂಡ ಭೇಟಿ ಮಾಡಿತ್ತು. ಸುದೀಪ್‌ ಆಗ  ಹುಚ್ಚ ಸಿನಿಮಾ ಸಕ್ಸಸ್‍ನಲ್ಲಿ ತೇಲುತ್ತಿದ್ದರು. ಅನೇಕರು ಈ ವೇಳೆ ಸುದೀಪ್‌ ದರ್ಶನ್‌ ಹೆಸರು ಹೇಳಿದ್ದಾರೆ ಅಂದುಕೊಳ್ಳುತ್ತಾರೆ. ಆದರೆ ಆಗ ಅವರು ದರ್ಶನ್‌ ಹೆಸರು ಪ್ರಸ್ತಾಪಿಸಿಲ್ಲ. ಇದನ್ನು ಅಣಜಿ ನಾಗರಾಜ್ ಹೇಳಿದ್ದಾರೆ. ಅಣಜಿ ನಾಗರಾಜ್ ಅವರಿಗೆ ಮೊದಲೇ ದರ್ಶನ್​ ಪರಿಚಯವಿತ್ತಂತೆ. ದರ್ಶನ್​ ಬಗ್ಗೆ ನಿರ್ದೇಶಕ ಸತ್ಯ ಅವರ ಬಳಿ ಹೇಳಿದ್ದಾರೆ. ಆ ಬಳಿಕ ದರ್ಶನ್‌ ಅವರನ್ನು ಫೈನಲ್​ ಮಾಡಿ, ಮುಂದಿನ ಮಾತುಕತೆ ನಡೆಸಿದರಂತೆ. 

ಇದನ್ನೂ ಓದಿ : Sanvi Sudeep : ತಮ್ಮ ಕ್ರಶ್‌ ಮದುವೆಯಾಗಿದ್ದಕ್ಕೆ ಸುದೀಪ್‌ ಮಗಳು ಸಾನ್ವಿ ಬೇಸರ!?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

More Stories

Trending News