ರೇಣುಕಾಸ್ವಾಮಿ ಹತ್ಯೆ ಪ್ರಕರಣ..! ನ್ಯಾಯಾಲಯದಲ್ಲಿ ವಾದ ‌ಪ್ರತಿವಾದ ಹೇಗಿತ್ತು ಗೊತ್ತೆ..?

Renukaswamy murder case : ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಅರೆಸ್ಟ್ ಆಗಿರುವ ನಟ ದರ್ಶನ್ ಹಾಗೂ ಸಹಚರರಾದ ಧನರಾಜ್, ಪ್ರದೋಷ್ ವಿನಯ್ ಅವರನ್ನ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಪ್ರಕರಣದ ಮೊದಲ ಆರೋಪಿ ಪವಿತ್ರಾಗೌಡ, ಪವನ್, ನಂದೀಶ್, ರವಿ, ಅನುಕುಮಾರ್, ಜಗದೀಶ್, ನಾಗರಾಜ್, ಲಕ್ಷ್ಮಣ್ ಅವರನ್ನ ನ್ಯಾಯಾಂಗ ಬಂಧನಕ್ಕೆ‌ ವಿಧಿಸಿ ಆದೇಶಿಸಲಾಗಿದೆ.‌ 

Written by - VISHWANATH HARIHARA | Edited by - Krishna N K | Last Updated : Jun 20, 2024, 08:29 PM IST
    • ದರ್ಶನ್ ಸೇರಿ ನಾಲ್ವರಿಗೆ ಎರಡು ದಿನ ಪೊಲೀಸ್ ಕಸ್ಟಡಿ ವಿಸ್ತರಣೆ
    • ಪರಸ್ಪನ ಅಗ್ರಹಾರಕ್ಕೆ ಹೊರಟ ಪವಿತಾ ಗೌಡ ಅಂಡ್ ಪಟಾಲಂ
    • 24ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣ..! ನ್ಯಾಯಾಲಯದಲ್ಲಿ ವಾದ ‌ಪ್ರತಿವಾದ ಹೇಗಿತ್ತು ಗೊತ್ತೆ..? title=
Darshan, Pavithra gowda,

Darshan case : ರೇಣುಕಾಸ್ವಾಮಿ ಕೊಲೆ‌ ಕೇಸಲ್ಲಿ ಅಂದರ್ ಆಗಿರುವ ನಟ ದರ್ಶನ್ ಸೇರಿ ನಾಲ್ಕು ಮಂದಿಗೆ ಎರಡು ದಿನಗಳ ಕಾಲ ಮತ್ತೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಇನ್ನುಳಿದವರನ್ನ ನ್ಯಾಯಾಂಗ ಬಂಧನಕ್ಕೆ ವಿಧಿಸಿ 24ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ. ಈ ಬಗ್ಗೆ ಫುಲ್ ಡಿಡೆಲ್ಸ್ ಇಲ್ಲಿದೆ.

ಯೆಸ್.. ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಅರೆಸ್ಟ್ ಆಗಿರುವ ನಟ ದರ್ಶನ್ ಹಾಗೂ ಸಹಚರರಾದ  ಧನರಾಜ್, ಪ್ರದೋಷ್ ವಿನಯ್ ಅವರನ್ನ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಪ್ರಕರಣದ ಮೊದಲ ಆರೋಪಿ ಪವಿತ್ರಾಗೌಡ, ಪವನ್, ನಂದೀಶ್, ರವಿ, ಅನುಕುಮಾರ್, ಜಗದೀಶ್, ನಾಗರಾಜ್, ಲಕ್ಷ್ಮಣ್ ಅವರನ್ನ ನ್ಯಾಯಾಂಗ ಬಂಧನಕ್ಕೆ‌ ವಿಧಿಸಿ ಆದೇಶಿಸಲಾಗಿದೆ.‌ ಪ್ರಕರಣದಲ್ಲಿ ಬಂಧಿತರಾಗಿದ್ದ ಕಾರ್ತಿಕ್, ನಿಖಿಲ್ ಹಾಗೂ ಕೇಶವಮೂರ್ತಿ ಹಾಗೂ ದೀಪಕ್ ಈಗಾಗಲೇ ಜೈಲಿನಲ್ಲಿದ್ದಾರೆ.

ಇದನ್ನೂ ಓದಿ:ಗಂಡನಿಗಾಗಿ ಕಿಡ್ನಿ ತ್ಯಾಗ, ಮಕ್ಕಳಿಗಾಗಿ ಸ್ವರ್ವಸ್ವವನ್ನೇ ಧಾರೆಯೆರೆದ ಮೀನಾ ತೂಗುದೀಪ..!

ಪೊಲೀಸ್ ಕಸ್ಟಡಿ ಅಂತ್ಯ ಹಿನ್ನೆಲೆ ಇಂದು ದರ್ಶನ್, ಪವಿತ್ರಾಗೌಡ ಸೇರಿದಂತೆ ಸಹಚರರನ್ನ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಾದ ಆರಂಭಿಸಿದ ಸರ್ಕಾರದ ಪರ ಅಭಿಯೋಜಕ ಪ್ರಸನ್ನ‌ಕುಮಾರ್, ಕೊಲೆ ಪ್ರಕರಣದಲ್ಲಿ ಕೆಲ ಆರೋಪಿಗಳ ವಿಚಾರಣೆ ಬಾಕಿಯಿದೆ. ಹತ್ಯೆಯಾದ ರೇಣುಕಾಸ್ವಾಮಿ ಮೊಬೈಲ್‌ ಇನ್ನೂ ಸಿಕ್ಕಿಲ್ಲ.‌ ಆರೋಪಿಗಳು ತನಿಖೆಗೆ ಸಹಕರಿಸುತ್ತಿಲ್ಲ, ಹೀಗಾಗಿ ನಾಲ್ಕು‌‌ ದಿನಗಳ ಕಾಲ‌‌ ಪೊಲೀಸ್ ಕಸ್ಟಡಿ ವಿಸ್ತರಿಸುವಂತೆ ಮನವಿ ಮಾಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ದರ್ಶನ್ ಪರ ವಕೀಲ ರಂಗನಾಥರೆಡ್ಡಿ, ಪ್ರಕರಣದಲ್ಲಿ ಈಗಾಗಲೇ ವಿಚಾರಣೆ ಮುಗಿದಿದೆ. ಮಹಜರಿಗೆ ಒಳಪಡಿಸಿ ಎಲ್ಲಾ ವಸ್ತುಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ. ಹೀಗಾಗಿ ಪೊಲೀಸ್ ಕಸ್ಟಡಿ ಪಡೆಯುವ ಅಗತ್ಯವಿಲ್ಲ. ಬಂಧಿತರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಮನವಿ ಮಾಡಿದರು.

ಇದನ್ನೂ ಓದಿ:ದಿನೇಶ್ ಕಾರ್ತಿಕ್ ಮಾತ್ರವಲ್ಲ… ಎರಡು ಬಾರಿ ಮದುವೆಯಾಗಿದ್ದಾರೆ ಟೀಂ ಇಂಡಿಯಾದ ಈ 5 ಕ್ರಿಕೆಟಿಗರು

ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ದರ್ಶನ್ ಸೇರಿ ನಾಲ್ವರನ್ನು ಎರಡು ದಿನಗಳ‌ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದರು‌. ಹೊರ ಬಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ದರ್ಶನ್ ಪರ ವಕೀಲ ರಂಗನಾಥ ರೆಡ್ಡಿ ಈ ಪ್ರಕರಣದಲ್ಲಿ ಪೊಲೀಸರು ಪ್ರತ್ಯಕ್ಷ ಸಾಕ್ಷಿಯಿದೆ ಎಂದು ವಾದ ಮಂಡಿಸಿದ್ದರು. 

ಇಷ್ಟು ದಿನ ಇಲ್ಲದ ಪ್ರತ್ಯಕ್ಷ ಸಾಕ್ಷಿ ಮುಂದೆ ಮಂಡಿಸಿದ್ದಾರೆ. ಪ್ರತ್ಯಕ್ಷ ಸಾಕ್ಷಿ ಇದೆ ಎನ್ನುವ ಕಾರಣ ಕೊಟ್ಟು ಕಸ್ಟಡಿಗೆ ಪಡೆದಿದ್ದಾರೆ‌. 30 ಲಕ್ಷ ಹಣ ರಿಕವರಿ ಮಾಡಿರುವ ಕಾರಣ ಕೊಟ್ಟು ಕಸ್ಟಡಿಗೆ ಕೇಳಿದ್ದರು. ಸದ್ಯ ಈ ಎರಡು ದಿನಗಳ ಕಸ್ಟಡಿ ಮುಗಿದ ಬಳಿಕ ಜಾಮೀನು ಅರ್ಜಿ ಸಲ್ಲಿಕೆ ಮಾಡುತ್ತೇವೆ ಎಂದರು. ಒಟ್ಟಿನಲ್ಲಿ ಇನ್ನೇರೆಡು ದಿನ ಕಸ್ಟಡಿಗೆ ಪಡೆದಿರುವ ಪೋಲಿಸರು ತನಿಖೆ ನಡೆಸೋದಕ್ಕೆ ಪ್ಲಾನ್ ಮಾಡಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News