'KGF-2' ಮೊದಲ ಸಾಂಗ್ ರಿಲೀಸ್‌ಗೆ ಡೇಟ್‌ ಫಿಕ್ಸ್..! ಯಾವಾಗ ಗೊತ್ತಾ..?

KGF-2 First Song Release Date Fix - ಈಗಾಗಲೇ 'ಜೇಮ್ಸ್‌' (James) ತೆರೆಗೆ ಬಂದು ಜಗತ್ತಿನಾದ್ಯಂತ ಘರ್ಜಿಸುತ್ತಿದೆ. ಈ ಮೂಲಕ ಕನ್ನಡಿಗರ ಚಿತ್ರವೊಂದು ಇಂಟರ್‌ನ್ಯಾಷನಲ್‌ ಲೆವೆಲ್‌ನಲ್ಲಿ ಹೊಸ ಟ್ರೆಂಡ್‌ ಕ್ರಿಯೇಟ್‌ ಮಾಡಿದೆ. 

Written by - Malathesha M | Edited by - Nitin Tabib | Last Updated : Mar 18, 2022, 09:12 PM IST
  • Yash ಅಭಿಮಾನಿಗಳಿಗೆ ಸಂತಸದ ಸುದ್ದಿ.
  • KGF-2 ಮೊದಲ ಸಾಂಗ್ ಬಿಡುಗಡೆಗೆ ದಿನಾಂಕ ನಿಗದಿ.
  • Toofan ಲಿರಿಕಲ್ ವಿಡಿಯೋ ಬಿಡುಗಡೆಗೆ ದಿನಾಂಕ ನಿಗದಿ.
'KGF-2' ಮೊದಲ ಸಾಂಗ್ ರಿಲೀಸ್‌ಗೆ ಡೇಟ್‌ ಫಿಕ್ಸ್..! ಯಾವಾಗ ಗೊತ್ತಾ..? title=
KGF-2 First Song Release Date Fix (File Photo)

KGF-2 First Song Release Date Fix - ಈಗಾಗಲೇ 'ಜೇಮ್ಸ್‌' (James) ತೆರೆಗೆ ಬಂದು ಜಗತ್ತಿನಾದ್ಯಂತ ಘರ್ಜಿಸುತ್ತಿದೆ. ಈ ಮೂಲಕ ಕನ್ನಡಿಗರ ಚಿತ್ರವೊಂದು ಇಂಟರ್‌ನ್ಯಾಷನಲ್‌ ಲೆವೆಲ್‌ನಲ್ಲಿ ಹೊಸ ಟ್ರೆಂಡ್‌ ಕ್ರಿಯೇಟ್‌ ಮಾಡಿದೆ. ಇದರ ಜೊತೆಗೆ ಇಡೀ ಜಗತ್ತೇ ಕಾಯುತ್ತಿರುವ ಬಹುನಿರೀಕ್ಷಿತ ಚಿತ್ರ 'ಕೆಜಿಎಫ್‌-2' ರಿಲೀಸ್‌ಗೂ ಕೌಂಟ್‌ಡೌನ್‌ ಶುರುವಾಗಿದೆ. ಈ ಮಧ್ಯೆ 'ಕೆಜಿಎಫ್‌-2' ನಿರ್ದೇಶಕ ಪ್ರಶಾಂತ್‌ ನೀಲ್‌ (Prashant Neel) ಅಭಿಮಾನಿಗಳಿಗೆ ಸರ್ಪ್ರೈಸ್‌ ಒಂದನ್ನು ನೀಡಿದ್ದಾರೆ.

'ಕೆಜಿಎಫ್‌-2' (KGF-2 Release Update) ರಿಲೀಸ್‌ಗೆ ಭರ್ಜರಿ ಪ್ರಚಾರದಲ್ಲಿ ನಿರತವಾಗಿದೆ ಚಿತ್ರತಂಡ. ಈ ನಡುವೆ ಒಂದೊಂದೇ ಸರ್ಪ್ರೈಸ್‌ಗಳ ಮೂಲಕ ಅಭಿಮಾನಿಗಳಿಗೆ ಸಿನಿಮಾ ಹಬ್ಬದೂಟ ಹಾಕಲು 'ಕೆಜಿಎಫ್‌-2'  ಟೀಂ ತುದಿಗಾಲಲ್ಲಿ ನಿಂತಿದೆ. ಹೀಗಿರುವ ಸಂದರ್ಭದಲ್ಲೇ ಹಾಡಿನ ಮೂಲಕ ಅಭಿಮಾನಿಗಳ ಮನವನ್ನು ತಣಿಸಲು ನಿರ್ದೇಶಕ ಪ್ರಶಾಂತ್‌ ನೀಲ್‌ ಮುಂದಾಗಿದ್ದಾರೆ.

ಇದನ್ನೂ ಓದಿ-Appu Fans celebrations : ಎರಡನೇ ದಿನವೂ ಮುಂದುವರಿದ 'ಜೇಮ್ಸ್‌' ಜಾತ್ರೆ..!

5 ಭಾಷೆಗಳಲ್ಲಿ ರಿಲೀಸ್
'ಕೆಜಿಎಫ್‌-2' (KGF-2 Latest News) ಸಿನಿಮಾದ ಮೊದಲ ಹಾಡನ್ನು ರಿಲೀಸ್‌ ಮಾಡುವುದಾಗಿ ಡೈರೆಕ್ಟರ್‌ ಪ್ರಶಾಂತ್‌ ನೀಲ್‌ ಘೋಷಿಸಿದ್ದಾರೆ.ಸೋಷಿಯಲ್‌ ಮೀಡಿಯಾದಲ್ಲಿ ಅಭಿಮಾನಿ ಬಳಗಕ್ಕೆ ಈ ಮೂಲಕ ಸರ್ಪ್ರೈಸ್‌ ನೀಡಲಾಗಿದೆ. ಮಾರ್ಚ್‌ 21ರ ಬೆಳಗ್ಗೆ 11.07ಕ್ಕೆ ತೂಫಾನ್ ಲಿರಿಕಲ್ ವಿಡಿಯೋ ರಿಲೀಸ್ (Toofan Lyrical Video Release) ಆಗುತ್ತಿದೆ ಎಂದು 'ಕೆಜಿಎಫ್‌-2' ನಿರ್ದೇಶಕ ಪ್ರಶಾಂತ್‌ ನೀಲ್‌ ಬರೆದುಕೊಂಡಿದ್ದಾರೆ. 'ಕೆಜಿಎಫ್ 2' 5 ಭಾಷೆಗಳಲ್ಲಿ ತೆರೆಗೆ ಬರುತ್ತಿದ್ದು, ಈ ಚಿತ್ರದ ಮೊದಲ ಹಾಡು ಕೂಡ 5 ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಹಾಡಿನ ಪೋಸ್ಟರ್ ಕೂಡ 5 ಭಾಷೆಗಳಲ್ಲಿ ರಿಲೀಸ್ ಮಾಡಲಾಗಿದ್ದು, ಭರ್ಜರಿ ರೆಸ್ಪಾನ್ಸ್‌ ಸಿಗುತ್ತಿದೆ.

ಇದನ್ನೂ ಓದಿ-ಬಿ-ಟೌನ್ ನಲ್ಲಿ ಬಣ್ಣದೋಕುಳಿಯ ವೈಭವ.. ಹೀಗಿತ್ತು ಬಾಲಿವುಡ್ ಸೆಲೆಬ್ರಿಟಿಗಳ ಹೋಳಿ ಸೆಲೆಬ್ರೇಶನ್!

ಒಟ್ಟಾರೆ ಹೇಳೋದಾದ್ರೆ 'ಕೆಜಿಎಫ್‌-2' ಸಿನಿಮಾ ಜಗತ್ತಿನಲ್ಲಿ ಮತ್ತೊಂದು ಬಿರುಗಾಳಿ ಎಬ್ಬಿಸೋದು ಪಕ್ಕಾ ಆಗಿದೆ. ಇನ್ನೇನು ಮಾರ್ಚ್‌ 27ಕ್ಕೆ 'ಕೆಜಿಎಫ್‌-2' ಟ್ರೈಲರ್‌ (KGF-2 Trailer) ಕೂಡ ರಿಲೀಸ್‌ ಆಗಲಿದ್ದು, ಅದಕ್ಕೂ ಮೊದಲು ಹಾಡನ್ನು ಅಭಿಮಾನಿಗಳು ಕೇಳಬಹುದಾಗಿದೆ.

ಇದನ್ನೂ ಓದಿ-The Kashmir Files: ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ Y ಕೆಟಗರಿ ಭದ್ರತೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News