ಮಲಬಾರ್ ಗೋಲ್ಡ್ ಕಂಪನಿ ವಿರುದ್ಧ ಹಿಂದೂ ಸಂಘಟನೆ ಆಕ್ರೋಶ: ಚಿನ್ನ ಖರೀದಿಸದಂತೆ ಎಚ್ಚರಿಕೆ

ನಟಿ ಕರೀನಾ ಕಪೂರ್ ಖಾನ್ ಬಳಸಿಕೊಂಡು ಹಣೆಗೆ ಕುಂಕುಮ ಹಾಗೂ ಯಾವುದೇ ಬಿಂದಿ ಇಡದೇ ಜಾಹಿರಾತು ರೂಪಿಸಲಾಗಿದೆ.

Written by - Manjunath Hosahalli | Edited by - Puttaraj K Alur | Last Updated : Apr 25, 2022, 06:25 PM IST
  • ಮಲಬಾರ್ ಗೋಲ್ಡ್ ಕಂಪನಿ ವಿರುದ್ಧ ಹಿಂದೂ ಸಂಘಟನೆ ಆಕ್ರೋಶ: ಚಿನ್ನ ಖರೀದಿಸದಂತೆ ಎಚ್ಚರಿಕೆ
  • ಮಲಬಾರ್ ಗೋಲ್ಡ್ ಕಂಪನಿಯ ವಿರುದ್ಧ ಹಿಂದೂ ಸಂಘಟನೆಗಳು ಕಿಡಿಕಾರಿವೆ
  • ಅಕ್ಷಯ ತೃತೀಯಕ್ಕೆ ಬೆಂಗಳೂರು ಸೇರಿ ಸಂಸ್ಥೆಯ ಎಲ್ಲಾ ಶಾಖೆಗಳಲ್ಲಿ ಚಿನ್ನ ಖರೀದಿಸದಂತೆ ಕರೆ
  • ಹಿಂದೂಗಳ ಬಳಿ ಮಲಬಾರ್ ಗೋಲ್ಡ್ ಕಂಪನಿ ಕ್ಷಮೆಯಾಚಿಸಬೇಕೆಂದು ಆಗ್ರಹ
ಮಲಬಾರ್ ಗೋಲ್ಡ್ ಕಂಪನಿ ವಿರುದ್ಧ ಹಿಂದೂ ಸಂಘಟನೆ ಆಕ್ರೋಶ: ಚಿನ್ನ ಖರೀದಿಸದಂತೆ ಎಚ್ಚರಿಕೆ title=
ಮಲಬಾರ್ ಗೋಲ್ಡ್ ವಿರುದ್ಧ ಆಕ್ರೋಶ

ಬೆಂಗಳೂರು: ಮಲಬಾರ್ ಗೋಲ್ಡ್ ಕಂಪನಿಯ ವಿರುದ್ಧ ಹಿಂದೂ ಸಂಘಟನೆಗಳು ಕಿಡಿಕಾರಿವೆ. ಅಕ್ಷಯ ತೃತೀಯ ಹಬ್ಬದ ಆಚರಣೆಯ ಪ್ರಯುಕ್ತ ಬೆಂಗಳೂರು ಸೇರಿದಂತೆ ಸಂಸ್ಥೆಯ ಎಲ್ಲಾ ಶಾಖೆಗಳಲ್ಲಿ ಹಿಂದೂಗಳು ಚಿನ್ನವನ್ನು ಖರೀದಿಸದಂತೆ ಹಿಂದೂ ಜನಜಾಗೃತಿ ಸಂಘಟನೆಯ ಮುಖಂಡ ಮೋಹನ್ ಗೌಡ ಕರೆಕೊಟ್ಟಿದ್ದಾರೆ.

ಅಕ್ಷಯ ತೃತೀಯ ಹಬ್ಬಕ್ಕೆ ಮಲಬಾರ್ ಗೋಲ್ಡ್ ಕಂಪನಿ ಬಿಡುಗಡೆ ಮಾಡಿರುವ ಜಾಹೀರಾತು ವಿರುದ್ಧ ಮೋಹನ್ ಗೌಡ ಕಿಡಿಕಾರಿದ್ದಾರೆ. ಕಂಪನಿಯ ಈ ಜಾಹೀರಾತಿನಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ಕಾಣಿಸಿಕೊಂಡಿದ್ದಾರೆ. ಆದರೆ, ಅವರ ಹಣೆಯಲ್ಲಿ ಯಾವುದೇ ರೀತಿ ಕುಂಕುಮ, ಬಿಂದಿ ಇಲ್ಲ. ಇದು ಹಿಂದೂ ಸಂಸ್ಕೃತಿ ವಿರೋಧಿ ಕೆಲವಾಗಿದೆ.‌ ಹೀಗಾಗಿ ಇದು ಹಿಂದೂ ಸಂಸ್ಕೃತಿಯನ್ನು ಪಾಲಿಸದ ಗೋಲ್ಡ್ ಕಂಪನಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: "ಕಾಂಗ್ರೆಸ್ ನಾಯಕರು ದಾಖಲೆಗಳಿಲ್ಲದೆ ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ"

ಕರೀನಾ ಕಪೂರ್ ಜಾಹೀರಾತಿಗೆ ಆಕ್ಷೇಪ!

ನಟಿ ಕರೀನಾ ಕಪೂರ್ ಖಾನ್ ಬಳಸಿಕೊಂಡು ಹಣೆಗೆ ಕುಂಕುಮ ಹಾಗೂ ಯಾವುದೇ ಬಿಂದಿ ಇಡದೇ ಜಾಹಿರಾತು ರೂಪಿಸಲಾಗಿದೆ. ಇದು ಹಿಂದೂ ಸಂಪ್ರದಾಯಕ್ಕೆ ನೇರವಾಗಿ ಮಾಡಿರುವ ಅಪಮಾನ. ಮಲಬಾರ್ ಗೋಲ್ಡ್ ಕಂಪನಿ ಈ ರೀತಿ ಮಾಡಿದ್ದು ಸರಿಯಲ್ಲ ಎಂದು ಮೋಹನ್ ಗೌಡ ಕಿಡಿಕಾರಿದ್ದಾರೆ.

ನ್ಯಾಯಾಲಯದಿಂದ ತಡೆ ತರುವ ಎಚ್ಚರಿಕೆ

ಈ ಬಗ್ಗೆ ಕೂಡಲೇ ಮಲಬಾರ್ ಗೋಲ್ಡ್ ಕಂಪನಿ ಹಿಂದೂಗಳ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಚಿನ್ನ ಖರೀದಿಗೆ ತಡೆಯಾಜ್ಞೆ ತರಲಾಗುತ್ತದೆ. ಅಕ್ಷಯ ತೃತೀಯ ವೇಳೆ ಚಿನ್ನ ಖರೀದಿಗೆ ನ್ಯಾಯಾಲಯದಿಂದ ತಡೆ ತರಲಾಗುತ್ತದೆ ಎಂದು ಎಚ್ಚರಿಕೆ ಸಂದೇಶ ನೀಡಿದ್ದಾರೆ.

ಇದನ್ನೂ ಓದಿ: ಪ್ರಶ್ನೆ ಪ್ರತಿಕೆ ಸೋರಿಕೆ ಪ್ರಕರಣ: ಆರೋಪಿ ಸೌಮ್ಯಾ ಬಂಧನ, ಸಂಪರ್ಕದಲ್ಲಿದ್ದವರ ವಿಚಾರಣೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News