ಕಾಂತರಾ ನೋಡಿ ಬಾಲಿವುಡ್ ನಟಿ ಕಂಗನಾ ರನೌತ್ ಹೇಳಿದ್ದೇನು?

Written by - Zee Kannada News Desk | Last Updated : Oct 21, 2022, 12:12 AM IST
  • ನಾನು ನನ್ನ ಕುಟುಂಬದೊಂದಿಗೆ ಕಾಂತಾರನನ್ನು ವೀಕ್ಷಿಸಲು ಬಂದಿದ್ದೇನೆ
  • ಈ ಸಿನಿಮಾ ನೋಡಿದ ನಂತರ ಒಂದುವಾರದ ವರೆಗೆ ಈ ಗುಂಗಿನಿಂದ ಹೊರ ಬರಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
  • ಈ ಚಿತ್ರವು ಸೆಪ್ಟೆಂಬರ್ 30 ರಂದು ಬಿಡುಗಡೆಯಾದಾಗಿನಿಂದ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ₹170 ಕೋಟಿ ಗಳಿಸಿದೆ.
ಕಾಂತರಾ ನೋಡಿ ಬಾಲಿವುಡ್ ನಟಿ ಕಂಗನಾ ರನೌತ್ ಹೇಳಿದ್ದೇನು? title=

ಕನ್ನಡದ ಕಾಂತರ ಸಿನಿಮಾ ಈಗ ಭಾರತದಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡಿಯುತ್ತಿದೆ. ಜೊತೆಗೆ ಈ ಸಿನಿಮಾ ವಿಮರ್ಶಕರು ಹಾಗೂ ಚಿತ್ರ ನಟ ನಟಿಯರ ಮೆಚ್ಚುಗೆಗೆ ಪಾತ್ರವಾಗಿದೆ.

ಈಗ ಈ ಚಿತ್ರವನ್ನು ನೋಡಿ ಮೆಚ್ಚಿಕೊಂಡವರ ಸಾಲಿಗೆ ನಟಿ ಕಂಗನಾ ರನೌತ್ ಕೂಡ ಸೇರ್ಪಡೆಯಾಗಿದ್ದಾರೆ.ಚಿತ್ರವನ್ನು ವೀಕ್ಷಿಸಿದ ನಂತರ ಅದರ ವಿಮರ್ಶೆ ಮಾಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.ಅವರು ಚಿತ್ರವನ್ನು ಶ್ಲಾಘಿಸಿದಲ್ಲದೇ ಅದನ್ನು ನಿರ್ಮಿಸಿದ್ದಕ್ಕಾಗಿ ನಿರ್ದೇಶಕ-ನಟ ರಿಷಬ್ ಶೆಟ್ಟಿ ಅವರಿಗೆ ಧನ್ಯವಾದ ಹೇಳಿದ್ದಾರೆ.

ಇದನ್ನೂ ಓದಿ : ಅಪ್ಪು ಕನಸಿನ ʼಗಂಧದಗುಡಿʼಗೆ ಅಶ್ವಿನಿ ಪುನೀತ್‌ ಧ್ವನಿ..!

ಚಿತ್ರವನ್ನು ವೀಕ್ಷಿಸಿದ ನಂತರ ತನ್ನ ಕಾರಿನಿಂದ ಸೆಲ್ಫಿ ವಿಡಿಯೋವನ್ನು ಪೋಸ್ಟ್ ಮಾಡಿದ ಕಂಗನಾ, “ನಾನು ನನ್ನ ಕುಟುಂಬದೊಂದಿಗೆ ಕಾಂತಾರನನ್ನು ವೀಕ್ಷಿಸಲು ಬಂದಿದ್ದೇನೆ ಮತ್ತು ನಾನು ಇನ್ನೂ ನಡುಗುತ್ತಿದ್ದೇನೆ.ಎಂತಹ ಭಯಾನಕ ಅನುಭವ. ರಿಷಬ್ ಶೆಟ್ಟಿ, ನಿಮಗೆ ಹ್ಯಾಟ್ಸ್ ಆಫ್. ಬರವಣಿಗೆ, ನಿರ್ದೇಶನ, ನಟನೆ, ಅದ್ಭುತ ಸಾಹಸ, ನಂಬಲಸಾಧ್ಯ! ಎಂದು ಅವರು ಹೇಳಿದ್ದಾರೆ. ಇನ್ನೂ ಮುಂದುವರೆದು ಈ ಸಿನಿಮಾ ನೋಡಿದ ನಂತರ ಒಂದು ವಾರದ ವರೆಗೆ ಈ ಗುಂಗಿನಿಂದ ಹೊರ ಬರಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಈ ಚಿತ್ರವು ಸೆಪ್ಟೆಂಬರ್ 30 ರಂದು ಬಿಡುಗಡೆಯಾದಾಗಿನಿಂದ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ₹170 ಕೋಟಿ ಗಳಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News