ಇಂಡಿಯಾದಲ್ಲೇ No.1 ಸ್ಥಾನದಲ್ಲಿ #KGFTrailer! ಎಲ್ಲೆಡೆ ಯಶ್ 'ರಾಕಿಂಗ್'...

ಇಂದು ಮಧ್ಯಾಹ್ನವಷ್ಟೇ ಬಿಡುಗಡೆಯಾದ ಕೆಜಿಎಫ್ ಚಿತ್ರದ ಕನ್ನಡ ಟ್ರೇಲರ್ ಅನ್ನು 5 ಲಕ್ಷಕ್ಕೂ ಅಧಿಕ ಮಂದಿ ಯೂಟ್ಯೂಬ್ ನಲ್ಲಿ ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲದೆ ಟ್ವಿಟ್ಟರ್ ನಲ್ಲಿ #KGFTrailer ಟ್ರೆಂಡಿಂಗ್'ನಲ್ಲಿದೆ. 

Divyashree K Divyashree K | Updated: Nov 9, 2018 , 05:57 PM IST
ಇಂಡಿಯಾದಲ್ಲೇ No.1 ಸ್ಥಾನದಲ್ಲಿ #KGFTrailer! ಎಲ್ಲೆಡೆ ಯಶ್ 'ರಾಕಿಂಗ್'...

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಷ್ಟೇ ಅಲ್ಲದೆ, ದೇಶಾದ್ಯಂತ ಭಾರೀ ಕುತೂಹಲ ಮೂಡಿಸಿದ್ದ ಯಶ್ ಅಭಿನಯದ ಕೆಜಿಎಫ್ ಚಿತ್ರದ ಟ್ರೇಲರ್ ಶುಕ್ರವಾರ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡಿದೆ. 

ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿರುವ ಕೆಜಿಎಫ್ ಸಿನಿಮಾ ಟೀಸರ್ ಇಂದು ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಟ್ವಿಟ್ಟರ್, ಫೇಸ್ ಬುಕ್, ಯೂಟ್ಯೂಬ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸುತ್ತಿದೆ. 

ಇಂದು ಮಧ್ಯಾಹ್ನವಷ್ಟೇ ಬಿಡುಗಡೆಯಾದ ಕೆಜಿಎಫ್ ಚಿತ್ರದ ಕನ್ನಡ ಟ್ರೇಲರ್ ಅನ್ನು 8 ಲಕ್ಷಕ್ಕೂ ಅಧಿಕ ಮಂದಿ ಯೂಟ್ಯೂಬ್ ನಲ್ಲಿ ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲದೆ ಟ್ವಿಟ್ಟರ್ ನಲ್ಲಿ #KGFTrailer ಟ್ರೆಂಡಿಂಗ್'ನಲ್ಲಿದೆ. ಚಿತ್ರ ವಿಮರ್ಶಕ ತರನ್ ಆದರ್ಶ್ ಕೂಡ, ಕೆಜಿಎಫ್ ಚಿತ್ರವನ್ನು ಶ್ಲಾಘಿಸಿದ್ದು, ಯಶ್, ಶ್ರೀನಿಧಿ ಶೆಟ್ಟಿ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಿತ್ರ ನಿಜಕ್ಕೂ ಅದ್ಭುತವಾಗಿದೆ ಎಂದಿದ್ದಾರೆ. 

ಉಗ್ರಂ ಫೇಮ್ ಪ್ರಶಾಂತ್ ನೀಲ್ ನಿರ್ದೇಶನದ, ರಾಕಿಂಗ್ ಸ್ಟಾರ್ ಯಶ್ ನ ಭರ್ಜರಿ ಫರ್ಫಾರ್ಮೆನ್ಸ್, ಹೊಂಬಾಳೆ ಫಿಲ್ಮ್ ಬ್ಯಾನರ್ ನ ಬಹುಕೋಟಿ ವೆಚ್ಚದ ಅದ್ಧೂರಿ ಸಿನಿಮಾ ಕೆಜಿಎಫ್ ಟೀಸರ್ ಬಿಡುಗಡೆಯಾದಾಗಲೇ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಟ್ರೇಲರ್ ರಿಲೀಸ್ ಆದ ನಂತರ ಸಿನಿಮಾ ಬಗೆಗಿನ ಕುತೂಹಲ ಮತ್ತಷ್ಟು ಹೆಚ್ಚಾದಂತಾಗಿದೆ. 

ಅಷ್ಟೇ ಅಲ್ಲದೆ, ಕೆಜಿಎಫ್ ಚಿತ್ರಕ್ಕೆ ನಟ ಕಿಚ್ಚ ಸುದೀಪ್, ಜಗ್ಗೇಶ್ ಸೇರಿದಂತೆ ಅನೇಕ ನಟರು ಚಿತ್ರಕ್ಕೆ ಶುಭ ಹಾರೈಸಿದ್ದಾರೆ.