ಸುದೀಪ್‌ ಫ್ಯಾನ್ಸ್‌ಗೆ ಹ್ಯಾಪಿ ನ್ಯೂಸ್‌.. ಮ್ಯಾಕ್ಸ್‌ ಬಳಿಕ ಮತ್ತೊಂದು ಬಿಗ್‌ ಬಜೆಟ್ ಸಿನಿಮಾದಲ್ಲಿ ಕಿಚ್ಚ !!

Kiccha Sudeep Next Movie: ಮ್ಯಾಕ್ಸ್‌ ಸಿನಿಮಾದಲ್ಲಿ ಬ್ಯುಸಿ ಇರುವ ಕಿಚ್ಚ ಸುದೀಪ್‌‌ ಜೊತೆ ಮತ್ತೊಂದು ಬಿಗ್‌ ಬಜೆಟ್‌ ಚಿತ್ರದ ಮಾತುಕತೆ ನಡೆಯುತ್ತಿರುವ ವಿಚಾರ ವೈರಲ್‌ ಆಗಿದೆ.  

Written by - Chetana Devarmani | Last Updated : Jun 2, 2024, 10:30 AM IST
  • ಸುದೀಪ್‌ ಫ್ಯಾನ್ಸ್‌ಗೆ ಖುಷಿ ವಿಚಾರ
  • ಮತ್ತೊಂದು ಬಿಗ್‌ ಬಜೆಟ್ ಸಿನಿಮಾದಲ್ಲಿ ಕಿಚ್ಚ!!
  • ಮಾತುಕತೆ ನಡೆಯುತ್ತಿರುವ ವಿಚಾರ ವೈರಲ್‌
ಸುದೀಪ್‌ ಫ್ಯಾನ್ಸ್‌ಗೆ ಹ್ಯಾಪಿ ನ್ಯೂಸ್‌.. ಮ್ಯಾಕ್ಸ್‌ ಬಳಿಕ ಮತ್ತೊಂದು ಬಿಗ್‌ ಬಜೆಟ್ ಸಿನಿಮಾದಲ್ಲಿ ಕಿಚ್ಚ !! title=

Kiccha Sudeep : ಸ್ಯಾಂಡಲ್‌ವುಡ್‌ ಬಾದ್‌ ಷಾ ಕಿಚ್ಚ ಸುದೀಪ್‌ ಅಭಿಮಾನಿಗಳು ಅವರ ಸಿನಿಮಾಗಾಗಿ ಕಾದು ಕುಳಿತಿರುತ್ತಾರೆ. ಸದ್ಯ ಮ್ಯಾಕ್ಸ್‌ ಸಿನಿಮಾದಲ್ಲಿ ಬ್ಯುಸಿ ಇರುವ ಕಿಚ್ಚ ಸುದೀಪ್‌‌ ಜೊತೆ ಮತ್ತೊಂದು ಬಿಗ್‌ ಬಜೆಟ್‌ ಚಿತ್ರದ ಮಾತುಕತೆ ನಡೆಯುತ್ತಿರುವ ವಿಚಾರ ವೈರಲ್‌ ಆಗಿದೆ.

ಮ್ಯಾಕ್ಸ್‌ ಸಿನಿಮಾದ ಬಹುಪಾಲು ಶೂಟಿಂಗ್‌ ಮುಗಿದಿದ್ದು, ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ನಡೆಯುತ್ತಿದೆ. ಈ ನಡುವೆ ಸುದೀಪ್‌ ಅವರ ಹೊಸ ಸಿನಿಮಾ ಅಪ್‌ಡೇಟ್‌ ಹೊರಬಿದ್ದಿದೆ. ಸುದೀಪ್‌ ಮತ್ತೊಂದು ಬಿಗ್‌ ಬಜೆಟ್‌ ಸಿನಿಮಾಗೆ ಶೀಘ್ರವೇ ಗ್ರೀನ್‌ ಸಿಗ್ನಲ್‌ ನೀಡಲಿದ್ದಾರೆ ಎಂದು ಹೇಳಲಾಗಿದೆ. 

ಇದನ್ನೂ ಓದಿ: ನಟಿ ಪ್ರೇಮಾ ಜೊತೆ ಲವ್‌ ಮಾಡ್ತಿದ್ರಾ ನಟ ಉಪೇಂದ್ರ? ʻಕರಿಮಣಿ ಮಾಲೀಕʼನ ಬಿಗ್‌ ಸೀಕ್ರೇಟ್ ರಿವೀಲ್‌ ಮಾಡಿದ ಚಂದನವನದ ಚೆಲುವೆ!

ಸಂದೇಶ್‌ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ಸುದೀಪ್‌ ಮುಂದಿನ ಸಿನಿಮಾ ಸೆಟ್ಟೇರಲಿದೆ ಎನ್ನಲಾಗಿದೆ. ನಿರ್ಮಾಪಕ ಎನ್ ಸಂದೇಶ್ ಹಾಗೂ ಅವರ ತಂದೆ ಮತ್ತು ಖ್ಯಾತ ನಿರ್ಮಾಪಕ ಸಂದೇಶ್ ನಾಗರಾಜ್ ಅವರು ಸುದೀಪ್ ಮನೆಗೆ ತೆರಳಿ ಈ ಬಗ್ಗೆ ಮಾತುಕತೆ ನಡೆಸಲಿದ್ದಾರೆ. 

ನಟ ಸುದೀಪ್ ಜೊತೆ ಇರುವ ಫೋಟೋವನ್ನು ಸಂದೇಶ್ ಶೇರ್ ಮಾಡಿದ್ದಾರೆ. ಜಸ್ಟ್ ವೇಟ್ ಆ್ಯಂಡ್ ವಾಚ್, ಫೆಂಟಾಸ್ಟಿಕ್ ನ್ಯೂಸ್ ಬರುತ್ತೇ ಎಂದು ಬರೆದು ಇನ್‌ಸ್ಟಾಗ್ರಾಮ್‌ನಲ್ಲಿ ಈ ಫೋಟೋ ಪೋಸ್ಟ್‌ ಮಾಡಿದ್ದಾರೆ. 

 

 

ಈ ಪೋಸ್ಟ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಕಿಚ್ಚನ ಫ್ಯಾನ್ಸ್‌ ಫುಲ್‌ ಖುಷ್‌ ಆಗಿದ್ದಾರೆ. ಕಿಚ್ಚ ಸುದೀಪ್‌ ನಟಿಸಲಿರುವ ಈ ಸಿನಿಮಾದ ಹಲವು ಬಹು ಭಾಷಾ ತಾರೆಯರು ಸಹ ಇರಲಿದ್ದಾರೆ ಎಂದು ವರದಿಯಾಗಿದೆ. 

ಇದನ್ನೂ ಓದಿ:  ಒಂದು ಕಾಲದಲ್ಲಿ ಸಮೋಸಾ ಮಾರುವವನ ಮಗಳು.. 50 ರೂಪಾಯಿಗೆ ಪರದಾಡಿದ್ದ ಈಕೆ ಇಂದು ಬಾಲಿವುಡ್‌ನ ಸ್ಟಾರ್..‌ ನೂರಾರು ಕೋಟಿ ಆಸ್ತಿಗೆ ಒಡತಿ !

Trending News