ಕೆ.ಎಲ್.ರಾಹುಲ್ ಪೋಸ್ಟ್ ಗೆ ಸುನಿಲ್‌ ಶೆಟ್ಟಿ ಪುತ್ರಿ ಅಥಿಯಾ 'ದಿಲ್ ಕಿ ದಡ್ಕನ್'...ಏನಿದು?

ರಾಜ್‌ಕೋಟ್‌ನಲ್ಲಿ ಶುಕ್ರವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 36 ರನ್‌ಗಳ ಗೆಲುವು ಸಾಧಿಸಿದ ಸಂದರ್ಭದಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿ ತಮ್ಮ ಆಲ್ರೌಂಡ್ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದರು. 

Updated: Jan 18, 2020 , 07:09 PM IST
ಕೆ.ಎಲ್.ರಾಹುಲ್ ಪೋಸ್ಟ್ ಗೆ ಸುನಿಲ್‌ ಶೆಟ್ಟಿ ಪುತ್ರಿ ಅಥಿಯಾ 'ದಿಲ್ ಕಿ ದಡ್ಕನ್'...ಏನಿದು?

ನವದೆಹಲಿ: ರಾಜ್‌ಕೋಟ್‌ನಲ್ಲಿ ಶುಕ್ರವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 36 ರನ್‌ಗಳ ಗೆಲುವು ಸಾಧಿಸಿದ ಸಂದರ್ಭದಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿ ತಮ್ಮ ಆಲ್ರೌಂಡ್ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದರು. 

ಕೆಎಲ್ ರಾಹುಲ್ 52 ಎಸೆತಗಳಲ್ಲಿ 80 ರನ್ ಗಳಿಸಿದರು ಮತ್ತು ರವೀಂದ್ರ ಜಡೇಜಾ ಅವರ ಬೌಲಿಂಗ್‌ನಲ್ಲಿ ಆಸ್ಟ್ರೇಲಿಯಾದ ನಾಯಕ ಆರನ್ ಫಿಂಚ್ ಅವರನ್ನು ಸ್ಟಂಪ್ ಔಟ್ ಮಾಡಿದ್ದು ಎಲ್ಲರನ್ನು ಹುಬ್ಬರಿಸುವಂತೆ ಮಾಡಿತ್ತು.

 
 
 
 

 
 
 
 
 
 
 
 
 

We March On ⚔🇮🇳 See you in Bangalore💙

A post shared by KL Rahul👑 (@rahulkl) on

ಈಗ ಪಂದ್ಯದ ಗೆಲುವಿನ ನಂತರ, ಕೆಎಲ್ ರಾಹುಲ್ ಎರಡನೇ ಏಕದಿನ ಪಂದ್ಯದ ಕೆಲವು ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ ಹಂಚಿಕೊಂಡಿದ್ದಾರೆ. ಕೆ.ಎಲ್. ರಾಹುಲ್ ಚಿತ್ರಗಳನ್ನು ಪೋಸ್ಟ್ ಮಾಡಿದ ಬೆನ್ನಲ್ಲೇ, ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಅವರು ಈ ಪೋಸ್ಟ್ನಲ್ಲಿ ಹಾರ್ಟ್ ಎಮೋಜಿಯನ್ನು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಈಗ ಸಾಕಷ್ಟು ಚರ್ಚೆಯ ವಿಷಯವಾಗಿದೆ.

ಅಥಿಯಾ ಶೆಟ್ಟಿ ಮತ್ತು ಕೆ.ಎಲ್.ರಾಹುಲ್ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವುದು ಇಬ್ಬರ ಇನ್ಸ್ಟಾಗ್ರಾಂ ಸ್ಟೋರಿ ಮೂಲಕ ಈಗಾಗಲೇ ಸಾಬೀತಾಗಿದೆ. ಹಲವು ಸಾರಿ ಅವರು ಜೊತೆಯಾಗಿ ಕಾಣಿಸಿಕೊಂಡಿರುವುದು ಕೂಡ ಇದಕ್ಕೆ ಪುಷ್ಟಿಕೊಟ್ಟಿದೆ.