ಬಾಯ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಖುಷಿ ಕಪೂರ್.. ಶ್ರೀದೇವಿ ಎರಡನೇ ಪುತ್ರಿಯ ಗೆಳೆಯ ಯಾರು ಗೊತ್ತಾ?

 Kushi Kapoor relationship: ಶ್ರೀದೇವಿ ಪುತ್ರಿಯರಾದ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಅವರಿಗೆ ಸಂಬಂಧಿಸಿದ ಸುದ್ದಿಗಳು ಸದಾ ಮಾಧ್ಯಮಗಳಲ್ಲಿ ಹಾಟ್ ಟಾಪಿಕ್ ಆಗಿರುತ್ತವೆ. 

Written by - Savita M B | Last Updated : Jul 31, 2024, 06:23 PM IST
  • ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಡೇಟಿಂಗ್ ಮತ್ತು ಅಫೇರ್ ಸುದ್ದಿ
  • ಈ ಸಂಬಂಧ ಕೆಲವು ಪೋಟೋಗಳು ವೈರಲ್ ಆಗಿವೆ..
 ಬಾಯ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಖುಷಿ ಕಪೂರ್.. ಶ್ರೀದೇವಿ ಎರಡನೇ ಪುತ್ರಿಯ ಗೆಳೆಯ ಯಾರು ಗೊತ್ತಾ? title=

 Kushi Kapoor: ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಡೇಟಿಂಗ್ ಮತ್ತು ಅಫೇರ್ ಸುದ್ದಿಗೆ ಬಂದರೆ ವಿಶೇಷವಾಗಿ ಹೇಳಲು ಏನೂ ಇಲ್ಲ. ಜಾಹ್ನವಿ ಕಪೂರ್ ಡೇಟಿಂಗ್ ವಿಚಾರ ಈಗಾಗಲೇ ಮಾಧ್ಯಮಗಳಲ್ಲಿ ಸಂಚಲನ ಮೂಡಿಸಿದ್ದರೆ... ಇತ್ತೀಚೆಗೆ ಆ ಪಟ್ಟಿಗೆ ಖುಷಿ ಕಪೂರ್ ಸೇರಿಕೊಂಡಿದ್ದಾರೆ. ಇತ್ತೀಚೆಗಷ್ಟೇ ತನ್ನ ಗೆಳೆಯನೊಂದಿಗೆ ಮಾಧ್ಯಮಗಳಿಗೆ ಸಿಕ್ಕಿಬಿದ್ದಿದ್ದು, ಈ ಸಂಬಂಧ ಕೆಲವು ಪೋಟೋಗಳು ವೈರಲ್ ಆಗಿವೆ.. 

 ಶ್ರೀದೇವಿ ಅವರ ಪುತ್ರಿ ಜಾನ್ವಿ ಕಪೂರ್ ಮುಂಬೈ ರಾಜಕೀಯ ಕುಟುಂಬದ ಯುವಕ ಶಿಖರ್ ಪಹಾರಿಯಾ ಅವರೊಂದಿಗೆ ಹಲವಾರು ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ತಿಳಿದಿದೆ. ಅದರಂತೆ ಖುಷಿ ಕಪೂರ್ ವಿಷಯಕ್ಕೆ ಬಂದರೆ... ಅವರು ಇತ್ತೀಚೆಗೆ ಆರ್ಚೀಸ್ ಸಿರೀಸ್‌ ಮೂಲಕ ನಟಿಯಾಗಿ ಪಾದಾರ್ಪಣೆ ಮಾಡಿದರು. 

ಇದನ್ನೂ ಓದಿ-ವಯಸ್ಸು 42, ಸ್ಟಾರ್‌ ನಟರ ಜೊತೆ ಅಫೇರ್‌, ವಿದೇಶಿಗನ ಜೊತೆ ಮದುವೆ..! ಸಖತ್‌ ಹಾಟ್‌ ಆಗಿರೋ ಈ ಬ್ಯೂಟಿಯೇ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ

ಒಟಿಟಿಯಲ್ಲಿ ಬಿಡುಗಡೆಯಾದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದರೆ ಆ ನಂತರ ದೊಡ್ಡ ಸಿನಿಮಾಗಳಲ್ಲಿ ನಟಿಸುವ ಅವಕಾಶಗಳು ಬರಲಿಲ್ಲ. ಆದರೆ, ಆಕೆ ತಮಿಳು ಸಿನಿಮಾ ಮೂಲಕ ಬೆಳ್ಳಿತೆರೆಗೆ ಪರಿಚಯವಾಗಲಿದ್ದಾರೆ ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದೆ. 

ಇದನ್ನೂ ಓದಿ-Sudeep: ನಟ ಸುದೀಪ್‌ ಸಿನಿಮಾ ಇದೇ ವಾರ ರಿಲೀಸ್‌! ಕಿಚ್ಚನ ಫ್ಯಾನ್ಸ್‌ಗೆ ಹ್ಯಾಪಿ ನ್ಯೂಸ್‌

ಆರ್ಚಿಸ್ ಸಿನಿಮಾ ಶೂಟಿಂಗ್‌ ವೇಳೆ ಖುಷಿ ಹಾಗೂ ವೇದಾಂಗ್ ರೈನಾ ಅವರೊಂದಿಗೆ ಸ್ನೇಹ ಬೆಳೆಸಿದು ಅವರ ಸಂಬಂಧವು ಪ್ರೇಮಕ್ಕೆ ತಿರುಗಿತು ಎಂದು ಬಾಲಿವುಡ್ ಮಾಧ್ಯಮ ವರದಿ ಮಾಡಿದೆ. ಅಲ್ಲದೇ ಒಟ್ಟಿಗೆಯೂ ಕಾಣಿಸಿಕೊಳ್ಳುತ್ತಿದ್ದಾರೆ.. ಇತ್ತೀಚೆಗಷ್ಟೇ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದ ಖುಷಿಯ ಮೊಬೈಲ್‌ನಲ್ಲಿ ವಾಲ್‌ಪೇಪರ್‌ನಲ್ಲಿ ಖುಷಿ, ವೇದಾಂಗ್, ಜಾನ್ವಿ ಮತ್ತು ಶಿಖರ್ ಅವರ ಫೋಟೋಗಳು ಇದ್ದುದರಿಂದ ಅವರಿಬ್ಬರ ಸಂಬಂಧದ ಸುದ್ದಿ ಸದ್ದು ಮಾಡುತ್ತಿದೆ.. 

 ಆದರೆ ಇತ್ತೀಚೆಗಷ್ಟೇ ಖುಷಿ ಮತ್ತು ವೇದಾಂಗ ಪ್ರೈವೇಟ್‌ ಟ್ರಿಪ್‌ ಪ್ಲಾನ್ ಮಾಡಿದ್ದು, ಮುಂಬೈ ವಿಮಾನ ನಿಲ್ದಾಣದಲ್ಲಿ ಇಬ್ಬರೂ ಒಂದೇ ಬಾರಿಗೆ ಕಾಣಿಸಿಕೊಂಡಿದ್ದನ್ನು ಮಾಧ್ಯಮಗಳು ಪತ್ತೆಹಚ್ಚಿವೆ.. ಹೀಗಾಗಿ ಅವರಿಬ್ಬರ ಡೇಟಿಂಗ್ ಸುದ್ದಿ ಮತ್ತೊಮ್ಮೆ ಚರ್ಚೆಗೆ ಬಂದಿದೆ.. ಇನ್ನು ವೇದಾಂಗ್‌ ರೈನಾ ಇತ್ತೀಚೆಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು, ಅವರು ಆರ್ಚಿಸ್ ಸಿರೀಸ್‌ನಲ್ಲಿ ಖುಷಿ ಕಪೂರ್ ಜೊತೆ ನಟಿಸಿದ್ದಾರೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News