ಬೆಂಗಳೂರು: ಕನ್ನಡದಲ್ಲಿ 40 ಕ್ಕೂ ಹೆಚ್ಚು ಚಲನಚಿತ್ರಗಳನ್ನು ನಿರ್ದೇಶಿಸಿದ್ದ ಹಿರಿಯ ಚಿತ್ರ ನಿರ್ದೇಶಕ ವಿಜಯ್ ರೆಡ್ಡಿಯವರು ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.
ನಿರ್ದೇಶಕ ವಿಜಯ್ ರೆಡ್ಡಿಯವರ ನಿಧನಕ್ಕೆ ಪುನೀತ್ ರಾಜಕುಮಾರ್ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ "ತಂದೆಯವರ ಮರೆಯಲಾಗದ ಸಿನಿಮಾಗಳಾದ ಗಂಧದಗುಡಿ, ಮಯೂರ, ನಾ ನಿನ್ನ ಮರೆಯಲಾರೆ ಹಾಗು ಹಲಾವಾರು ಸಿನೆಮಾಗಳನ್ನು ನಿರ್ದೇಶಿಸಿರುವ ವಿಜಯ್ ರೆಡ್ಡಿ ಅವರು ನಿಧನರಾಗಿದ್ದಾರೆ. ಅವರ ನಿರ್ದೇಶನದ ಭಕ್ತ ಪ್ರಹ್ಲಾದ ಚಿತ್ರದಲ್ಲಿ ನಾನು ನಟಿಸಿರುವುದೆ ನನ್ನ ಭಾಗ್ಯ. ಅವರ ಆತ್ಮಕ್ಕೆ ಶಾಂತಿಸಿಗಲಿ' ಎಂದು ಸಂತಾಪ ಸೂಚಿಸಿದ್ದಾರೆ.
ರಂಗಮಹಲ್ ರಹಸ್ಯ (1970) ಚಿತ್ರದ ಮೂಲಕ ನಿರ್ದೇಶನಕ್ಕೆ ಇಳಿದ ಅವರಿಗೆ 1973 ರಲ್ಲಿ ಗಂದದ ಗುಡಿ ಸಿನಿಮಾ ಸಾಕಷ್ಟು ಹೆಸರನ್ನು ತಂದಿತು ತದನಂತರ ಅವರು ಮಯೂರವನ್ನು ನಿರ್ದೇಶಿಸಿದರು.ಇದು ಮುಂದೆ ಕನ್ನಡ ಚಿತ್ರರಂಗದ ಶ್ರೇಷ್ಠ ಚಲನಚಿತ್ರಗಳಲ್ಲಿ ಒಂದಾಯಿತು.ಗಂದದ ಗುಡಿ, ಶ್ರೀ ಶ್ರೀನಿವಾಸ ಕಲ್ಯಾಣ, ಮಯೂರ, ನಾ ನಿನ್ನಾ ಮರಿಯಲಾರೆ, ಬಡವರ ಬಂಧು, ಸನಾದಿ ಅಪ್ಪಣ್ಣ ದಂತಹ ಹಿಟ್ ಚಿತ್ರಗಳನ್ನು ರಾಜಕುಮಾರ್ ಗೆ ನಿರ್ದೇಶಿಸಿದ್ದಾರೆ.
ತಂದೆಯವರ ಮರೆಯಲಾಗದ ಸಿನಿಮಾಗಳಾದ ಗಂಧದಗುಡಿ, ಮಯೂರ, ನಾ ನಿನ್ನ ಮರೆಯಲಾರೆ ಹಾಗು ಹಲಾವಾರು ಸಿನೆಮಾಗಳನ್ನು ನಿರ್ದೇಶಿಸಿರುವ ವಿಜಯ್ ರೆಡ್ಡಿ ಅವರು ನಿಧನರಾಗಿದ್ದಾರೆ. ಅವರ ನಿರ್ದೇಶನದ ಭಕ್ತ ಪ್ರಹ್ಲಾದ ಚಿತ್ರದಲ್ಲಿ ನಾನು ನಟಿಸಿರುವುದೆ ನನ್ನ ಭಾಗ್ಯ. ಅವರ ಆತ್ಮಕ್ಕೆ ಶಾಂತಿಸಿಗಲಿ. pic.twitter.com/oyd7ajbGrM
— Puneeth Rajkumar (@PuneethRajkumar) October 9, 2020
ರಾಜ್‌ಕುಮಾರ್ ಗೆ (ಗಂದದ ಗುಡಿ) ಮತ್ತು ವಿಷ್ಣುವರ್ಧನ್ ಗೆ (ಮೊಜುಗಾರ ಸೊಗಸುಗಾರ) ಅವರ 150 ನೇ ಚಲನಚಿತ್ರಗಳನ್ನು ನಿರ್ದೇಶಿಸಿದ ಹೆಗ್ಗಳಿಕೆ ಅವರದು. ಪೌರಾಣಿಕ, ಐತಿಹಾಸಿಕ, ಕಾದಂಬರಿ ಆಧಾರಿತ, ಜಾನಪದ ಮತ್ತು ಸಾಮಾಜಿಕ ನಾಟಕಗಳು ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಅವರು ಒಂಬತ್ತು ಚಲನಚಿತ್ರಗಳಲ್ಲಿ (ಎರಡು ಅತಿಥಿ ಪಾತ್ರಗಳನ್ನು ಹೊರತುಪಡಿಸಿ) ರಾಜ್‌ಕುಮಾರ್ ಅವರಿಗೆ ನಿರ್ದೇಶಿಸಿದರು.
ಆಟೋ ರಾಜಾ ಮೂಲಕ ಶಂಕರ್ ನಾಗ್‌ಗೆ ಮಾಸ್ ಇಮೇಜ್ ನೀಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು, ಇದಕ್ಕೂ ಮೊದಲು ಅವರು ತಮ್ಮ ಸಹೋದರ ಅನಂತ್ ನಾಗ್ ಅವರನ್ನು ನಾ ನಿನ್ನಾ ಬಿಡಾಲಾರೆ ನಿರ್ದೇಶಿಸಿದ್ದರು, ಇದಲ್ಲದೆ ಶಿವರಾಜ್ ಕುಮಾರ ಅವರಿಗೆ ಶಿವ ಮೆಚ್ಚಿದ ಕಣ್ಣಪ್ಪ ಮತ್ತು ಗಂದದ ಗುಡಿ ಭಾಗ 2 ಚಿತ್ರವನ್ನು ನಿರ್ದೇಶಿಸಿದ್ದರು. ಈ ಎರಡು ಚಿತ್ರಗಳಲ್ಲಿ ರಾಜಕುಮಾರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು
ಅನಿಲ್ ಕಪೂರ್ ಅಭಿನಯದ ಪ್ಯಾರ್ ಕಿಯಾ ಹೈ ಪ್ಯಾರ್ ಕರೆಂಗೆ ಹೆಸರಿನ ನಾ ನಿನ್ನಾ ಮರೆಯಲಾರೆ ಅವರ ಹಿಂದಿ ರಿಮೇಕ್ ಅನ್ನು ಅವರು ನಿರ್ದೇಶಿಸಿದ್ದರು.