Valentine Day Horoscope - ಈ ಎರಡು ಗ್ರಹಗಳ ಪ್ರಭಾವವಿರುವ ಯುವಕರ ಮೇಲೆ ಯುವತಿಯರು ಫಿದಾ

Valentine Day Horoscope - ಪ್ರೇಮಿಗಳ ದಿನಾಚರಣೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ಎರಡು ಶುಭ ಗ್ರಹಗಳ ಪ್ರಭಾವದಿಂದ ಜೀವನದಲ್ಲಿ ಅಪಾರ ಯಶಸ್ಸು ಸಿಗುತ್ತದೆ. ಇಂತಹ ಜನರು ಜೀವನವನ್ನು ಸಂಪೂರ್ಣವಾಗಿ ಆನಂದಿಸುತ್ತಾರೆ. ಗ್ರಹಗಳ ಶುಭ ಪರಿಣಾಮಗಳನ್ನು ಪಡೆಯಲು, ಕೆಟ್ಟ ಗುಣಗಳಿಂದ ದೂರವಿರಬೇಕು ಎಂದು ಜ್ಯೋತಿಷಿಗಳು ಹೇಳುತ್ತಾರೆ.

Written by - Nitin Tabib | Last Updated : Feb 11, 2022, 07:49 PM IST
  • ಶುಕ್ರ ಗ್ರಹದ ಪ್ರಭಾವ ಇವರ ಮೇಲಿರುತ್ತದೆ.
  • ಲವ್ ಪಾರ್ಟ್ನರ್ ಸಾಥ್ ಸಿಗುತ್ತದೆ
  • ಜೀವನದಲ್ಲಿ ರೋಮಾನ್ಸ್ ತುಂಬಿರುತ್ತದೆ.
Valentine Day Horoscope - ಈ ಎರಡು ಗ್ರಹಗಳ ಪ್ರಭಾವವಿರುವ ಯುವಕರ ಮೇಲೆ ಯುವತಿಯರು ಫಿದಾ title=
Valentine Day Horoscope

ನವದೆಹಲಿ: ಪ್ರೇಮಿಗಳ ದಿನಾಚರಣೆಗೆ (Valentine Day Horoscope) ಕೆಲವೇ ದಿನಗಳು ಬಾಕಿ ಉಳಿದಿವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎರಡು ಶುಭ ಗ್ರಹಗಳ ಪ್ರಭಾವದಿಂದ ಜೀವನದಲ್ಲಿ ಅಪಾರ ಯಶಸ್ಸು ಸಿಗುತ್ತದೆ. ಇಂತಹ ಜನರು ಜೀವನವನ್ನು ಸಂಪೂರ್ಣವಾಗಿ ಆನಂದಿಸುತ್ತಾರೆ. ಗ್ರಹಗಳ ಶುಭ ಪರಿಣಾಮಗಳನ್ನು ಪಡೆಯಲು, ಕೆಟ್ಟ ಗುಣಗಳಿಂದ ದೂರವಿರಬೇಕು ಎಂದು ಜ್ಯೋತಿಷಿಗಳು ಹೇಳುತ್ತಾರೆ. ಜೋತಿಷ್ಯ ಶಾಸ್ತ್ರದ ಪ್ರಕಾರ, ಯಾವ ಜನರ ಜಾತಕದಲ್ಲಿ (Zodiac Signs) ಎರಡು ಗ್ರಹಗಳು ಶುಭ ಸ್ಥಾನದಲ್ಲಿರುತ್ತವೆಯೋ, ಅವರು ಹುಡುಗಿಯರ ಮಧ್ಯೆ ತುಂಬಾ ಜನಪ್ರೀಯರಾಗಿರುತ್ತಾರೆ. ಹಾಗಾದರೆ ಬನ್ನಿ ಆ ಎರಡು ಗ್ರಹಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.

ಶುಕ್ರ ಗ್ರಹ (Venus Planet)
ಶುಕ್ರ ಪ್ರೀತಿ ಮತ್ತು ಪ್ರಣಯ ಕಾರಕ ಗ್ರಹವಾಗಿದೆ. ಜಾತಕದಲ್ಲಿ ಶುಕ್ರನ ಬಲವಿರುವ ಹುಡುಗರು ಎಲ್ಲಾ ಕ್ಷೇತ್ರದಲ್ಲೂ ಬುದ್ಧಿವಂತರಗಿರುತ್ತಾರೆ. ಅಲ್ಲದೆ, ಅವರು ಬಹಳ ಆಕರ್ಷಕವಾದ ಚಿತ್ರಣವನ್ನು ಹೊಂದಿರುತ್ತಾರೆ. ತನ್ನ ಪ್ರತಿಯೊಂದು ಕಾರ್ಯದಿಂದ ಜನರನ್ನು ಆಕರ್ಷಿಸುತ್ತಾರೆ. ಇದಲ್ಲದೆ, ಅವರು ಐಷಾರಾಮಿ ಜೀವನವನ್ನು ಆನಂದಿಸುತ್ತಾರೆ. ವ್ಯಾಪಾರದಲ್ಲಿಯೂ ಸಾಕಷ್ಟು ಪ್ರಗತಿ ಸಾಧಿಸುತ್ತಾರೆ. ಇವರ ಮೇಲೆ ಶುಕ್ರನ (Shukra Dev) ಜೊತೆಗೆ ತಾಯಿ ಲಕ್ಷ್ಮಿಯ (Goddess Lakshmi) ಕೃಪೆಯೂ ಇರುತ್ತದೆ.

ಬುಧ ಗ್ರಹ (Mercury Planet)
ಜ್ಯೋತಿಷ್ಯದ ಪ್ರಕಾರ, ಬುಧ ಗ್ರಹವು ಮಾತು, ವ್ಯವಹಾರ ಮತ್ತು ಹಾಸ್ಯ ಪ್ರಜ್ಞೆಯ ಕಾರಕ ಗ್ರಹವಾಗಿದೆ. ಜಾತಕದಲ್ಲಿ ಬುಧ ಗ್ರಹವು ಶುಭ ಸ್ಥಾನದಲ್ಲಿದ್ದರೆ, ವ್ಯಕ್ತಿಯ ಹಾಸ್ಯ ಪ್ರಜ್ಞೆಯು ತುಂಬಾ ಉತ್ತಮವಾಗಿರುತ್ತದೆ. ಇಂತಹ ಜನರು ಸಂಭಾಷಣೆಯ ಮೂಲಕ ಇನ್ನೊಬ್ಬರ ಹೃದಯವನ್ನು ಗೆಲ್ಲುತ್ತಾರೆ. ಬುಧ ಗ್ರಹದಿಂದ ಪ್ರಭಾವಿತವಾಗಿರುವ ಹುಡುಗರಿಗೆ ಹುಡುಗಿಯರು ಆಕರ್ಷಿತರಾಗುತ್ತಾರೆ. ಕನ್ಯಾ (Virgo) ಮತ್ತು ಮಿಥುನ (Gemini) ರಾಶಿಯ ಅಧಿಪತಿ ಬುಧ ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನೂ ಓದಿ-ಶುಕ್ರನ ಅನುಗ್ರಹದಿಂದ 16 ದಿನಗಳವರೆಗೆ, ಈ ರಾಶಿಚಕ್ರದ ಜನರು ಗಳಿಸುತ್ತಾರೆ ಅಪಾರ ಸಂಪತ್ತು

ಶುಕ್ರ ದೇವ ವೃಷಭ (Taurus) ಹಾಗೂ ತುಲಾ (Libra) ರಾಶಿಯ ಅಧಿಪತಿ
ಜೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರ ದೇವ ವೃಷಭ ಹಾಗೂ ತುಲಾ ರಾಶಿಗೆ ಅಧಿಪತಿ. ಈ ರಾಶಿಗಳ ಜಾತಕಗಳಲ್ಲಿ ಶುಕ್ರ ಶುಭ ಸ್ಥಾನದಲ್ಲಿದ್ದರೆ, ಜೀವನದಲ್ಲಿ ಸುಖ ಸುಖ ಸಮೃದ್ಧಿ ನೆಲೆಸಿರುತ್ತದೆ. ಜೊತೆಗೆ ಜೀವನದಲ್ಲಿ ಸಾಕಷ್ಟು ರೋಮಾನ್ಸ್ ಕೂಡ ಇರುತ್ತದೆ.

ಇದನ್ನೂ ಓದಿ-ಸ್ನೇಹಿತರ ರೂಪದಲ್ಲಿರುವ ಶತ್ರುಗಳಾಗಿರುತ್ತಾರೆ ಈ ರಾಶಿಯವರು, ನಿಮ್ಮ ಸುತ್ತಲೂ ಇದ್ದಾರಾ ನೋಡಿಕೊಳ್ಳಿ

(Disclaimer: ಇಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ಓದಿ-Mantra To Get Money: ಸಂಪತ್ತು ಪ್ರಾಪ್ತಿಗಾಗಿ ಈ ಪವರ್ ಫುಲ್ ಮಂತ್ರ ಜಪಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News