ಬಿಸಿಲ ಬೇಗೆಯಲ್ಲಿ ನಟಿ ಮಲೈಕಾ ಆರೋರಾ ಮತ್ಸ್ಯಕನ್ಯೆಯಾಗಿದ್ದು ಹೇಗೆ ಗೊತ್ತೇ..?

ಇತ್ತೀಚಿನ ದಿನಗಳಲ್ಲಿ ಅದು ಅತಿ ಸುದ್ದಿಯಲ್ಲಿರುವ ನಟಿ ಯಾರಾದರೂ ಬಾಲಿವುಡ್ ನಲ್ಲಿದ್ದರೆ..ಅದು ಮಲೈಕಾ ಆರೋರಾ!.  ತಮ್ಮ 45 ರ ಹರೆಯದಲ್ಲೂ ಯೋಗದ ಮೂಲಕ ಫಿಟ್ ನೆಟ್ ಕಾಪಾಡಿಕೊಂಡಿರುವ ಅವರು ಈಗ ಸದಾ ತಮ್ಮ ಒಂದಿಲ್ಲೊಂದು ಇನ್ಸ್ಟಾ ಪೋಸ್ಟ್ ಮೂಲಕ ಸುದ್ದಿಯಲ್ಲಿರುತ್ತಾರೆ.

Last Updated : Apr 26, 2019, 04:02 PM IST
ಬಿಸಿಲ ಬೇಗೆಯಲ್ಲಿ ನಟಿ ಮಲೈಕಾ ಆರೋರಾ ಮತ್ಸ್ಯಕನ್ಯೆಯಾಗಿದ್ದು ಹೇಗೆ ಗೊತ್ತೇ..?  title=
Photo courtesy: Instagram

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಅದು ಅತಿ ಸುದ್ದಿಯಲ್ಲಿರುವ ನಟಿ ಯಾರಾದರೂ ಬಾಲಿವುಡ್ ನಲ್ಲಿದ್ದರೆ..ಅದು ಮಲೈಕಾ ಆರೋರಾ!.  ತಮ್ಮ 45 ರ ಹರೆಯದಲ್ಲೂ ಯೋಗದ ಮೂಲಕ ಫಿಟ್ ನೆಟ್ ಕಾಪಾಡಿಕೊಂಡಿರುವ ಅವರು ಈಗ ಸದಾ ತಮ್ಮ ಒಂದಿಲ್ಲೊಂದು ಇನ್ಸ್ಟಾ ಪೋಸ್ಟ್ ಮೂಲಕ ಸುದ್ದಿಯಲ್ಲಿರುತ್ತಾರೆ.

ಅರ್ಬಾಜ್ ಖಾನ್ ರೊಂದಿಗೆ ತಮ್ಮ ವಿಚ್ಛೇದನ ಪಡೆದುಕೊಂಡ ನಂತರ ಹೆಚ್ಚಾಗಿ ಒಬ್ಬಂಟಿಯಾಗಿದ್ದ ಮಲೈಕಾ ಈಗ ಹೆಚ್ಚಾಗಿ ತಮಗಿಂತಲೂ 12 ವರ್ಷ ಕಿರಿಯರಾಗಿರುವ ಅರ್ಜುನ್ ಕಪೂರ್ ಜೊತೆ ಆಗಾಗ ಕಾಣಿಸಿಕೊಳ್ಳುವುದರ ಮೂಲಕ ಸಾಕಷ್ಟು ಸುದ್ದಿಗೆ ಕಾರಣವಾಗಿದ್ದಾರೆ.ಇತ್ತೀಚಿಗೆ ಜೊತೆಯಾಗಿ ಮಾಲ್ಡೀವ್ಸ್ ಪ್ರವಾಸಕ್ಕೆ ಹೋಗಿ ನಂತರ ವಾಪಾಸ್ ಬರುವಾಗ ಮುಂಬೈ ವಿಮಾನ ನಿಲ್ದಾಣದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು.

 
 
 
 

 
 
 
 
 
 
 
 
 

The stillness. The calm...... it’s meditative #Indianocean#mermaid#mytime

A post shared by Malaika Arora (@malaikaaroraofficial) on

ಈಗ ಅವರು ಮಾಲ್ಡೀವ್ಸ್ ಪ್ರವಾಸದಲ್ಲಿನ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಮತ್ಯಕನ್ನೆಯ ರೂಪದಲ್ಲಿ ಗಮನ ಸೆಳೆಯುತ್ತಿದ್ದಾರೆ. ಬಿಕನಿ ಧರಿಸಿ ಸುಡು ಬಿಸಿಲಿನಲ್ಲಿ ಸಮುದ್ರಕ್ಕೆ ಹಾರಿರುವ ಅವರು ಮತ್ಸ್ಯೆ ಕನ್ನೆಯಂತೆ ಈಜುತ್ತಿದ್ದಾರೆ. ಈಗ ಈ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ. 

ಇದಾದ ನಂತರ ಅರ್ಜುನ್ ಏಪ್ರಿಲ್ ತಿಂಗಳಲ್ಲೇ ಮದುವೆಯಾಗುವ ಬಗ್ಗೆ ರೂಮರ್ ಗಳು ಹರಡಿದ್ದವು.ಆದರೆ ಈ ವಿಚಾರವಾಗಿ ಇತ್ತೀಚಿಗೆ ಡಿಎನ್ಎ ಗೆ ನೀಡಿದ ಸಂದರ್ಶನದಲ್ಲಿ ಅವರು ಇಲ್ಲ ಮದುವೆಯಾಗುತ್ತಿಲ್ಲ. ತಮಗೆ ಈಗ ಕೇವಲ 33 ವಯಸ್ಸಷ್ಟೇ ಎಂದು ಹೇಳಿದ್ದರು, ಇದೇ ವೇಳೆ ಮಲೈಕಾ ಆರೋರಾ ತಮಗೆ ವಿಶೇಷ ವ್ಯಕ್ತಿ ಎಂದು ಹೇಳಿಕೊಂಡಿದ್ದರು. 

Trending News