Michael First Look: 'ಮೈಕಲ್' ಚಿತ್ರದ ಫಸ್ಟ್ ಲುಕ್ ರಿಲೀಸ್

Michael First Look: ಸಂದೀಪ್ ಕಿಶನ್, ವಿಜಯ್ ಸೇತುಪತಿ ಮುಖ್ಯಭೂಮಿಕೆಯಲ್ಲಿರುವ ಮೈಕಲ್ ಚಿತ್ರ ಒಂದಿಲ್ಲ ಒಂದು ಕಾರಣಕ್ಕೆ ಸದ್ದು ಮಾಡುತ್ತಿದೆ. ಈ ಸಿನಿಮಾ ಇನ್ನೇನು ಶೀಘ್ರದಲ್ಲಿ ರಿಲೀಸ್ ದಿನಾಂಕವನ್ನೂ ಘೋಷಿಸಲಿದೆ. ಅದಕ್ಕೂ ಮುನ್ನ ಇದೀಗ ಈ ಚಿತ್ರದ ಹೊಸದಾದ ಫಸ್ಟ್ ಲುಕ್ ಬಿಡುಗಡೆ ಆಗಿದೆ. 

Written by - Zee Kannada News Desk | Last Updated : May 8, 2022, 01:03 PM IST
  • ಸಂದೀಪ್ ಕಿಶನ್, ವಿಜಯ್ ಸೇತುಪತಿ ಮುಖ್ಯಭೂಮಿಕೆ
  • ಸಂದೀಪ್ ಕಿಶನ್ ಪ್ಯಾನ್ ಇಂಡಿಯಾ ಚಿತ್ರ ‘ಮೈಕಲ್’
  • 'ಮೈಕಲ್' ಚಿತ್ರದ ಫಸ್ಟ್ ಲುಕ್ ರಿಲೀಸ್
Michael First Look: 'ಮೈಕಲ್' ಚಿತ್ರದ ಫಸ್ಟ್ ಲುಕ್ ರಿಲೀಸ್  title=
ಮೈಕಲ್

Michael First Look: ಇತ್ತೀಚೆಗಷ್ಟೇ ಈ ಬಳಗಕ್ಕೆ ನಟ, ನಿರ್ದೇಶಕ ಗೌತಮ್ ವಾಸುದೇವ್ ಮೆನನ್ ಸೇರ್ಪಡೆಗೊಂಡಿದ್ದರು. ಇದೀಗ ಬಹುತೇಕ ಎಲ್ಲ ಕೆಲಸಗಳನ್ನು ಮುಗಿಸಿಕೊಳ್ಳಲು ಸಜ್ಜಾಗುತ್ತಿರುವ ಈ ಸಿನಿಮಾ ಇನ್ನೇನು ಶೀಘ್ರದಲ್ಲಿ ರಿಲೀಸ್ ದಿನಾಂಕವನ್ನೂ ಘೋಷಿಸಲಿದೆ. ಅದಕ್ಕೂ ಮುನ್ನ ಇದೀಗ ಈ ಚಿತ್ರದ ಹೊಸದಾದ ಫಸ್ಟ್ ಲುಕ್ ಬಿಡುಗಡೆ ಆಗಿದೆ. 

ಸಂದೀಪ್ ಕಿಶನ್, ವಿಜಯ್ ಸೇತುಪತಿ ಮುಖ್ಯಭೂಮಿಕೆಯಲ್ಲಿರುವ ಮೈಕಲ್ ಚಿತ್ರ ಒಂದಿಲ್ಲ ಒಂದು ಕಾರಣಕ್ಕೆ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ಈ ಬಳಗಕ್ಕೆ ನಟ, ನಿರ್ದೇಶಕ ಗೌತಮ್ ವಾಸುದೇವ್ ಮೆನನ್ ಸೇರ್ಪಡೆಗೊಂಡಿದ್ದರು. ಇದೀಗ ಬಹುತೇಕ ಎಲ್ಲ ಕೆಲಸಗಳನ್ನು ಮುಗಿಸಿಕೊಳ್ಳಲು ಸಜ್ಜಾಗುತ್ತಿರುವ ಈ ಸಿನಿಮಾ ಇನ್ನೇನು ಶೀಘ್ರದಲ್ಲಿ  ರಿಲೀಸ್ ದಿನಾಂಕವನ್ನೂ ಘೋಷಿಸಲಿದೆ. ಅದಕ್ಕೂ ಮುನ್ನ ಇದೀಗ ಈ ಚಿತ್ರದ ಹೊಸದಾದ ಫಸ್ಟ್ ಲುಕ್ ಬಿಡುಗಡೆ ಆಗಿದೆ. 

ಇದನ್ನೂ ಓದಿ: ರಸ್ತೆ ಅಪಘಾತ: ‘ಸಿಲ್ಲಿ ಲಲ್ಲಿ’ ಖ್ಯಾತಿಯ ನಟಿ ಸುನೇತ್ರಾ ಪಂಡಿತ್‌ಗೆ ಗಂಭೀರ ಗಾಯ

ಶ್ರೀ ವೆಂಕಟೇಶ್ವರ ಸಿನಿಮಾಸ್​ ಎಲ್ಎಲ್​ಪಿ, ಕರಣ್ ಸಿ ಪ್ರೊಡಕ್ಷನ್ಸ್ ಎಲ್​ಎಲ್​ಪಿ ಬ್ಯಾನರ್​ನಲ್ಲಿ ಭರತ್ ಚೌಧರಿ, ಪುಷ್ಕರ್ ರಾಮ್ ಮೋಹನ್ ರಾವ್ ಮೈಕಲ್ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಈ ಚಿತ್ರವನ್ನು ರಂಜಿತ್ ಜಯೆಕೊಡಿ ನಿರ್ದೇಶನ ಮಾಡುತ್ತಿದ್ದಾರೆ. ವಿಶೇಷ ಏನೆಂದರೆ, ಕೇವಲ ತೆಲುಗು ಮಾತ್ರವಲ್ಲದೆ, ಕನ್ನಡ, ತಮಿಳು, ಮಲಯಾಳಂ, ಹಿಂದಿಯಲ್ಲಿಯೂ ಈ ಸಿನಿಮಾ ಸಿದ್ಧವಾಗುತ್ತಿದೆ. 

ಮಾಸ್ ಆ್ಯಕ್ಷನ್ ಮತ್ತು ಕಮರ್ಷಿಯಲ್ ಅಂಶಗಳುಳ್ಳ ಈ ಸಿನಿಮಾ, ಸದ್ಯ ಚಿತ್ರೀಕರಣದಲ್ಲಿ ಬಿಜಿಯಾಗಿದೆ. ಈ ಚಿತ್ರದಲ್ಲಿ ಕಿಶನ್ ಗೆ ನಾಯಕಿಯರಾಗಿ ದಿವ್ಯಾಂಶ ಕೌಶಿಕ್, ವರಲಕ್ಷ್ಮಿ ಶರತ್ ಕುಮಾರ್ ನಟಿಸಿದರೆ‌, ವರುಣ್ ಸಂದೇಶ್ ಪ್ರಮುಖ ಪಾತ್ರದಲ್ಲಿದ್ದಾರೆ. 

ಇದನ್ನೂ ಓದಿ: ರಿಲೀಸ್‌ಗೂ ಮುನ್ನ 'ವಿಕ್ರಾಂತ್ ರೋಣ' ರೆಕಾರ್ಡ್‌! ದಾಖಲೆಯ ಮೊತ್ತಕ್ಕೆ ಮಾರಾಟವಾದ ಮೊದಲ ಕನ್ನಡ ಚಿತ್ರ

ಇನ್ನು ಈವರೆಗೂ ಕಂಟೆಂಟ್ ಬೇಸ್ಡ್​ ಮತ್ತು ಕಮರ್ಷಿಯಲ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ನಟ ಸಂದೀಪ್ ಕಿಶನ್, ಈ ಚಿತ್ರದಲ್ಲಿ ಹಿಂದೆಂದೂ ಕಾಣಿಸದ ಲುಕ್​ನಲ್ಲಿ ಎದುರಾಗುತ್ತಿದ್ದಾರೆ. ಈ ಸಿನಿಮಾದ ಸಲುವಾಗಿ ದೇಹವನ್ನು ಹುರಿಗೊಳಿಸಿದ್ದಾರೆ. ಸಿಕ್ಸ್ ಪ್ಯಾಕ್ ಅವತಾರ, ಖಡಕ್ ಲುಕ್, ಲಾಂಗ್ ಹೇರ್ ನಿಂದಲೇ ಹೊಸ ಸಂದೀಪ್ ಕಿಶನ್ ಮೈಕಲ್ ಸಿನಿಮಾದಲ್ಲಿ ಕಾಣಿಸಲಿದ್ದಾರೆ.. 

ವಿಜಯ್ ಸೇತುಪತಿ, ಗೌತಮ್ ಮೆನನ್ ಜತೆಗೆ ತೆರೆ ಹಂಚಿಕೊಳ್ಳುವ ಮೂಲಕ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News