close

News WrapGet Handpicked Stories from our editors directly to your mailbox

ಕಪಿಲ್ ದೇವ್ ಜೀವನ ಕುರಿತ '83' ಚಿತ್ರದ ಮೊದಲ ಲುಕ್ ಔಟ್...!

ಭಾರತದ ದಂತಕತೆ ಕ್ರಿಕೆಟ್ ಆಟಗಾರ ಕಪಿಲ್ ದೇವ್ ಅವರ 1983 ರ ಕ್ರಿಕೆಟ್ ವಿಶ್ವಕಪ್ ವಿಜಯದ ಕುರಿತ ಚಿತ್ರದ ಮೊದಲ ಲುಕ್ ನ್ನು ಚಿತ್ರದಲ್ಲಿ ಕಪಿಲ್ ದೇವ್ ಪಾತ್ರದಲ್ಲಿ ನಟಿಸುತ್ತಿರುವ ರಣವೀರ್ ಸಿಂಗ್ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಮೊದಲ ಲುಕ್ ಬಿಡುಗಡೆ ಮಾಡಿದ್ದಾರೆ.

Updated: Jul 6, 2019 , 02:53 PM IST
ಕಪಿಲ್ ದೇವ್ ಜೀವನ ಕುರಿತ '83' ಚಿತ್ರದ ಮೊದಲ ಲುಕ್ ಔಟ್...!
Photo courtesy: Instagram

ನವದೆಹಲಿ: ಭಾರತದ ದಂತಕತೆ ಕ್ರಿಕೆಟ್ ಆಟಗಾರ ಕಪಿಲ್ ದೇವ್ ಅವರ 1983 ರ ಕ್ರಿಕೆಟ್ ವಿಶ್ವಕಪ್ ವಿಜಯದ ಕುರಿತ ಚಿತ್ರದ ಮೊದಲ ಲುಕ್ ನ್ನು ಚಿತ್ರದಲ್ಲಿ ಕಪಿಲ್ ದೇವ್ ಪಾತ್ರದಲ್ಲಿ ನಟಿಸುತ್ತಿರುವ ರಣವೀರ್ ಸಿಂಗ್ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಮೊದಲ ಲುಕ್ ಬಿಡುಗಡೆ ಮಾಡಿದ್ದಾರೆ.

ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ರಣವೀರ್ ಸಿಂಗ್ " ನನ್ನ ವಿಶೇಷ ದಿನದಂದು, ಇಲ್ಲಿ ನಾನು ಹರ್ಯಾಣದ ಚಂಡ ಮಾರುತ ಕಪಿಲ್ ದೇವ್ ಅವರ 83 ಚಿತ್ರದ ಮೊದಲ ಲುಕ್  ಪ್ರಸ್ತುತಪಡಿಸುತ್ತಿದ್ದೇನೆ " ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಶಿಖರ್ ಧವನ್ ' ಪಾಜಿ ರೀತಿಯೇ ಕಾಣುತ್ತಿದ್ದಿರಿ' ಹುಟ್ಟುಹಬ್ಬದ ಶುಭಾಶಯಗಳು ಎಂದು ಹಾರೈಸಿದ್ದಾರೆ.  ರಣವೀರ್ ಸಿಂಗ್  ಅವರ ಸಹೋದ್ಯೋಗಿಗಳಾದ ಆಯುಷ್ಮಾನ್ ಖುರಾನಾ, ಅಹಾನಾ ಕುಮ್ರಾ, ಸಯಾನಿ ಗುಪ್ತಾ ಮತ್ತು ಸನ್ಯಾ ಮಲ್ಹೋತ್ರಾ ಕೂಡ ರಣವೀರ್ ಸಿಂಗ್ ಅವರನ್ನು ಹುರಿದುಂಬಿಸಿದ್ದಾರೆ.

ರಣವೀರ್ ಸಿಂಗ್  ತಮ್ಮ 9 ವರ್ಷಗಳ ಸಿನಿಮಾ ವೃತ್ತಿ ಜೀವನದಲ್ಲಿ ಈಗಾಗಲೇ  ಐತಿಹಾಸಿಕ ಪಾತ್ರಗಳನ್ನು (ಬಾಜಿರಾವ್ ಮಸ್ತಾನಿಯಲ್ಲಿ ಪೇಶ್ವಾ ಬಾಜಿರಾವ್ II ಮತ್ತು "ಪದ್ಮಾವತ್" ನಲ್ಲಿ ಅಲಾವುದ್ದೀನ್ ಖಿಲ್ಜಿ) ಎರಡು ಬಾರಿ ನಟಿಸಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಜೀವಂತ ದಂತಕತೆ ವ್ಯಕ್ತಿ ಜೀವನ ಆಧಾರಿಸಿದ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. '83 ಪ್ರಸ್ತುತ ಲಂಡನ್‌ನಲ್ಲಿ ಚಿತ್ರೀಕರಣಗೊಳ್ಳುತ್ತಿದ್ದು, ಈ ಚಿತ್ರವು 2020 ರ ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.